ನಾನೇ ಮಾತನಾಡಿದ್ರು ಉಲ್ಟಾ ಹಾಕ್ತೀರಾ! ಮಾಧ್ಯಮದವ್ರು ಕರೆಕ್ಟ್ ಇದ್ರೆ ನಮ್ ಬಾಳ್ ಹಿಂಗೇ ಯಾಕೆ ಆಗ್ತಿತ್ತು: ರಮೇಶ್ ಜಾರಕಿಹೊಳಿ ವ್ಯಥೆ

ramesh jarkiholi : ಸಿಎಂ ದೆಹಲಿಗೆ ತೆರಳ್ತಾರೆ ಅನ್ನೋ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಭೇಟಿ ಕುತೂಹಲ ಮೂಡಿಸಿದೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ರಮೇಶ್ ಜಾರಕಿಹೊಳಿ ಇತ್ತೀಚಿಗಷ್ಟೇ ಕೇದಾರನಾಥಕ್ಕೆ ಹೋಗಿ ಬಂದಿದ್ದರು.

ನಾನೇ ಮಾತನಾಡಿದ್ರು ಉಲ್ಟಾ ಹಾಕ್ತೀರಾ! ಮಾಧ್ಯಮದವ್ರು ಕರೆಕ್ಟ್ ಇದ್ರೆ ನಮ್ ಬಾಳ್ ಹಿಂಗೇ ಯಾಕೆ ಆಗ್ತಿತ್ತು: ರಮೇಶ್ ಜಾರಕಿಹೊಳಿ ವ್ಯಥೆ
ರಮೇಶ್ ಜಾರಕಿಹೊಳಿ
Updated By: ಸಾಧು ಶ್ರೀನಾಥ್​

Updated on: Oct 19, 2021 | 11:31 AM

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ಭೇಟಿ ಮಾಡಿದರು. ಸಿಎಂ ಬೊಮ್ಮಾಯಿ ದೆಹಲಿಗೆ ತೆರಳುವ ಮಾಹಿತಿ ಹಿನ್ನೆಲೆ ಸಚಿವ ಸ್ಥಾನದ ಆಕಾಂಕ್ಷಿ ಶಾಸಕ ರಮೇಶ್‌ ಸಿಎಂ ಜತೆ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು. ಬಿಎಸ್‌ವೈ ಮಾಜಿ ರಾಜಕೀಯ ಕಾರ್ಯದರ್ಶಿ ಸಂತೋಷ್ ಸಹ ಈ ವೇಳೆ ಉಪಸ್ಥಿತರಿದ್ದರು. ಬೆಂಗಳೂರಿನ ಆರ್.ಟಿ. ನಗರದ ಸಿಎಂ ನಿವಾಸದಲ್ಲಿ ಭೇಟಿ ಏರ್ಪಟ್ಟಿತ್ತು. ಸಿಎಂ ನಿವಾಸದಿಂದ ಶಾಸಕ ರಮೇಶ್ ಮತ್ತು ಸಂತೋಷ್ ವಾಪಸಾಗುವ ವೇಳೆ ಮಾಧ್ಯಮಗಳ ಎದುರು ಬಂದರು.

ಸಿಎಂ ಭೇಟಿ ಮಾಡಿದ ಬಳಿಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗಾರರೊಂದಿಗೆ ಕ್ಲುಪ್ತವಾಗಿ ಮಾತನಾಡುತ್ತಾ ನಾನೇನು ಮಾತನಾಡೋದಿಲ್ಲ ನಿಮ್ಗೆ. ನಾನೇ ಮಾತನಾಡಿದ್ರು ಉಲ್ಟಾ ಹಾಕ್ತೀರಾ! ಮಾಧ್ಯಮದವರು ಕರೆಕ್ಟ್ ಇದ್ರೆ ನಮ್ ಬಾಳ್ ಹಿಂಗೇ ಯಾಕೆ ಆಗ್ತಿತ್ತು ಎಂದು ರಮೇಶ್ ಜಾರಕಿಹೊಳಿ ವ್ಯಥೆಪಟ್ಟರು. ನಾನೇ ಮಾತನಾಡಿದ್ರು ನೀವೇ ಉಲ್ಟಾ ಬರೀತೀರಿ ಅಂತಾ ಹೇಳುತ್ತಾ ರಮೇಶ್ ಜಾರಕಿಹೊಳಿ ಸ್ಥಳದಿಂದ ಕಾಲ್ಕಿತ್ತರು.

ಸಿಎಂ ದೆಹಲಿಗೆ ತೆರಳ್ತಾರೆ ಅನ್ನೋ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಭೇಟಿ ಕುತೂಹಲ ಮೂಡಿಸಿದೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ರಮೇಶ್ ಜಾರಕಿಹೊಳಿ ಇತ್ತೀಚಿಗಷ್ಟೇ ಕೇದಾರನಾಥಕ್ಕೆ ಹೋಗಿ ಬಂದಿದ್ದರು.

CM Bommai ಜೊತೆ ಅರ್ಧಗಂಟೆಗೂ ಹೆಚ್ಚು ಕಾಲ ರಮೇಶ್​ ಜಾರಕಿಹೊಳಿ ಮೀಟಿಂಗ್|Tv9kannada

Mandya ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ಬೆಳೆಗಾರ ಕಂಗಾಲು |Heavy Rain|Benglauru|Tv9Kannada|

(minister aspirant ramesh jarkiholi meets basavaraj bommai in bangalore)

Published On - 9:59 am, Tue, 19 October 21