ಬೆಂಗಳೂರು: ರಾಜ್ಯದಲ್ಲಿ ಎರಡು ಕಡೆ ಇಂತಹ ಭೀಕರ ಘಟನೆ ನಡೆದಿದೆ. ಈ ಸುದ್ದಿ ಕೇಳಿ ಕೂತಲ್ಲೇ ಬೆಚ್ಚಿಬೀಳಬಹುದು, ಜಿಟಿಜಿಟಿ ಮಳೆ ನಡುವೆಯೂ ಬೆವರುವಂತೆ ಮಾಡಬಹುದು. ಯಾಕಂದ್ರೆ ಇದು ಬಿಹಾರದ್ದೋ, ಉತ್ತರಪ್ರದೇಶದ್ದೋ ಕ್ರೈಂ ಕಹಾನಿಯಲ್ಲ. ನಮ್ಮದೇ ರಾಜ್ಯದಲ್ಲಿ ನಿನ್ನೆ ನಡೆದ ಎರಡು ಆಘಾತಕಾರಿ ಅಟ್ಯಾಕ್ಗಳಿವು.. ಅಂದಹಾಗೆ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಪಟ್ಟಣದ ನಿವಾಸಿ, ಆರ್ಟಿಐ ಕಾರ್ಯಕರ್ತ ವೆಂಕಟೇಶ್ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮಾರಕಾಸ್ತ್ರಗಳೊಂದಿಗೆ ಅಟ್ಯಾಕ್ ಮಾಡಿದ ದುಷ್ಕರ್ಮಿಗಳು ವೆಂಕಟೇಶ್ರ ಬಲಗೈ ಹಾಗೂ ಬಲ ಕಾಲನ್ನು ಕತ್ತರಿಸಿಬಿಟ್ಟಿದ್ದಾರೆ. ತಮ್ಮ ಕಚೇರಿಯಲ್ಲಿದ್ದ ವೆಂಕಟೇಶ್ರನ್ನು ಹೊರಗೆಳೆದು ಸಿನಿಮೀಯ ಶೈಲಿಯಲ್ಲಿ ಅಟ್ಯಾಕ್ ಮಾಡಿ ಕೈ, ಕಾಲು ಕಟ್ ಮಾಡಿ ಪರಾರಿಯಾಗಿದ್ದಾರೆ.
ವಿಜಯನಗರಲ್ಲಿ ಆರ್ಟಿಐ ಕಾರ್ಯಕರ್ತನ ಬರ್ಬರ ಹತ್ಯೆ
ಅತ್ತ ತಾವರೆಕೆರೆಯಲ್ಲಿ ಆರ್ಟಿಐ ಕಾರ್ಯಕರ್ತನನ್ನು ಟಾರ್ಗೆಟ್ ಮಾಡಿದ್ದ ಗ್ಯಾಂಗ್ ಭೀಕರ ಅಟ್ಯಾಕ್ ಮಾಡಿದ್ರೆ ಇತ್ತ ವಿಜಯನಗರದಲ್ಲೂ ಆರ್ಟಿಐ ಕಾರ್ಯಕರ್ತನ ಮೇಲೆ ರಾಡ್ನಿಂದ ಹೊಡೆದು ಮರ್ಡರ್ ಮಾಡಲಾಗಿದೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ಎಡಿಬಿ ಕಾಲೇಜು ಬಳಿ ವಾಕಿಂಗ್ ಮಾಡ್ತಿದ್ದ ಆರ್ಟಿಐ ಕಾರ್ಯಕರ್ತ ವಾಲ್ಮೀಕಿ ನಗರದ ನಿವಾಸಿ ಶ್ರೀಧರ್ರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಒಟ್ನಲ್ಲಿ ದೂರದ ಬಿಹಾರ, ಉತ್ತರಪ್ರದೇಶ ಶೈಲಿಯಲ್ಲೇ ರಾಜ್ಯದಲ್ಲೂ ಆರ್ಟಿಐ ಕಾರ್ಯಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರ ಹತ್ಯೆ ನಡೆದಿರೋದು ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಇದನ್ನೂ ಓದಿ: Shocking News: ಬಾವಿಗೆ ಬಿದ್ದ 8 ವರ್ಷದ ಬಾಲಕಿಯನ್ನು ರಕ್ಷಿಸಲು ಹೋಗಿ ಬಾವಿ ಪಾಲಾದ 40 ಜನ; ಮೂವರು ಸಾವು, 11 ಮಂದಿ ಕಣ್ಮರೆ