Krishna Byre Gowda: ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದರೂ ಆರ್ಥಿಕ ಶಿಸ್ತು ಕಾಪಾಡಿದ್ದೇವೆ: ಸಚಿವ ಕೃಷ್ಣಭೈರೇಗೌಡ
ಸಚಿವ ಕೃಷ್ಣಭೈರೇಗೌಡ, ಕನಸಿನ ಕರುನಾಡು ಟಿವಿ9 ಸಮ್ಮಿಟ್ 2023: ಕನಸಿನ ಕರುನಾಡು ಟಿವಿ9 ಸಮ್ಮಿಟ್ 2023: ಗ್ಯಾರಂಟಿಗಳ ಮೂಲಕ ದುಡಿಯುವ ವರ್ಗವನ್ನು ಬಲಪಡಿಸಿದ್ದೇವೆ. ಗ್ಯಾರಂಟಿಗಳನ್ನು ಜಾರಿ ಮಾಡಿದರೂ ಆರ್ಥಿಕ ಶಿಸ್ತು ಕಾಪಾಡಿದ್ದೇವೆ. ಗ್ಯಾರಂಟಿ ಯೋಜನೆಗಳು ಶೇ.90ರಷ್ಟು ಅರ್ಹ ಫಲಾನುಭವಿಗಳಿಗೆ ತಲುಪಿವೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 15: ಗ್ಯಾರಂಟಿಗಳ ಮೂಲಕ ದುಡಿಯುವ ವರ್ಗವನ್ನು ಬಲಪಡಿಸಿದ್ದೇವೆ. ಗ್ಯಾರಂಟಿಗಳನ್ನು ಜಾರಿ ಮಾಡಿದರೂ ಆರ್ಥಿಕ ಶಿಸ್ತು ಕಾಪಾಡಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದು 100 ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಟಿವಿ9 ಕನ್ನಡ ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್ನಲ್ಲಿ ಆಯೋಜಿಸಿರುವ ‘ಕನಸಿನ ಕರುನಾಡು’ (TV9 Karnataka Summit 2023) ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಿಜೆಪಿಯವರ ರೀತಿ ನಾವು ಬೆಂಕಿ ಇಡುವ ರಾಜಕಾರಣ ಮಾಡುತ್ತಿಲ್ಲ. ಮಕ್ಕಳ ಶುಲ್ಕ ಕಟ್ಟಲು ಕಷ್ಟ ಪಡುತ್ತಿರುವವರಿಗೆ ಅನುಕೂಲ ಆಗುತ್ತಿದೆ. ಬಡವರಿಗೆ ಅನುಕೂಲ ಮಾಡಿಕೊಡಲು ‘ಗೃಹಲಕ್ಷ್ಮೀ’ ಯೋಜನೆ ಜಾರಿ ಮಾಡಲಾಗಿದೆ. ಆ ಮೂಲಕ ಗ್ಯಾರಂಟಿ ಯೋಜನೆಗಳು ಶೇ.90ರಷ್ಟು ಅರ್ಹ ಫಲಾನುಭವಿಗಳಿಗೆ ತಲುಪಿವೆ. ಶೇಕಡಾ 10ರಷ್ಟು ಶ್ರೀಮಂತರಿಗೂ ತಲುಪಿರಬಹುದು ಎಂದು ತಿಳಿಸಿದರು.
ಇದನ್ನೂ ಓದಿ: Siddaramaiah Speech: ಗ್ಯಾರಂಟಿ ಯೋಜನೆಗಳನ್ನು ದೇಶಕ್ಕೆ ತಿಳಿಸುವ ಕೆಲಸ ಮಾಡಲಾಗುತ್ತಿದೆ: ಸಿದ್ದರಾಮಯ್ಯ
ಎಲ್ಲಾ ದೇಶಗಳಲ್ಲಿ ನೆರ ತೆರಿಗೆ ಜಾಸ್ತಿ ಇದೆ. ಅದೇ ರೀತಿಯಾಗಿ ಜಿಎಸ್ಟಿ ಕಡಿಮೆ ಇದೆ. ಆದರೆ ನಮ್ಮ ದೇಶದಲ್ಲಿ ಅದು ಊಲ್ಟಾ ಇದೆ. ಶ್ರೀಮಂತರು ಕಟ್ಟುತ್ತಿರುವ ತೆರಿಗೆಯನ್ನು ಕಟ್ಟು ಮಾಡಿ, ಜನರು ಕಟ್ಟುವ ತೆರಿಗೆಗಳನ್ನು ಜಾಸ್ತಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Ramalinga Reddy: ಇನ್ಮುಂದೆ ಸಾರಿಗೆ ಸಿಬ್ಬಂದಿಗೂ ಪಿಂಚಣಿ; ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಘೋಷಣೆ
ಉದ್ಯೋಗ ಖಾತ್ರಿ ಯೋಜನೆಯಿಂದ ಜನರು ಬಡತನದಿಂದ ಹೊರಬಂದಿದ್ದಾರೆ. ಉದ್ಯೋಗ ಖಾತ್ರಿ ಭಾರತದಲ್ಲಿ ಒಂದು ಕ್ರಾಂತಿ ಮಾಡಿದೆ. ಅದೇ ರೀತಿಯಾಗಿ ಆಹಾರ ಭದ್ರತಾ ಯೋಜನೆ ಮೂಲಕ ದೇಶ ಎಲ್ಲ ಬಡವರಿಗೆ ಉಚಿತ ಅಕ್ಕಿ ಸಿಗುತ್ತಿದೆ. ಆಗಲೂ ದೇಶ ಹಾಳಾಗುತ್ತೆ ಎಂದು ಹೇಳಿದ್ದರು. ಆದರೆ ದೇಶದ ಜನರಿಗೆ ಇದು ಉಪಯೋಗವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:18 pm, Fri, 15 September 23