ಮಂತ್ರಾಲಯದ ಕರ್ನಾಟಕ ಛತ್ರದ ಕಳಪೆ ಕಾಮಗಾರಿ: ಲೋಕಾಯುಕ್ತ ತನಿಖೆಗೆ ಆದೇಶಿಸಿದ ಸರ್ಕಾರ

ಮಂತ್ರಾಲಯದಲ್ಲಿ ಕರ್ನಾಟಕ ಸರ್ಕಾರದಿಂದ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕರ್ನಾಟಕ ಭವನದ (ಛತ್ರ) ಕಾಮಗಾರಿ ಕಳಪೆಯಾಗಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಲೋಕಾಯುಕ್ತ ತನಿಖೆಗೆ ಆದೇಶಿಸಿದೆ.

ಮಂತ್ರಾಲಯದ ಕರ್ನಾಟಕ ಛತ್ರದ ಕಳಪೆ ಕಾಮಗಾರಿ: ಲೋಕಾಯುಕ್ತ ತನಿಖೆಗೆ ಆದೇಶಿಸಿದ ಸರ್ಕಾರ
ಮಂತ್ರಾಲಯದಲ್ಲಿರುವ ಕರ್ನಾಟಕ ಭವನ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Jun 18, 2024 | 5:38 PM

ಬೆಂಗಳೂರು, (ಜೂನ್.18): ಮಂತ್ರಾಲಯದಲ್ಲಿ (mantralaya) 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕರ್ನಾಟಕ ಭವನದ ಕಾಮಗಾರಿ ಕಳಪೆಯಾಗಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಲೋಕಾಯುಕ್ತರಿಗೆ (lokayukta investigation) ನೀಡಿ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ (Minister ramalinga reddy) ಆದೇಶಿದ್ದಾರೆ. ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಹಾಗೂ ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ತನಿಖೆಯನ್ನು ನಡೆಸಲು ಪ್ರಕರಣವನ್ನು ಲೋಕಾಯುಕ್ತರವರಿಗೆ ವಹಿಸಲು ಆದೇಶಿಸಿದೆ ಎಂದು ಸಚಿವ ರಾಮಲಿಂಗ ರೆಡ್ಡಿ ಅವರು ಕಂದಾಯ ಇಲಾಖೆ ಮುಜರಾಯಿ ವಿಭಾಗದ ಸರ್ಕಾರದ ಪ್ರಧಾನ ಕಾರ್ಯದರ್ಶಿಗೂ ಪತ್ರ ಬರೆದಿದ್ದಾರೆ.

ಕರ್ನಾಟಕದಿಂದ ಮಂತ್ರಾಲಯಕ್ಕೆ ಹೋಗುವ ಭಕ್ತಾಧಿಗಳಿಗೆ ಅನುಕೂಲವಾಗುವಂತೆ 100 ಕೊಠಡಿಗಳ ಅತಿಥಿಗೃಹ ನಿರ್ಮಾಣ ಮಾಡಲು 5 ಕೋಟಿ ರೂ.ಗಳನ್ನು 2010ರಲ್ಲಿ ಮಂಜೂರು ಮಾಡಲಾಗಿತ್ತು. ಈ ವೆಚ್ಚದಲ್ಲಿ 2019ರಲ್ಲಿ 100 ಕೊಠಡಿಗಳ ಕರ್ನಾಟಕ ಭವನ (ಛತ್ರ) ನಿರ್ಮಾಣ ಮಾಡಿ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗಿತ್ತು. ಆದ್ರೆ, ಕಾಮಗಾರಿಯಲ್ಲಿ ಕಳಪೆಯಾಗಿದೆ ಎಂದು ಆರೋಪ ಕೇಳಿಬಂದಿದೆ. ಗೋಡೆಗಳು ಬಿರುಕು ಮೂಡಿದ್ದು, ಕೊಠಡಿಗಳಲ್ಲಿ ನೀರು ಸೋರಿಕೆ, ವಿದ್ಯುತ್ ಸಂಪರ್ಕದ ಅವ್ಯವಸ್ಥೆ, ಚರಂಡಿಗೆ ಸಂಪರ್ಕ ಕಲ್ಪಿಸಿದ ಪೈಪ್‌ಗಳ ಸೋರಿಕೆ, ಕಟ್ಟಡಕ್ಕೆ ಅಳವಡಿಸಿದ ಟೈಲ್ಸ್ ಗಳು ತುಂಬಾ ಹಾನಿಗೊಳಗಾಗಿದೆ, ಬಿಸಿ ನೀರಿಗೆ ಅಳವಡಿಸಿದ ಗೀಸರ್‌ಗಳು ಕಾರ್ಯನಿರ್ವಹಿಸುತ್ತಿರುವುದಿಲ್ಲ.

ಇದನ್ನೂ ಓದಿ: ಆಶ್ರಮ ಶಾಲೆ, ದಲಿತ ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ; ಅಧಿಕಾರಿಗಳಿಗೆ ಸಿಎಂ ತರಾಟೆ

ಅಲ್ಲದೇ ಪ್ರತಿಯೊಂದು ಕೊಠಡಿಗಳ ಡೋರ್, ಕಿಟಕಿ, ಪೀಟೋಪಕರಣಗಳು ಕಳಪೆ ಗುಣಮಟ್ಟದ್ದಾಗಿರುವುದಾಗಿ ಆರೋಪವಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಎಂದು ವರದಿ ಮೂಲಕ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಹಾಗೂ ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ತನಿಖೆಯನ್ನು ನಡೆಸಲು ಪ್ರಕರಣವನ್ನು ಲೋಕಾಯುಕ್ತರವರಿಗೆ ವಹಿಸಿ ಸಚಿವ ರಾಮಲಿಂಗ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಸಚಿವ ರಾಮಲಿಂಗ ರೆಡ್ಡಿ ಅವರು ಕಂದಾಯ ಇಲಾಖೆ ಮುಜರಾಯಿ ವಿಭಾಗದ ಸರ್ಕಾರದ ಪ್ರಧಾನ ಕಾರ್ಯದರ್ಶಿಗೂ ಪತ್ರ ಬರೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕಾಂಗ್ರೆಸ್​ ಕಾರ್ಯಕರ್ತರಿಂದ ಸಿಎಂ ಆಪ್ತ, ಮುಡಾ ಅಧ್ಯಕ್ಷನಿಗೆ ಘೇರಾವ್​
ಕಾಂಗ್ರೆಸ್​ ಕಾರ್ಯಕರ್ತರಿಂದ ಸಿಎಂ ಆಪ್ತ, ಮುಡಾ ಅಧ್ಯಕ್ಷನಿಗೆ ಘೇರಾವ್​