ದೇಹ ಸೇರುತ್ತಿದೆ ವಿಷ; ಬಾಗಲಕೋಟೆಯಲ್ಲಿ ಚರಂಡಿ ನೀರಲ್ಲಿ ತರಕಾರಿ ಬೆಳೆಯುತ್ತಿರುವ ಬೆಳೆಗಾರರ ವಿರುದ್ಧ ಸ್ಥಳೀಯರ ಆಕ್ರೋಶ

ನಗರಕ್ಕೆ ಹೊಂದಿಕೊಂಡಿರುವ ಘಟಪ್ರಭಾ ನದಿ ಆಲಮಟ್ಟಿ ಹಿನ್ನೀರು ಪ್ರದೇಶದಲ್ಲಿ ಕೆಲವರು ಚರಂಡಿ ನೀರು ಬಳಸಿ ರಾಜಗಿರಿ, ಮೆಂತೆ, ಮೂಲಂಗಿ, ಸಬ್ಬಸಗಿ, ಹರಿವೆಸೊಪ್ಪು ಸೇರಿದಂತೆ ವಿವಿಧ ಸೊಪ್ಪು, ತರಕಾರಿಗಳನ್ನು ಬೆಳೆದಿದ್ದಾರೆ.

ದೇಹ ಸೇರುತ್ತಿದೆ ವಿಷ; ಬಾಗಲಕೋಟೆಯಲ್ಲಿ ಚರಂಡಿ ನೀರಲ್ಲಿ ತರಕಾರಿ ಬೆಳೆಯುತ್ತಿರುವ ಬೆಳೆಗಾರರ ವಿರುದ್ಧ ಸ್ಥಳೀಯರ ಆಕ್ರೋಶ
ಚರಂಡಿ ನೀರಿನಲ್ಲಿ ತರಕಾರಿ ಬೆಳೆ ಬೆಳೆಯುತ್ತಿರುವ ಬಾಗಲಕೋಟೆ ರೈತರು
Follow us
preethi shettigar
| Updated By: Skanda

Updated on: Apr 10, 2021 | 2:01 PM

ಬಾಗಲಕೋಟೆ: ಉತ್ತಮ ಆರೋಗ್ಯಕ್ಕಾಗಿ ಹಸಿ ತರಕಾರಿ ಸೊಪ್ಪು ತಿನ್ನಬೇಕು ಎಂದು ತಜ್ಞರು ತಿಳಿಸುತ್ತಾರೆ. ಆದರೆ ಬಾಗಲಕೋಟೆ ನಗರದಲ್ಲಿ ಮಾತ್ರ ಜನರ ಆರೋಗ್ಯವನ್ನು ಕಾಪಾಡಬೇಕಾದಂತಹ ತರಕಾರಿಯೇ ಅನಾರೋಗ್ಯಕ್ಕೆ ಮೂಲವಾಗುತ್ತಿದೆ. ತರಕಾರಿ ನೊಡುವುದಕ್ಕೆ ಪರಿಶುದ್ಧವಾಗಿದೆ ಎಂದು ಹೇಳಿ ಆಸಕ್ತಿಯಿಂದ ತರಕಾರಿ ತಿಂದರೆ ವಿಷವನ್ನು ದೇಹಕ್ಕೆ ಹಾಕಿಕೊಂಡಂತೆ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಕಲ್ಮಶ ನೀರಿನಲ್ಲಿ ತರಕಾರಿಯನ್ನು ಬೆಳೆಯುತ್ತಿರುವುದೇ ಇದಕ್ಕೆ ಕಾರಣವಾಗಿದೆ.

ನಗರಕ್ಕೆ ಹೊಂದಿಕೊಂಡ ಆಲಮಟ್ಟಿ ಹಿನ್ನೀರು ಪ್ರದೇಶ ವ್ಯಾಪ್ತಿಯಲ್ಲಿ ರೈತರು ಬೆಳೆದ ಹಸಿರು ತರಕಾರಿಯಲ್ಲಿ ಕಲ್ಮಶವಿದ್ದು, ಇದು ಬಾಗಲಕೋಟೆ ನಗರ ಜನರ ದೇಹಕ್ಕೆ ಸದ್ದಿಲ್ಲದೇ ಸೇರುತ್ತಿದೆ. ನಗರಕ್ಕೆ ಹೊಂದಿಕೊಂಡಿರುವ ಘಟಪ್ರಭಾ ನದಿ ಆಲಮಟ್ಟಿ ಹಿನ್ನೀರು ಪ್ರದೇಶದಲ್ಲಿ ಕೆಲವರು ಚರಂಡಿ ನೀರು ಬಳಸಿ ರಾಜಗಿರಿ, ಮೆಂತೆ, ಮೂಲಂಗಿ, ಸಬ್ಬಸಗಿ, ಹರಿವೆಸೊಪ್ಪು ಸೇರಿದಂತೆ ವಿವಿಧ ಸೊಪ್ಪು, ತರಕಾರಿಗಳನ್ನು ಬೆಳೆದಿದ್ದಾರೆ.

ಇಲ್ಲಿ ಬೆಳೆದ ಸೊಪ್ಪು ತರಕಾರಿಗಳನ್ನು ಬಾಗಲಕೋಟೆಯ ತರಕಾರಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ನೋಡುವುದಕ್ಕೆ ಈ ಸೊಪ್ಪು ಪರಿಶುದ್ಧವಾಗಿರುವಂತೆ ಕಾಣುತ್ತದೆ. ಆದರೆ ಇಂತಹ ಕಲ್ಮಶ ನೀರಲ್ಲಿ ಬೆಳೆದ ತರಕಾರಿ ದೇಹ ಸೇರುತ್ತಿರುವುದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಸಂಬಂಧಿಸಿದವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಘನಶ್ಯಾಮ್ ಭಾಂಡಗೆ ತಿಳಿಸಿದ್ದಾರೆ.

ಘಟಪ್ರಭಾ ನದಿ ಹಿನ್ನೀರು ಇರೋವರೆಗೂ ನದಿ ನೀರನ್ನೆ ಬಳಸಿ ಇಲ್ಲಿ ತರಕಾರಿ ಬೆಳೆಯುತ್ತಾರೆ. ಬೇಸಿಗೆ ಸಮಯದಲ್ಲಿ ಹಿನ್ನೀರು ಖಾಲಿಯಾದಂತೆ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಆದರೆ ಬೇಸಿಗೆ ಸಮಯದಲ್ಲಿ ಬೆಳೆಗಳಿಗೆ ಪರ್ಯಾಯ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಅದ್ಯಾವುದನ್ನೂ ಮಾಡಿಕೊಳ್ಳದ ಇಲ್ಲಿನ ಬೆಳೆಗಾರರು ನದಿಗೆ ಬಂದು ಸೇರುವ ಚರಂಡಿ ನೀರನ್ನೇ ಬಳಸಿಕೊಂಡು ವಿವಿಧ ಸೊಪ್ಪು, ತರಕಾರಿಗಳನ್ನು ಬೆಳೆಯುತ್ತಿದ್ದಾರೆ.

crops farming in drainage water 1

ಸೊಪ್ಪು ಬೆಳೆಯಲು ಚರಂಡಿ ನೀರಿನ ಬಳಕೆ

ಇಲ್ಲಿ ತರಕಾರಿ ಬೆಳೆಯುತ್ತಿರುವವರಲ್ಲಿ ಕೆಲವೇ ಕೆಲವರು ರೈತರಾದರೆ ಬಹುತೇಕರು ಬೇರೆ ಬೇರೆ ಕೆಲಸ ಮಾಡುವಂತವರು. ಬೇಸಿಗೆಯಲ್ಲಿ ಚರಂಡಿ ನೀರನ್ನು ಬಳಸಿ ತರಕಾರಿ ಬೆಳೆಯುತ್ತಾರೆ. ಇನ್ನು ಇದೆಲ್ಲ ನಗರದ ಮಧ್ಯಭಾಗ, ನಗರದ ಪಕ್ಕದಲ್ಲೇ ದಶಕಗಳಿಂದ ನಡೆಯುತ್ತಿದ್ದರೂ ಯಾವುದೇ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಸ್ಥಳೀಯರಾದ ಘನಶ್ಯಾಮ್ ಭಾಂಡಗೆ ಹೇಳಿದ್ದಾರೆ

ಈ ರೀತಿ ಚರಂಡಿ ನೀರಿನಲ್ಲಿ ಬೆಳೆಯುವ ತರಕಾರಿಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಹಾಗಾಗಿ ಇಂತಹ ತರಕಾರಿ ಖರೀದಿಸದಂತೆ ಎಚ್ಚರಿಕೆ ವಹಿಸಬೇಕು. ನದಿಯಲ್ಲಿ ನೀರು ಕಡಿಮೆಯಾದ ಬಳಿಕ ಈ ರೀತಿ ಚರಂಡಿ ನೀರಿನಿಂದ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ನಗರಸಭೆ ಅಧಿಕಾರಿಗಳ ಜೊತೆಗೆ ಸ್ಥಳಕ್ಕೆ ಹೋಗಿ ಎಲ್ಲರಿಗೂ ನೋಟಿಸ್ ನೀಡಲಾಗುವುದು. ಇನ್ನೆರಡು ದಿನಗಳಲ್ಲಿ ಚರಂಡಿ ನೀರಲ್ಲಿ ತರಕಾರಿ ಬೆಳೆಯುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಅಧಿಕಾರಿ ಡಿ.ಬಿ. ಪಟ್ಟಣಶೆಟ್ಟಿ ಹೇಳಿದ್ದಾರೆ.

ಒಟ್ಟಿನಲ್ಲಿ ಹಸಿರು ತರಕಾರಿ ತಿಂದು ಉತ್ತಮ ಆರೋಗ್ಯ ಹೊಂದೋಣ ಎನ್ನುವ ಬಾಗಲಕೋಟೆ ಜನರ ಹೊಟ್ಟೆಗೆ ವಿಷಪೂರಿತ ತರಕಾರಿ ಸೇರುತ್ತಿದೆ. ಅಧಿಕಾರಿಗಳು ಇನ್ನು ತಡಮಾಡದೇ ಇಂತವರ ಮೇಲೆ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕಿದೆ.

ಇದನ್ನೂ ಓದಿ

ತೊಗರಿ ಕಣಜ ಖ್ಯಾತಿಯ ಕಲಬುರಗಿಯಲ್ಲೇ ತೊಗರಿ ಬೇಳೆ ದಾಖಲೆಗೆ ಮಾರಾಟ!

ಬರದ ನಾಡಲ್ಲಿ ಬಂಪರ್ ಬೆಳೆ ಬೆಳೆದ ಮಾದರಿ ರೈತ.. ಕಲ್ಲಂಗಡಿ ಬೆಳೆದು ಬದುಕು ಸಿಹಿಯಾಗಿಸಿಕೊಂಡ

(Vegetables and crops farming in drainage water in Bagalkot and people are angry on growers)

Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ