ಸಿಸಿಬಿ ವಿಚಾರಣೆ ಬಳಿಕ ರಾಮುಲು ಪಿಎ ರಾಜು ಫೇಸ್​ಬುಕ್​ನಲ್ಲಿ ಸ್ಪಷ್ಟೀಕರಣ: ತಪ್ಪು ಗ್ರಹಿಕೆಯಿಂದ ವಿಜಯೇಂದ್ರ ದೂರು ಸಲ್ಲಿಸಿದ್ದಾರೆ

| Updated By: ganapathi bhat

Updated on: Jul 02, 2021 | 5:19 PM

Minister Sriramulu PA Raju: ದೂರು ಕೊಡುವ ಮುನ್ನ ನನ್ನನ್ನ ಕರೆಯಿಸಿ ಮಾತನಾಡಿದ್ರೆ ಸತ್ಯಾಂಶ ಗೊತ್ತಾಗುತ್ತಿತ್ತು. ನಾನು ಯಾವುದೇ ತಪ್ಪು ಮಾಡಿಲ್ಲ, ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಕಷ್ಟ ಪಟ್ಟು ದುಡಿಯುವ ವ್ಯಕ್ತಿ ಅಡ್ಡದಾರಿ ಹಿಡಿಯುವವನಲ್ಲ. ನಾನು ಆಘಾತಕ್ಕೆ ಒಳಗಾಗಿದ್ದೇನೆ - ರಾಮುಲು ಪಿಎ ರಾಜು

ಸಿಸಿಬಿ ವಿಚಾರಣೆ ಬಳಿಕ ರಾಮುಲು ಪಿಎ ರಾಜು ಫೇಸ್​ಬುಕ್​ನಲ್ಲಿ ಸ್ಪಷ್ಟೀಕರಣ: ತಪ್ಪು ಗ್ರಹಿಕೆಯಿಂದ ವಿಜಯೇಂದ್ರ ದೂರು ಸಲ್ಲಿಸಿದ್ದಾರೆ
ಸಿಸಿಬಿ ವಿಚಾರಣೆ ಬಳಿಕ ರಾಮುಲು ಪಿಎ ರಾಜು ಫೇಸ್​ಬುಕ್​ನಲ್ಲಿ ಸ್ಪಷ್ಟೀಕರಣ: ತಪ್ಪು ಗ್ರಹಿಕೆಯಿಂದ ವಿಜಯೇಂದ್ರ ದೂರು ಸಲ್ಲಿಸಿದ್ದಾರೆ
Follow us on

ಬಳ್ಳಾರಿ: ಸಿಸಿಬಿ ಪೊಲೀಸರಿಂದ ರಾಮುಲು ಪಿಎ ರಾಜು ಬಂಧನದ ಕೇಸ್ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದ ಸಿಸಿಬಿ ವಿಚಾರಣೆಗೊಳಗಾಗಿದ್ದ ಸಮಾಜ ಕಲ್ಯಾಣ  ಸಚಿವ ಶ್ರೀರಾಮುಲು ಅವರ ಆಪ್ತ ಕಾರ್ಯದರ್ಶಿ ರಾಜು ಇಂದು ಫೇಸ್​ಬುಕ್ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.

ಕಳೆದ 20 ವರ್ಷಗಳಿಂದ ಸಚಿವ ರಾಮುಲು ಅವರ ನೆರಳಿನಲ್ಲಿ ಬದುಕುತ್ತಿದ್ದೇನೆ. ಶ್ರೀರಾಮುಲು ಅವರಿಗಾಗಲಿ ಬೇರೆಯವರಿಗೆ ಆಗಲಿ ಕಳಂಕ ತರುವ ಕೆಲ್ಸ ಎಂದೂ ಮಾಡಿಲ್ಲ. ವಿಜಯೇಂದ್ರ ಕುರಿತ ಯಾವುದೇ ಆಡಿಯೋದಲ್ಲಿ ನಾನು ಭಾಗಿಯಾಗಿಲ್ಲ. ಪೊಲೀಸರು ವಿಚಾರಣೆ ವೇಳೆ ಆಡಿಯೋ ಕೇಳಿಸಿದ್ದಾರೆ. ಆ ಆಡಿಯೋ ನನ್ನದಲ್ಲ ಅನ್ನೋದು ನನ್ನ ಧ್ವನಿಯಿಂದ ಗೊತ್ತಾಗಿದೆ. ತಪ್ಪು ಗ್ರಹಿಕೆಯಿಂದ ವಿಜಯೇಂದ್ರ ದೂರು ಸಲ್ಲಿಸಿದ್ದಾರೆ ಎಂದು ಸಚಿವ ರಾಮುಲು ಪಿಎ ರಾಜು ಫೇಸ್​ಬುಕ್​ ಸ್ಪಷ್ಟೀಕರಣದಲ್ಲಿ ತಿಳಿಸಿದ್ದಾರೆ.

ದೂರು ಕೊಡುವ ಮುನ್ನ ನನ್ನನ್ನ ಕರೆಯಿಸಿ ಮಾತನಾಡಿದ್ರೆ ಸತ್ಯಾಂಶ ಗೊತ್ತಾಗುತ್ತಿತ್ತು. ನಾನು ಯಾವುದೇ ತಪ್ಪು ಮಾಡಿಲ್ಲ, ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಕಷ್ಟ ಪಟ್ಟು ದುಡಿಯುವ ವ್ಯಕ್ತಿ ಅಡ್ಡದಾರಿ ಹಿಡಿಯುವವನಲ್ಲ. ನಾನು ಆಘಾತಕ್ಕೆ ಒಳಗಾಗಿದ್ದೇನೆ. ನನ್ನ ಕುಟುಂಬ ನೋವಿನಲ್ಲಿದೆ ಅಂತಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ರಾಜು ಬರೆದುಕೊಂಡಿದ್ದಾರೆ.

(Minister sriramulu pa raju facebook clarification on his alleged cheating case)

Published On - 4:54 pm, Fri, 2 July 21