ನೀರಿನ ಟ್ಯಾಂಕರ್​ನಲ್ಲಿ ಕ್ರಿಮಿನಾಶಕ ಹಾಕಿದ ಕಿಡಿಗೇಡಿಗಳು.. ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

| Updated By: ಸಾಧು ಶ್ರೀನಾಥ್​

Updated on: Apr 10, 2021 | 1:40 PM

ಗ್ರಾಮದ ಜನರಿಗೆ ಕುಡಿಯಲು ನೀರಿನ ವ್ಯವಸ್ಥೆಗಾಗಿ ನಿರ್ಮಿಸಿದ್ದ ನೀರಿನ ಟ್ಯಾಂಕರ್​ನಲ್ಲಿ ಕಿಡಿಗೇಡಿಗಳು ವಿಷ ಹಾಕಿದ್ದಾರೆ. ಟ್ಯಾಂಕರ್​ ಒಳಗೆ ಮೆಕ್ಕೆಜೋಳಕ್ಕೆ ಹೊಡೆಯುವ ಕ್ರೀಮಿನಾಶಕ ಬಾಟಲ್​ ಪತ್ತೆಯಾಗಿದೆ. ಹಾಗೂ ಟ್ಯಾಂಕರ್​ನ ಹೊರಗೆ ವಿಷದ ಪ್ಯಾಕೆಟ್​ಗಳು ಪತ್ತೆಯಾಗಿವೆ.

ನೀರಿನ ಟ್ಯಾಂಕರ್​ನಲ್ಲಿ ಕ್ರಿಮಿನಾಶಕ ಹಾಕಿದ ಕಿಡಿಗೇಡಿಗಳು.. ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ
ನೀರಿನ ಟ್ಯಾಂಕರ್​ನಲ್ಲಿ ಕ್ರಿಮಿನಾಶಕ ಹಾಕಿದ ಕಿಡಿಗೇಡಿಗಳು
Follow us on

ದಾವಣಗೆರೆ: ಕುಡಿಯುವ ನೀರಿನ ಟ್ಯಾಂಕರ್​ನಲ್ಲಿ ಕಿಡಿಗೇಡಿಗಳು ಕ್ರಿಮಿನಾಶಕ ಹಾಕಿದ್ದು, ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದ ಘಟನೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ನಡೆದಿದೆ. ಕುಡಿಯುವ ನೀರು ಟ್ಯಾಂಕರ್​ನಲ್ಲಿ ಕ್ರಿಮಿನಾಶಕ ಬಾಟಲ್ ಪತ್ತೆಯಾಗಿದೆ. ಇದನ್ನು ಕಂಡ ಗ್ರಾಮಸ್ಥರು ಆತಂಕದಲ್ಲಿದ್ದಾರೆ.

ಗ್ರಾಮದ ಜನರಿಗೆ ಕುಡಿಯಲು ನೀರಿನ ವ್ಯವಸ್ಥೆಗಾಗಿ ನಿರ್ಮಿಸಿದ್ದ ನೀರಿನ ಟ್ಯಾಂಕರ್​ನಲ್ಲಿ ಕಿಡಿಗೇಡಿಗಳು ವಿಷ ಹಾಕಿದ್ದಾರೆ. ಟ್ಯಾಂಕರ್​ ಒಳಗೆ ಮೆಕ್ಕೆಜೋಳಕ್ಕೆ ಹೊಡೆಯುವ ಕ್ರೀಮಿನಾಶಕ ಬಾಟಲ್​ ಪತ್ತೆಯಾಗಿದೆ. ಹಾಗೂ ಟ್ಯಾಂಕರ್​ನ ಹೊರಗೆ ವಿಷದ ಪ್ಯಾಕೆಟ್​ಗಳು ಪತ್ತೆಯಾಗಿವೆ. ಸದ್ಯ ನೀರಗಂಟಿಯ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಾಸಕ ಕರುಣಾಕರ ರೆಡ್ಡಿ ಸೂಚಿಸಿದ್ದಾರೆ. ಹಾಗೂ ತಹಶೀಲ್ದಾರ್​​ ನಂದೀಶ್ ಟ್ಯಾಂಕರ್​ನ ನೀರನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಚಿಗಟೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನೀರಿನ ಟ್ಯಾಂಕರ್​ನಲ್ಲಿ ಕ್ರಿಮಿನಾಶಕ

ನೀರು ಟ್ಯಾಂಕರ್​ನಲ್ಲಿ ಕ್ರಿಮಿನಾಶಕ ಬಾಟಲ್ ಕಂಡು ಆತಂಕದಲ್ಲಿರುವ ಗ್ರಾಮಸ್ಥರು

ಇದನ್ನೂ ಓದಿ:ಸುಳ್ವಾಡಿ ವಿಷ ಪ್ರಸಾದ: ಪ್ರಮುಖ ಆರೋಪಿಗೆ ಜಾಮೀನು ನಿರಾಕರಿಸಿದ ಸುಪ್ರೀಂಕೋರ್ಟ್ 

(Miscreants Mix Poison to Water Tank in Davangere)