MSIL ಮದ್ಯ ಮಳಿಗೆಯಲ್ಲಿ ಉದ್ಯೋಗಕ್ಕೆ ಸಚಿವರ ಶಿಫಾರಸ್ಸು ಪತ್ರ! ಹೈಕೋರ್ಟ್​ ಹೇಳಿದ್ದೇನು?

ಬೆಂಗಳೂರು: ಇಬ್ಬರು ಯುವಕರಿಗೆ MSIL ಮದ್ಯದ ಅಂಗಡಿಯಲ್ಲಿ ನೌಕರಿ ನೀಡಲು ಶಿಫಾರಸು ಮಾಡಿದ್ದ ಸಚಿವರ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸಚಿವರು ತಮ್ಮ ಶಿಫಾರಸು ಪತ್ರವನ್ನು ಹಿಂಪಡೆದಿದ್ದಾರೆ ಎಂದು ತಿಳಿದುಬಂದಿದೆ. ಪಶು ಸಂಗೋಪನೆ ಸಚಿವ ಪ್ರಭು ಚವಾಣ್​​ ಇಬ್ಬರು ಯುವಕರಿಗೆ MSIL ಮದ್ಯ ಮಳಿಗೆಯಲ್ಲಿ ಕೆಲಸ ನೀಡುವಂತೆ ಶಿಫಾರಸು ಮಾಡಿದ್ದರು. ಈ ವಿಷಯ ತಿಳಿದ ಬೀದರ್​ನ ಸೋಮನಾಥ್ ಎಂಬುವವರು ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸಚಿವರ ಕಾರ್ಯಕ್ಕೆ […]

MSIL ಮದ್ಯ ಮಳಿಗೆಯಲ್ಲಿ ಉದ್ಯೋಗಕ್ಕೆ ಸಚಿವರ ಶಿಫಾರಸ್ಸು ಪತ್ರ! ಹೈಕೋರ್ಟ್​ ಹೇಳಿದ್ದೇನು?
ಸಾಧು ಶ್ರೀನಾಥ್​

Updated on: Aug 12, 2020 | 6:45 PM

ಬೆಂಗಳೂರು: ಇಬ್ಬರು ಯುವಕರಿಗೆ MSIL ಮದ್ಯದ ಅಂಗಡಿಯಲ್ಲಿ ನೌಕರಿ ನೀಡಲು ಶಿಫಾರಸು ಮಾಡಿದ್ದ ಸಚಿವರ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸಚಿವರು ತಮ್ಮ ಶಿಫಾರಸು ಪತ್ರವನ್ನು ಹಿಂಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಪಶು ಸಂಗೋಪನೆ ಸಚಿವ ಪ್ರಭು ಚವಾಣ್​​ ಇಬ್ಬರು ಯುವಕರಿಗೆ MSIL ಮದ್ಯ ಮಳಿಗೆಯಲ್ಲಿ ಕೆಲಸ ನೀಡುವಂತೆ ಶಿಫಾರಸು ಮಾಡಿದ್ದರು. ಈ ವಿಷಯ ತಿಳಿದ ಬೀದರ್​ನ ಸೋಮನಾಥ್ ಎಂಬುವವರು ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸಚಿವರ ಕಾರ್ಯಕ್ಕೆ ತೀವ್ರ ಅಸಮಾಧಾನ ಹೊರಹಾಕಿದೆ.

ಸರ್ಕಾರಿ ಸಂಸ್ಥೆಗೆ ಯಾವುದೇ ರೀತಿಯ ಶಿಫಾರಸು ಪತ್ರ ಕಳಿಸುವುದು ಸರಿಯಾದ ಕ್ರಮವಲ್ಲವೆಂದು ಸಚಿವರಿಗೆ ತಾಕೀತು ಮಾಡಿದೆ. ಈ ಹಿನ್ನೆಲೆಯಲ್ಲಿ ಶಿಫಾರಸು ಪತ್ರವನ್ನು ಹಿಂಪಡೆಯುವುದಾಗಿ ಸಚಿವರ ಪರ ವಕೀಲ ಹೈಕೋರ್ಟಿಗೆ ಮಾಹಿತಿ ನೀಡಿದ್ದಾರೆ. ಆದರೆ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿ ಆದೇಶ ಹೊರಡಿಸಿದೆ.

Published On - 6:43 pm, Wed, 12 August 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us