ಮಚ್ಚು, ಲಾಂಗ್ ಆಯ್ತು ಈಗ ಪುಂಡರ ಕೈಯಲ್ಲಿ ಪಿಸ್ತೂಲ್; ದೂರು ನೀಡಿದ್ದಕ್ಕೆ ಮನೆಗೆ ನುಗ್ಗಿ ಬೆದರಿಕೆ

| Updated By: ಆಯೇಷಾ ಬಾನು

Updated on: Jul 08, 2021 | 1:02 PM

ದೂರು ನೀಡಿದ್ದಕ್ಕೆ ಮನೆಗೆ ನುಗ್ಗಿ ಪಿಸ್ತೂಲ್ ತೋರಿಸಿ ಧಮ್ಕಿ ಹಾಕಿದ ಘಟನೆ ಬೆಂಗಳೂರಿನ ಜಗಜೀವನ್‌ರಾಮ್ ನಗರದಲ್ಲಿ ನಡೆದಿದೆ. ಸಾಲದ ವಿಚಾರವಾಗಿ ಕುರಽಂ ಮೇಲೆ ಆರೀಫ್ ಮತ್ತು ಸಹಚರರು ಹಲ್ಲೆಗೈದ ಆರೋಪ ಕೇಳಿ ಬಂದಿದೆ.

ಮಚ್ಚು, ಲಾಂಗ್ ಆಯ್ತು ಈಗ ಪುಂಡರ ಕೈಯಲ್ಲಿ ಪಿಸ್ತೂಲ್; ದೂರು ನೀಡಿದ್ದಕ್ಕೆ ಮನೆಗೆ ನುಗ್ಗಿ ಬೆದರಿಕೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಹೆಚ್ಚಾಗಿ ಹೈದರಾಬಾದು, ಉತ್ತರ ಭಾರತದ ಪ್ರದೇಶಗಳಲ್ಲಿ ಹೀನಾಯ ಅಪರಾಧ ಪ್ರಕರಣಗಳು ನಡೆಯುವುದನ್ನು ಕೇಳುತ್ದಿವಿ. ಆದ್ರೆ ಇತ್ತೀಚೆಗೆ ಬೆಂಗಳೂರಿನಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲ ದಿನಗಳ ಹಿಂದಷ್ಟೇ ಹಾಡಹಗಲೇ ಮಾಜಿ ಕಾರ್ಪೋರೇಟರ್ ಕೊಲೆ ಮಾಡಲಾಗಿತ್ತು. ಈ ಮಧ್ಯೆ ಡಿಸಿಪಿ ಒಬ್ಬರು ರೌಡಿಯ ಉಪಟಳ ತಾಳಲಾರದೆ ಗಡಿಪಾರು ಮಾಡಿದರು. ಎಲ್ಲಿಂದಲೋ ಬಂದ ಪಾಪಿಗಳು ಇಲ್ಲಿ ಗ್ಯಾಂಗ್ ರೇಪ್ ಮಾಡಿದರು. ಪೊಲೀಸ್ ಅಧಿಕಾರಿಯನ್ನೇ ಬೆದರಿಸಿ, ದರೋಡೆ ಮಾಡುವ ವಿಫಲ ಯತ್ನವೂ ನಡೆದಿದೆ. ಸರಣಿ ಚೈನ್ ಸ್ನಾಚ್ಗಳು ಸರಾಗವಾಗಿ ನಡೆದವು.

ಇದರ ಮಧ್ಯೆ ಇಂದು ದೂರು ನೀಡಿದ್ದಕ್ಕೆ ಮನೆಗೆ ನುಗ್ಗಿ ಪಿಸ್ತೂಲ್ ತೋರಿಸಿ ಧಮ್ಕಿ ಹಾಕಿರುವ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಮಂಚು, ಲಾಂಗ್ ಆಟ ಮುಗಿದು ಈಗ ರೌಡಿಗಳು ಪಿಸ್ತೂಲ್ ಹಿಡಿದು ಅಟ್ಟಹಾಸ ಮೆರೆಯಲು ಮುಂದಾಗಿದ್ದಾರೆ. ಸಿಲಿಕಾನ್ ಸಿಟಿ ಈಗ ಕ್ರೈ ಸಿಟಿಯಾಗುತ್ತಿದೆಯಾ ಎಂದು ಬೆಂಗಳೂರು ಮಂದಿ ತಣ್ಣಗೆ ನಡುಗುತ್ತಿದ್ದಾರೆ.

ದೂರು ನೀಡಿದ್ದಕ್ಕೆ ಮನೆಗೆ ನುಗ್ಗಿ ಪಿಸ್ತೂಲ್ ತೋರಿಸಿ ಧಮ್ಕಿ ಹಾಕಿದ ಘಟನೆ ಬೆಂಗಳೂರಿನ ಜಗಜೀವನ್‌ರಾಮ್ ನಗರದಲ್ಲಿ ನಡೆದಿದೆ. ಸಾಲದ ವಿಚಾರವಾಗಿ ಕುರಽಂ ಮೇಲೆ ಆರೀಫ್ ಮತ್ತು ಸಹಚರರು ಹಲ್ಲೆಗೈದ ಆರೋಪ ಕೇಳಿ ಬಂದಿದೆ. ಹಲ್ಲೆ ಬಗ್ಗೆ ದೂರು ನೀಡಿದ್ದಕ್ಕೆ ರಾತ್ರಿ ಮನೆಗೆ ನುಗ್ಗಿ ಪಿಸ್ತೂಲ್, ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಜೆ.ಜೆ.ನಗರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇನ್ನು ಮಾದಕ ಜಾಲದ ಬಗ್ಗೆ ಹೇಳೋದೇ ಬೇಡ. ಬೆಂಗಳೂರು ಎಲ್ಲಿ ಮಾದಕ ವಸ್ತುಗಳ ಅಡ್ಡೆ ಆಗಿಬಿಡುತ್ತದೋ ಎಂಬ ಆತಂಕವೂ ಇದೆ. ಎಗೈನ್… ಇದಕ್ಕೆ ಸಾಥ್​ ಕೊಡುತ್ತಿರುವವರು ಪರದೇಶಿಗಳೇ.

ಇದನ್ನೂ ಓದಿ: ಡಿವೈಎಸ್​ಪಿ ಲಕ್ಷ್ಮೀ ಅನುಮಾನಾಸ್ಪದ ಸಾವು ಪ್ರಕರಣ; ಪೊಲೀಸರ ತನಿಖೆ ಎಲ್ಲಿಗೆ ಬಂತು? ವೈದ್ಯರ ವಿಸ್ತೃತ ವರದಿ ಏನು ಹೇಳುತ್ತಿದೆ?

Published On - 12:10 pm, Thu, 8 July 21