ಜಲ ಕ್ರೀಡೆ ತರಬೇತಿ; ಚಿತ್ರದುರ್ಗ ವಿದ್ಯಾರ್ಥಿಗಳಿಗೆ ಸಾಥ್ ನೀಡಿದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರ ಜಲಾಶಯದ ಹಿನ್ನೀರಿನಲ್ಲಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿವತಿಯಿಂದ ವಿದ್ಯಾರ್ಥಿಗಳಿಗೆ ಜಲಸಾಹಸ ತರಬೇತಿ ಆಯೋಜಿಸಲಾಗಿತ್ತು. ಜಿಲ್ಲೆಯ ವಿವಿಧ ಭಾಗದಿಂದ ಆಗಮಿಸಿದ್ದ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಲಸಾಹಸ ತರಬೇತಿ ಪಡೆದರು.

ಚಿತ್ರದುರ್ಗ: ಬೇಸಿಗೆಗಾಲ ಬಂತು ಎಂದರೆ ಸಾಕು ನೀರಿಗಾಗಿ ಎಲ್ಲಿಲ್ಲದ ಹಾಹಾಕಾರ ಶುರುವಾಗುತ್ತದೆ. ಅದರಲ್ಲೂ ಬಯಲು ಸೀಮೆಯಂತಹ ಪ್ರದೇಶದಲ್ಲಿ ಜನರು ಕುಡಿಯುವ ನೀರಿಗಾಗಿ ಹರಸಾಹಸ ಪಡುವಂತಾಗಿದೆ. ಚಿತ್ರದುರ್ಗ ಜಿಲ್ಲೆ ಸದ್ಯ ಬಿರು ಬೇಸಿಗೆಯಿಂದ ಸುಡುತ್ತಿದೆ. ಆದರೆ ವಾಣಿ ವಿಲಾಸ ಸಾಗರ ಜಲಾಶಯದ ಪ್ರದೇಶದಲ್ಲಿ ಮಾತ್ರ ತಂಪಾದ ವಾತಾವರಣ ಸೃಷ್ಟಿಯಾಗಿದ್ದು, ವಿದ್ಯಾರ್ಥಿಗಳಿಗಾಗಿ ಜಲ ಕ್ರೀಡೆ ನಡೆಸಲಾಗಿದೆ.
ಸ್ವಿಮ್ಮಿಂಗ್, ರಾಫ್ಟಿಂಗ್, ಬೋಟಿಂಗ್ ಹೀಗೆ ವಿವಿಧ ಸ್ಪರ್ದೆಗಳನ್ನು ಮಕ್ಕಳಿಗಾಗಿ ಆಯೋಜಿಸಲಾಯಿತು. ಲೈಫ್ ಜಾಕೆಟ್ ತೊಟ್ಟು ನೀರಿಗೆ ಇಳಿದ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು. ಇನ್ನು ಅಡ್ವೆಂಚರ್ ಮತ್ತು ಕ್ರೀಡೆ ಪ್ರಿಯರಾದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದು, ಮಕ್ಕಳಿಗೆ ಸಾಥ್ ನೀಡಿದರು.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರ ಜಲಾಶಯದ ಹಿನ್ನೀರಿನಲ್ಲಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿವತಿಯಿಂದ ವಿದ್ಯಾರ್ಥಿಗಳಿಗೆ ಜಲಸಾಹಸ ತರಬೇತಿ ಆಯೋಜಿಸಲಾಗಿತ್ತು. ಜಿಲ್ಲೆಯ ವಿವಿಧ ಭಾಗದಿಂದ ಆಗಮಿಸಿದ್ದ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಲಸಾಹಸ ತರಬೇತಿ ಪಡೆದರು. ಈ ವೇಳೆ ತರಬೇತಿ ಪಡೆದ ವಿದ್ಯಾರ್ಥಿ ರಮೇಶ್ ಪ್ರತಿಕ್ರಿಯಿಸಿದ್ದು, ಜಲಸಾಹಸ ಕ್ರೀಡೆ ಕಲಿತು ರಾಷ್ಟ್ರಮಟ್ಟದಲ್ಲಿ ಭಾಗಿಯಾಗುವ ಕನಸಿದೆ ಎಂದು ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ.

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
ಜಲ ಕ್ರೀಡೆಯಿಂದ ಫಿಟ್ ನೆಸ್ ಸಂಪಾದಿಸಬಹುದು. ವಿದ್ಯಾರ್ಥಿಗಳು ಈ ಜಲ ಕ್ರೀಡೆ ಮೂಲಕ ರಾಷ್ಟ್ರಮಟ್ಟಕ್ಕೆ ಹೋಗಬಹುದಾಗಿದೆ. ಈ ಭಾಗದ ಜನರು ಜಲ ಕ್ರೀಡೆ ತರಬೇತಿಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಚಿತ್ರದುರ್ಗ ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರದಲ್ಲಿ ಜಲಸಾಹಸ ಕ್ರೀಡೆ ತರಬೇತಿ ನಡೆಯುತ್ತಿದೆ. ಬಯಲುಸೀಮೆಯ ವಿದ್ಯಾರ್ಥಿಗಳು ಜಲ ಕ್ರೀಡೆಯಲ್ಲಿ ಭಾಗಿಯಾಗಿ ಮೈಚಳಿ ಬಿಟ್ಟು ಸಂತೋಷ ಪಡುತ್ತಾ ಕಲಿಕೆಯಲ್ಲಿ ತೊಡಗಿದ್ದಾರೆ. ಸದ್ಯ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದ ನೀರಿದ್ದು, ಬರದನಾಡಿನ ಮಕ್ಕಳಿಗೂ ಜಲಸಾಹಸ ತರಬೇತಿ ಸುಲಭವಾಗಿ ಲಭಿಸುವಂತಾಗಿದೆ ಎನ್ನುವುದು ವಿಶೇಷ.
ಇದನ್ನೂ ಓದಿ:
ಬೇಗೂರು: ಅಪಾರ್ಟ್ಮೆಂಟ್ ಬಳಿ ಆಟವಾಡ್ತಿದ್ದ ಬಾಲಕ ನೀರು ತುಂಬಿದ ಗುಂಡಿಗೆ ಬಿದ್ದು ಸಾವು
(BasavaMurthy Madara chennayya swamiji encourages water sports training in Chitradurga )