ದಾವಣಗೆರೆಯಲ್ಲಿ ಬೀಜದುಂಡೆ ಭೂಮಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಭೈರತಿ ಬಸವರಾಜ್

| Updated By: ಆಯೇಷಾ ಬಾನು

Updated on: Jul 15, 2021 | 1:48 PM

ಬೀಜಗಳನ್ನ ಫಲವತ್ತಾದ ಮಣ್ಣಿನಲ್ಲಿ ಉಂಟೆ ಮಾಡಿ ದಾವಣಗೆರೆ ಜಿಲ್ಲೆಯ ಕೆರೆ ಅಂಗಳ ಸರ್ಕಾರಿ ಭೂಮಿಯಲ್ಲಿ ಹಾಕಲಾಗುತ್ತದೆ. ಇದರ ಉಸ್ತುವಾರಿ ಸಂಸದ ಜಿಎಂ ಸಿದ್ದೇಶ್ವರ ಅವರು ವಹಿಸಿಕೊಂಡಿದ್ದಾರೆ.

ದಾವಣಗೆರೆಯಲ್ಲಿ ಬೀಜದುಂಡೆ ಭೂಮಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಭೈರತಿ ಬಸವರಾಜ್
ದಾವಣಗೆರೆಯಲ್ಲಿ ಬೀಜದುಂಡೆ ಭೂಮಿಗೆ ಕಾರ್ಯಕ್ರಮಕ್ಕೆ ಚಾಲನೆ
Follow us on

ದಾವಣಗೆರೆ: ಜಿಲ್ಲಾ ಬಿಜೆಪಿಯಿಂದ ವಿಶೇಷ ಕಾರ್ಯಕ್ರಮ ಆರಂಭವಾಗಿದೆ‌. ಜಿಲ್ಲೆಯಲ್ಲಿ ಬೀಜದುಂಡೆ ಭೂಮಿಗೆ ಎಂಬ ಪರಿಕಲ್ಪನೆ ಇದಾಗಿದ್ದು ಜಿಲ್ಲೆಯಲ್ಲಿ ಒಂದು ಲಕ್ಷ ಹೊನ್ನೆ, ತೇಗ, ಬೇವು, ಹುಣಸೆ ಸೇರಿದಂತೆ ವಿವಿಧ ಪ್ರಕಾರದ ಬೀಜದ ಉಂಡೆಗಳನ್ನ ಮಾಡಿ ಭೂಮಿಗೆ ಹಾಕುವ ಕೆಲಸ ಆರಂಭವಾಗಿದೆ. ದಾವಣಗೆರೆ ನಗರದ ಜಿಎಂಐಟಿ ಕಾಲೇಜು ಮೈದಾನದಲ್ಲಿ ಬಿಜೆಪಿ ಪೂರ್ಣಾವಧಿ ಕಾರ್ಯಕರ್ತರು ಅರಣ್ಯ ಇಲಾಖೆ ಸಹಾಯದಿಂದ ಇಂತಹ ಉಂಟೆ ತಯಾರಿಸುತ್ತಿದ್ದಾರೆ.

ಹೀಗೆ ಬೀಜಗಳನ್ನ ಫಲವತ್ತಾದ ಮಣ್ಣಿನಲ್ಲಿ ಉಂಟೆ ಮಾಡಿ ದಾವಣಗೆರೆ ಜಿಲ್ಲೆಯ ಕೆರೆ ಅಂಗಳ ಸರ್ಕಾರಿ ಭೂಮಿಯಲ್ಲಿ ಹಾಕಲಾಗುತ್ತದೆ. ಇದರ ಉಸ್ತುವಾರಿ ಸಂಸದ ಜಿಎಂ ಸಿದ್ದೇಶ್ವರ ಅವರು ವಹಿಸಿಕೊಂಡಿದ್ದಾರೆ. ಇಂತಹ ಬೀಜದ ಉಂಟೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರು ಚಾಲನೆ ನೀಡಿದ್ದಾರೆ.

ಪರಿಸರ ನಾಶದಿಂದ ಮನುಕುಲಕ್ಕೆ ಕಂಟಕ ಬಂದಿದೆ. ಹೆಚ್ಚು ಹೆಚ್ಚು ಅರಣ್ಯ ಬೆಳೆಸಬೇಕು ಎಂದು ಅವರು ಕರೆ ನೀಡಿದರು. ಹಲವಾರು ಜಾತಿಯ ಹಾಗೂ ಹೆಚ್ಚು ಆಮ್ಲಜನಕ ಉತ್ಪತ್ತಿ ಮಾಡುವ ಮರಗಳನ್ನ ಬೆಳೆಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಡಿಸೆಂಬರ್​ವರೆಗೂ ಬೇಡ: ಸಚಿವ ಸಂಪುಟ ಸಭೆ ತೀರ್ಮಾನ