AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tv9 Impact: ಟಿವಿ9 ವರದಿ ಉಲ್ಲೇಖಿಸಿ ಅವ್ಯವಹಾರದ ಕುರಿತು ತನಿಖೆಗೆ ಆದೇಶಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವರದಿ ಕೈ ಸೇರುತ್ತಲೇ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Tv9 Impact: ಟಿವಿ9 ವರದಿ ಉಲ್ಲೇಖಿಸಿ ಅವ್ಯವಹಾರದ ಕುರಿತು ತನಿಖೆಗೆ ಆದೇಶಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ
TV9 Web
| Updated By: guruganesh bhat|

Updated on:Sep 04, 2021 | 10:36 PM

Share

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಮಂಚ, ಹಾಸಿಗೆ, ದಿಂಬು ಖರೀದಿ ಹೆಸರಲ್ಲಿ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿರುವ ಬಗ್ಗೆ ಟಿವಿ9 ವರದಿಯನ್ನು ಉಲ್ಲೇಖಿಸಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಈಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಅವರು, ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವರದಿ ಕೈ ಸೇರುತ್ತಲೇ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಕೋಟಿ ಕೋಟಿ ರೂಪಾಯಿ ಗೋಲ್‌ಮಾಲ್ ಆಗಿರುವ ಬಗ್ಗೆ ಅತ್ಯಂತ ಗಂಭೀರವಾದ ಆರೋಪ ಕೇಳಿಬಂದಿದೆ. ಅನುದಾನ ಉಳಿಕೆ ಹಣವನ್ನು ಬಳಕೆ‌ ಮಾಡುವ ಹೆಸರಿನಲ್ಲಿ ಅವ್ಯವಹಾರ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಇಲಾಖೆಯ 9 ಕೋಟಿ 81 ಲಕ್ಷ ರೂಪಾಯಿ ಹಣದಲ್ಲಿ ಭಾರೀ ಅಕ್ರಮ ಮಾಡಿರುವ ಅನುಮಾನ ಹೊರಬಿದ್ದಿದೆ. ಮಂಚ, ಹಾಸಿಗೆ, ದಿಂಬು ಖರೀದಿಯಲ್ಲಿ ಭಾರೀ ಅವ್ಯವಹಾರ ಮಾಡಲಾಗಿದೆ. ಕರ್ನಾಟಕ ರಾಜ್ಯ ತೆಂಗಿನ ನಾರು ನಿಗಮದ ಜೊತೆ ಸೇರಿ ಅಕ್ರಮ ಎಸಗಲಾಗಿದೆ ಎಂದು ಆರ್​ಟಿಐ ಕಾರ್ಯಕರ್ತ ವಾಗೀಶ್ ದಾಖಲೆ ಸಮೇತ ಆರೋಪ ಮಾಡಿದ್ದು, ಕಟ್ಟುನಿಟ್ಟಿನ ತನಿಖೆಗೆ ಆಗ್ರಹಿಸಿದ್ದಾರೆ.

ಮಾರುಕಟ್ಟೆಯಲ್ಲಿ 13 ಸಾವಿರ ರೂಪಾಯಿ ಬೆಲೆ ಇರುವ ಮಂಚಕ್ಕೆ 24,577 ರೂಪಾಯಿ ಪಾವತಿ ಮಾಡಲಾಗಿದೆ. ಜಿಲ್ಲೆಯ 102 ಹಾಸ್ಟೆಲ್​ಗಳಿಗೆ ಬರೊಬ್ಬರಿ 1124 ಮಂಚಗಳ ಖರೀದಿ ಮಾಡಲಾಗಿದ್ದು, ಇದಕ್ಕಾಗಿ 2,76,49,125 ರೂಪಾಯಿ (2 ಕೋಟಿ 76 ಲಕ್ಷದ 49 ಸಾವಿರದ 125 ರೂ) ಪಾವತಿಸಲಾಗಿದೆ. ಮಾರುಕಟ್ಟೆ ದರಕ್ಕಿಂತ 1,30,24,125 ರೂಪಾಯಿ ಹೆಚ್ಚಿಗೆ ಪಾವತಿ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.

RTI ಕಾರ್ಯಕರ್ತ ವಾಗೀಶ್​ ದಾಖಲೆ ಸಮೇತ ಹಗರಣವನ್ನು ಬಯಲು ಮಾಡಿದ್ದು, ಹಾಸಿಗೆ ಖರೀದಿಯಲ್ಲೂ ಭಾರೀ ಗೋಲ್‌ಮಾಲ್ ಮಾಡಿರುವ ಆರೋಪ ಹೊರಿಸಿದ್ದಾರೆ. 3366 ಹಾಸಿಗೆ ಖರೀದಿಗೆ ಒಟ್ಟು 2,15,82,792 ರೂ ಪಾವತಿ ಮಾಡಿದ್ದಾರೆ. ಇದನ್ನು ತೆಂಗಿನ ನಾರು ನಿಗಮದಿಂದಲೇ ಖರೀದಿ ಮಾಡಲಾಗಿದೆ. ಮಾರುಕಟ್ಟೆಯಲ್ಲಿ 3,200 ರೂಪಾಯಿ ಬೆಲೆ ಇರುವ ಹಾಸಿಗೆಗೆ 6,412 ರೂಪಾಯಿ ಪಾವತಿ ಮಾಡಲಾಗಿದೆ. ಹಾಸಿಗೆ ಖರೀದಿಯಲ್ಲೂ 1,08,11,592 ರೂಪಾಯಿ ಗುಳುಂ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಹಾಸನ: ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಕೋಟಿ ಕೋಟಿ ರೂ. ಗೋಲ್​ಮಾಲ್​ ಆರೋಪ; ತನಿಖೆಗೆ ಒತ್ತಾಯ

(Minister Kota Shrinivas Poojari ordered an inquiry into the irregularities in reference to the TV9 report)

Published On - 10:25 pm, Sat, 4 September 21