ತುಮಕೂರು: ನಿಧಿ ಆಸೆಗಾಗಿ ಮಧ್ಯ ರಾತ್ರಿ ದೇವಸ್ಥಾನದ ಬಂಡೆ ಕೊರೆದ ಕಿಡಿಗೇಡಿಗಳು

| Updated By: ಆಯೇಷಾ ಬಾನು

Updated on: Aug 04, 2024 | 10:19 AM

ವಡ್ಢರಹಳ್ಳಿ ಗ್ರಾಮದ ಬನವಾಸಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಕೆಲ ಕಿಡಿಗೇಡಿಗಳು ನಿಧಿ ಶೋಧ ನಡೆಸಿದ್ದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ನಿಧಿಗಾಗಿ ಮಧ್ಯರಾತ್ರಿ ದೇವಸ್ಥಾನದ ಬಳಿ ಮೂರು ಕಡೆ ಬಂಡೆ ಕೊರೆದಿದ್ದಾರೆ. ದೇವಸ್ಥಾನಕ್ಕೆ ಗ್ರಾಮಸ್ಥರೆಲ್ಲ ಭೇಟಿ ನೀಡಿದ್ದು ದೇವಸ್ಥಾನಕ್ಕೆ ಭದ್ರತೆ ಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ತುಮಕೂರು, ಆಗಸ್ಟ್.04: ತುಮಕೂರು ತಾಲೂಕಿನಲ್ಲಿರುವ ವಡ್ಢರಹಳ್ಳಿ ಗ್ರಾಮದ ಬನವಾಸಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಕೆಲ ಕಿಡಿಗೇಡಿಗಳು ನಿಧಿ ಶೋಧ ನಡೆಸಿದ್ದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ನಿಧಿಗಾಗಿ ಮಧ್ಯರಾತ್ರಿ ದೇವಸ್ಥಾನದ ಬಳಿ ಮೂರು ಕಡೆ ಬಂಡೆ ಕೊರೆದಿದ್ದಾರೆ. ಅರಿಶಿನ, ಕುಂಕುಮ, ತೆಂಗಿನಕಾಯಿ ಹಾಗೂ ವಸ್ತ್ರವನ್ನಿಟ್ಟು ಕಿಡಿಗೇಡಿಗಳು ಪೂಜೆ ಮಾಡಿದ್ದಾರೆ. ಬಳಿಕ ನಿಧಿ ಸಿಗದೇ ಅರ್ಧಕ್ಕೆ ಬಿಟ್ಟು ಪರಾರಿಯಾಗಿದ್ದಾರೆ.

ದೇವಸ್ಥಾನಕ್ಕೆ ಪೂಜೆ ಮಾಡಲು ಬಂದ ಅರ್ಚಕರು ನಿಧಿಗೆ ಶೋಧ ನಡೆದಿರುವುದನ್ನು ಕಂಡು ಬಿಚ್ಚಿಬಿದ್ದಿದ್ದಾರೆ. ದೇವಸ್ಥಾನಕ್ಕೆ ಗ್ರಾಮಸ್ಥರೆಲ್ಲ ಭೇಟಿ ನೀಡಿದ್ದು ದೇವಸ್ಥಾನಕ್ಕೆ ಭದ್ರತೆ ಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:17 am, Sun, 4 August 24

Follow us on