Siddaramaiah: ಸಿದ್ದರಾಮಯ್ಯ ಸಮ್ಮುಖದಲ್ಲೇ ‘ಮುಂದಿನ ಮುಖ್ಯಮಂತ್ರಿ’ ಎಂದು ಪುನರುಚ್ಚರಿಸಿದ ಶಾಸಕ ಜಮೀರ್ ಅಹಮದ್!

Next Chief Minister:

Siddaramaiah: ಸಿದ್ದರಾಮಯ್ಯ ಸಮ್ಮುಖದಲ್ಲೇ ‘ಮುಂದಿನ ಮುಖ್ಯಮಂತ್ರಿ’ ಎಂದು ಪುನರುಚ್ಚರಿಸಿದ ಶಾಸಕ ಜಮೀರ್ ಅಹಮದ್!
ಸಿದ್ದರಾಮಯ್ಯ ಸಮ್ಮುಖದಲ್ಲೇ ‘ಮುಂದಿನ ಮುಖ್ಯಮಂತ್ರಿ’ ಎಂದು ಪುನರುಚ್ಚರಿಸಿದ ಶಾಸಕ ಜಮೀರ್ ಅಹಮದ್!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 15, 2021 | 1:30 PM

ಬೆಂಗಳೂರು: ಕಾಂಗ್ರೆಸ್‌ ಪಕ್ಷದಲ್ಲಿ ಮತ್ತೆ ‘ಮುಂದಿನ ಮುಖ್ಯಮಂತ್ರಿ’ ಹೇಳಿಕೆ ಮುನ್ನೆಲೆಗೆ ಬಂದಿದೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದು ಕಾಂಗ್ರೆಸ್​ ಶಾಸಕ, ಸಿದ್ದರಾಮಯ್ಯ ಅವರ ಆಪ್ತ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.

ಸ್ವಕ್ಷೇತ್ರ ಚಾಮರಾಜಪೇಟೆಯಲ್ಲಿ ಇಂದು ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಜಮೀರ್ ಅಹಮದ್ ಖಾನ್ ಅವರು ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು, ನೀವೆಲ್ಲ ಮತ ಹಾಕಿ ಎಂದು ಸಿದ್ದರಾಮಯ್ಯ ಸಮ್ಮುಖದಲ್ಲೇ ಹೇಳಿದ್ದು ವಿಶೇಷವಾಗಿತ್ತು. ಕುತೂಹಲಕಾರಿಯೆಂದರೆ ಜಮೀರ್ ಮಾತನ್ನ ಕೇಳಿ ಸಿದ್ದರಾಮಯ್ಯ ಸುಮ್ಮನಾದರು.

ಇದರೊಂದಿಗೆ ಮತ್ತೆ ಕಾಂಗ್ರೆಸ್ ನಲ್ಲಿ ಸಿಎಂ ರೇಸ್ ಶುರುವಾದಂತೆ ಕಾಣುತ್ತಿದೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು. ನೀವೆಲ್ಲ ವೋಟ್ ಹಾಕಬೇಕು ಎಂದು ಶಾಸಕ ಜಮೀರ್ ಹಿಂದಿಯಲ್ಲಿ ಮನವಿ ಮಾಡಿಕೊಂಡರು.

ಇತ್ತೀಚೆಗೆ ಕರ್ನಾಟಕ ಕಾಂಗ್ರೆಸ್‌ ಪಕ್ಷದಲ್ಲಿ ‘ಮುಂದಿನ ಮುಖ್ಯಮಂತ್ರಿ’ ಹೇಳಿಕೆಗಳು/ ಒತ್ತಾಸೆಗಳು ತೀವ್ರ ಚರ್ಚೆಗೆ ಗುರಿಯಾಗಿತ್ತು. ಇದರಿಂದ ಅನೇಕ ನಾಯಕರ ಮಧ್ಯೆ ಅಸಮಾಧಾನಕ್ಕೂ ಕಾರಣವಾಗಿತ್ತು. ಮಧ್ಯ ಪ್ರವೇಶಿಸಿದ್ದ ಕಾಂಗ್ರೆಸ್​​ ಹೈಕಮಾಂಡ್ ‘ಮುಂದಿನ ಮುಖ್ಯಮಂತ್ರಿ’ ಹೇಳಿಕೆಗಳನ್ನು ನೀಡಬಾರದು ಎಂದು ಎಚ್ಚರಿಸಿತ್ತು.​ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಕಡೆಯಿಂದಲೂ ‘ಮುಂದಿನ ಮುಖ್ಯಮಂತ್ರಿ’ ಹೇಳಿಕೆಗಳ ಬಗ್ಗೆ ಆಕ್ಷೇಪಣೆ ವ್ಯಕ್ತವಾಗಿತ್ತು.

ಡಿಕೆ ಶಿವಕುಮಾರ್ ‘ಮುಂದಿನ ಮುಖ್ಯಮಂತ್ರಿ’​ ಎಂದು ಬ್ಯಾಟ್​ ಬೀಸಿದ ಮಹಮ್ಮದ್ ನಲಪಾಡ್

(Chamrajpet MLA Zameer Ahmed Khan again pitches Siddaramaiah for Next Chief Minister)

Published On - 1:23 pm, Thu, 15 July 21