ಆರತಿ ಸಮಯದಲ್ಲಿ ನದಿ ಪಕ್ಕದಲ್ಲೇ ಹಾಕಿದ್ದ ವೇದಿಕೆ ಕುಸಿತ.. ಸ್ವಲ್ಪದರಲ್ಲೇ ಸಚಿವ ಸಿ.ಪಿ.ಯೋಗೇಶ್ವರ್ ಪಾರು

|

Updated on: Mar 20, 2021 | 9:56 PM

ನದಿಗೆ ಆರತಿ ಅರ್ಪಿಸುವ ಸಮಯದಲ್ಲಿ ಪಕ್ಕದಲ್ಲೇ ಹಾಕಿದ್ದ ವೇದಿಕೆ ಕುಸಿದಿರುವ ಘಟನೆ ನಗರದ ಸಸಿಹಿತ್ಲು ಬಳಿಯ ನಂದಿನಿ ನದಿಯ ಹತ್ತಿರ ನಡೆದಿದೆ. ಅದೃಷ್ಟವಶಾತ್, ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪರಿಸರ ಸಚಿವ ಸಿ.ಪಿ.ಯೋಗೇಶ್ವರ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಆರತಿ ಸಮಯದಲ್ಲಿ ನದಿ ಪಕ್ಕದಲ್ಲೇ ಹಾಕಿದ್ದ ವೇದಿಕೆ ಕುಸಿತ.. ಸ್ವಲ್ಪದರಲ್ಲೇ ಸಚಿವ ಸಿ.ಪಿ.ಯೋಗೇಶ್ವರ್ ಪಾರು
ಆರತಿ ಸಮಯದಲ್ಲಿ ನದಿ ಪಕ್ಕದಲ್ಲೇ ಹಾಕಿದ್ದ ವೇದಿಕೆ ಕುಸಿತ
Follow us on

ಮಂಗಳೂರು: ನದಿಗೆ ಆರತಿ ಅರ್ಪಿಸುವ ಸಮಯದಲ್ಲಿ ಪಕ್ಕದಲ್ಲೇ ಹಾಕಿದ್ದ ವೇದಿಕೆ ಕುಸಿದಿರುವ ಘಟನೆ ನಗರದ ಸಸಿಹಿತ್ಲು ಬಳಿಯ ನಂದಿನಿ ನದಿಯ ಹತ್ತಿರ ನಡೆದಿದೆ. ಅದೃಷ್ಟವಶಾತ್, ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪರಿಸರ ಸಚಿವ ಸಿ.ಪಿ.ಯೋಗೇಶ್ವರ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ನಂದಿನಿ ಉತ್ಸವದ ಉದ್ಘಾಟನೆ ವೇಳೆ ವೇದಿಕೆ ಕುಸಿದು ಘಟನೆ ಸಂಭವಿಸಿದೆ. ವೇದಿಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನ ನಿಂತಿದ್ದರಿಂದ ಘಟನೆ ‌ನಡೆದಿದೆ.

ನಂದಿನಿ ಉತ್ಸವದ ಉದ್ಘಾಟನಾ ಸಮಾರಂಭ

ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ನಂದಿನಿ ಉತ್ಸವದ ಉದ್ಘಾಟನೆಗೆ ಸಚಿವ ಸಿ.ಪಿ.ಯೋಗೇಶ್ವರ್​ ಆಗಮಿಸಿದ್ದರು. ಈ ವೇಳೆ, ನದಿಗೆ ಆರತಿ ಅರ್ಪಿಸಲು ಅದರ ಪಕ್ಕದಲ್ಲೇ ವಿಶೇಷವಾಗಿ ರಚಿಸಲಾಗಿದ್ದ ವೇದಿಕೆ ಮೇಲೆ ಸಚಿವರು ಹತ್ತಿದ್ದರು.

ಇದೇ ವೇಳೆ, ವೇದಿಕೆಯ ಮೇಲೆ ಅಧಿಕ ಪ್ರಮಾಣದಲ್ಲಿ ಜನರು ನಿಂತಿದ್ದರಿಂದ ಅದು ಕುಸಿದಿದೆ. ಪುಣ್ಯಕ್ಕೆ, ಸ್ಟೇಜ್ ಹಿಂಬದಿಗೆ ಮುರಿದುಬಿದ್ದ ಪರಿಣಾಮ ಸಚಿವರು ಸೇರಿದಂತೆ ಇತರೆ ಗಣ್ಯರು ನದಿಗೆ ಬೀಳುವುದರಿಂದ ಎಸ್ಕೇಪ್​ ಆಗಿದ್ದಾರೆ.

ಇದನ್ನೂ ಓದಿ: ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ 20,000 ಮತಗಳ ಅಂತರದಿಂದ ಗೆಲ್ಲುತ್ತಾರೆ -ಬಿ.ವೈ.ವಿಜಯೇಂದ್ರ