ಬೆಂಗಳೂರು: ನನ್ನ ವಿರುದ್ಧ ಹೆಚ್.ವಿಶ್ವನಾಥ್ ಮಾತನಾಡಿದ್ದು ಸರಿಯಲ್ಲ. ಇದೇ ರೀತಿ ಮಾತನಾಡಿದರೆ ಕೋರ್ಟ್ ಮೂಲಕ ಅವರಿಗೆ ನೋಟಿಸ್ ನೀಡಲಾಗುವುದು ಎಂದು ಬಿಜೆಪಿ ಶಾಸಕ ಹರತಾಳು ಹಾಲಪ್ಪ ಹೆಚ್.ವಿಶ್ವನಾಥ್ಗೆ ತಿರುಗೇಟು ನೀಡಿದ್ದಾರೆ.
ಎಂಎಲ್ಸಿ ಹೆಚ್.ವಿಶ್ವನಾಥ್ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ವೇಳೆ ಬಿಜೆಪಿ ಶಾಸಕ ಹರತಾಳು ಹಾಲಪ್ಪನವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಹರತಾಳು ಹಾಲಪ್ಪ ಸ್ನೇಹಿತನ ಮನೆಗೆ ಊಟಕ್ಕೆ ಹೋಗಿದ್ದ. ಅಲ್ಲಿ ಸ್ನೇಹಿತನ ಪತ್ನಿ ಮೇಲೆಯೇ ಅತ್ಯಾಚಾರ ಮಾಡಿದ್ದ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಹಾಲಪ್ಪ ವಿಶ್ವನಾಥ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ನನ್ನ ವಿರುದ್ಧ ಹೆಚ್.ವಿಶ್ವನಾಥ್ ಮಾತನಾಡಿದ್ದು ಸರಿಯಲ್ಲ. ಇದೇ ರೀತಿ ಮಾತನಾಡಿದರೆ ಕೋರ್ಟ್ ಮೂಲಕ ಅವರಿಗೆ ನೋಟಿಸ್ ನೀಡಲಾಗುವುದು. ಕೋರ್ಟ್, ದೇಗುಲ, ಜನತಾ ನ್ಯಾಯಾಲಯದಲ್ಲಿ ಮೂರೂ ಕಡೆ ಗೆದ್ದು ಬಂದ ನನ್ನ ವಿರುದ್ಧ ಆರೋಪಿಸಿದ್ದಾರೆ. ನನ್ನ ವಿರುದ್ಧ ಆರೋಪ ಮಾಡಿದರೆ ನಾನು ಸುಮ್ಮನಿರಲ್ಲ. BSY ವಯಸ್ಸಿನ ಬಗ್ಗೆ ಹೆಚ್.ವಿಶ್ವನಾಥ್ ಮಾತಾಡುತ್ತಿದ್ದಾರೆ. ಇವರಿಗೇನು ವಯಸ್ಸಾಗಿಲ್ಲವಾ ಎಂದು ಹಾಲಪ್ಪ ಪ್ರಶ್ನೆ ಮಾಡಿದ್ದಾರೆ. ನನಗೆ ಯಾವುದೇ ವಿಡಿಯೋ, ಆಡಿಯೋ ಬಗ್ಗೆ ಗೊತ್ತಿಲ್ಲ ಎಂದು ಟಿವಿ9ಗೆ ಬಿಜೆಪಿ ಶಾಸಕ ಹರತಾಳು ಹಾಲಪ್ಪ ತಿಳಿಸಿದ್ರು.
ಬಿಜೆಪಿ ವಿರುದ್ಧ ಶಾಸಕ ಎಸ್.ರಾಮಪ್ಪ ವಾಗ್ದಾಳಿ
ಬಿಜೆಪಿಯಲ್ಲಿ ಈಗ ದುಡ್ಡು ಹೊಡೆಯುವುದು, ನಾಯಕತ್ವ ಬದಲಾವಣೆ ಮಾತಾಡುವುದು ಮಾತ್ರ ನಡೆದಿದೆ. ಕೊರೊನಾ ಸಂದರ್ಭದಲ್ಲಿ ಜನರಿಗೆ ಸ್ಪಂದಿಸುವ ಸೌಜನ್ಯವಿಲ್ಲ ಎಂದು ದಾವಣಗೆರೆ ಜಿಲ್ಲೆಯ ಹರಿಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ವಾಗ್ದಾಳಿ ನಡೆಸಿದ್ದಾರೆ. ಅವರು ಹಾಳಾಗಿ ಹೋಗಲಿ, ನಮ್ಮ ಕ್ಷೇತ್ರದ ಕೆಲಸವೂ ಆಗ್ತಿಲ್ಲ. ಕೆಲವು ರಸ್ತೆ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಹಾಗೂ ಈಗ ಅರುಣ್ ಸಿಂಗ್ ಬಂದು ಯಡಿಯೂರಪ್ಪ ಅವರನ್ನೆ ಮುಂದೂವರೆಸಿ ಎನ್ನುತ್ತಿದ್ದಾರೆ. ಆದ್ರು ಭಿನ್ನಮತ ಮುಗಿಯುವಂತೆ ಕಾಣುತ್ತಿಲ್ಲ. ಕೊರೊನಾದಿಂದ ಜನ ಸಾವನ್ನಪ್ಪುತ್ತಿದ್ದಾರೆ. ಅದರ ಬಗ್ಗೆ ಗಮನ ಹರಿಸಿ ಎಂದು ಎಸ್ ರಾಮಪ್ಪ ಸಲಹೆ ನೀಡಿದ್ದಾರೆ.