ಕೊವಿಡ್​ ಸಮಯದಲ್ಲಿ ಪಿಕ್​ನಿಕ್​ ಹೋಗಲು ಸಾಧ್ಯವಾಗುತ್ತಿಲ್ಲವೆಂದು ಬೇಸರಬೇಡ!​ ಮನೆಯವರೊಂದಿಗೆ ಸಮಯ ಕಳೆಯಲು ಇಲ್ಲಿದೆ ಕೆಲವು ಸಲಹೆಗಳು

International Picnic Day: ಸ್ನೇಹಿತರು, ಕುಟುಂಬದವರೊಂದಿಗೆ ಹೊರಗಡೆ ಸುತ್ತಾಡಲು ಹೋಗುವುದೆಂದರೆ ಎಷ್ಟೋ ಜನರಿಗೆ ಖುಷಿಯ ವಿಚಾರ. ಅದರಲ್ಲಿಯೂ ಮನೆಯವರೆಲ್ಲಾ ಸೇರಿ ಸುಂದರ ತಾಣಕ್ಕೆ ಪಿಕ್​ನಿಕ್​​ ಹೋಗುತ್ತಿದ್ದೇವೆ ಅಂದ್ರೆ ಸಾಕು ತಡೆಯಲಾರಷ್ಟು ಖುಷಿ.

ಕೊವಿಡ್​ ಸಮಯದಲ್ಲಿ ಪಿಕ್​ನಿಕ್​ ಹೋಗಲು ಸಾಧ್ಯವಾಗುತ್ತಿಲ್ಲವೆಂದು ಬೇಸರಬೇಡ!​ ಮನೆಯವರೊಂದಿಗೆ ಸಮಯ ಕಳೆಯಲು ಇಲ್ಲಿದೆ ಕೆಲವು ಸಲಹೆಗಳು
ಸಾಂದರ್ಭಿಕ ಚಿತ್ರ
TV9kannada Web Team

| Edited By: shruti hegde

Jun 18, 2021 | 1:57 PM

ಕೊವಿಡ್​ ಹಾವಳಿಯಿಂದ ಸ್ನೇಹಿತರನ್ನು ನೋಡದೇ ಅದೆಷ್ಟೋ ದಿನಗಳು ಕಳೆದೇ ಹೋಯ್ತು. ಇಂದು (ಜೂನ್​ 18) ಮತ್ತೆ ಸ್ನೇಹಿತರು ನೆನಪಾಗುತ್ತಾದ್ದಾರೆ. ಕೊವಿಡ್​ಗಿಂತ ಮೊದಲು ಸ್ನೇಹಿರತೊಂದಿಗೆ ಪಿಕ್​ನಿಕ್​ ಹೋಗಿದ್ದ ಸಮಯವೆಲ್ಲಾ ನೆನಪಾಗುತ್ತಿದೆ ಎಂದು ಬೇಸರಗೊಳ್ಳಬೇಡಿ. ಪರಿಸ್ಥಿತಿಯನ್ನು ಎದುರಿಸಲೇ ಬೇಕಾದ ಸಮಯ ಎದುರಿಗಿದ್ದಾಗ ತ್ಯಾಗ ಅನಿವಾರ್ಯ. ಹೀಗಿರುವಾಗ ಮನೆಯ ಸದಸ್ಯರೊಂದಿಗೆ ಅಥವಾ ದೂರದಲ್ಲಿರುವ ಸ್ನೇಹಿರತೆಲ್ಲಾ ಒಟ್ಟುಗೂಡುವುದು ಹೇಗೆ ಎಂಬುದರ ಕುರಿತಾಗಿ ಯೋಚಿಸಿ. ಮನೆಯವರೊಂದಿಗೆ ಸಂತೋಷದಿಂದ ಸಮಯ ಕಳೆಯುವ ಕೆಲವೊಂದಿಷ್ಟು ಟಿಪ್ಸ್​ಗಳು ಇಲ್ಲಿವೆ. 

ಸ್ನೇಹಿತರು, ಕುಟುಂಬದವರೊಂದಿಗೆ ಹೊರಗಡೆ ಸುತ್ತಾಡಲು ಹೋಗುವುದೆಂದರೆ ಎಷ್ಟೋ ಜನರಿಗೆ ಖುಷಿಯ ವಿಚಾರ. ಅದರಲ್ಲಿಯೂ ಮನೆಯವರೆಲ್ಲಾ ಸೇರಿ ಸುಂದರ ತಾಣಕ್ಕೆ ಪಿಕ್​ನಿಕ್​​ ಹೋಗುತ್ತಿದ್ದೇವೆ ಅಂದ್ರೆ ಸಾಕು ತಡೆಯಲಾರಷ್ಟು ಖುಷಿ. ಆದ್ರೆ, ಕೊವಿಡ್​ ಹಾವಳಿ ಎಲ್ಲವನ್ನು ಕಿತ್ತುಕೊಂಡು ಬಿಡ್ತು ಎಂಬ ಬೇಸರ ಕಾಡುತ್ತಿರಬಹುದು. ಕೊವಿಡ್​ ಸೋಂಕಿನ ವಿರುದ್ಧ ಹೋರಾಡಿದಂತೆಯೇ ಪರಿಸ್ಥಿತಿಯನ್ನು ಎದುರಿಸಿ ಸೋಂಕಿನ ನಿಯಂತ್ರಣ ಜತೆಜತೆಗೆ ಒಂದಿಷ್ಟು ಪ್ಲಾನ್​ ಮಾಡಿ.

ಸ್ನೇಹಿತ ಜತೆ ಸಮಯ ಕಳೆಯಲು ಪಿಕ್​ನಿಕ್​ ​ಒಂದೊಳ್ಳೆ ಅವಕಾಶ. ಖುಷಿಯಿಂದ ಆಟವಾಡುತ್ತಾ, ನಗುತ್ತಾ ಅದೆಷ್ಟೋ ವಿಷಯಗಳನ್ನು ಪರಸ್ಪರ ಹಂಚಿಕೊಳ್ಳುತ್ತಾ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ. ಕೊವಿಡ್​ ಸಾಂಕ್ರಾಮಿಕ ಹರಡುತ್ತಿರುವುದರಿಂದ ಮನೆಬಿಟ್ಟು ಹೊರಹೋಗಲು ಸಾಧ್ಯವಾಗುತ್ತಿಲ್ಲ.ಈ ಬಾರಿ ಪಿಕ್​ನಿಕ್​ ಇಲ್ಲವೆಂದು ಬೇಜಾರು ಬಿಟ್ಟು, ಅದರ ಬದಲಾಗಿ ಏನಾದರೂ ವಿಶೇಷವಾಗಿ ಯೋಚಿಸಿ. ಕೆಲವೊಂದಿಷ್ಟು ಟಿಪ್ಸ್​ಗಳು ಹೀಗಿವೆ.

* ನಿಮ್ಮ ಮನೆಯ ಹಿತ್ತಲಿನಲ್ಲಿ ನೀವು ಜಾಗ ಹೊಂದಿದ್ದರೆ ಕುಟುಂಬದವರೊಂದಿಗೆ ಸಮಯ ಕಳೆಯಲು ಟೆಂಟ್​ ನಿರ್ಮಿಸಬಹುದು

* ಮನೆಯ ಟೆರೆಸ್​ನಲ್ಲಿ ಚಾಪೆಯನ್ನು ಹಾಕಿ ಮನೆಯವರನ್ನೆಲ್ಲಾ ಸೇರಿಸಿ. ವಿಶೇಷವಾಗಿ ಸಂಗೀತ ಕಾರ್ಯಕ್ರಮ, ವಿವಿಧ ಆಟಗಳನ್ನು ಆಡುತ್ತಾ ಈ ದಿನವನ್ನು ಸಂತೋಷದಿಂದ ಕಳೆಯಿರಿ

*ಇಂದಿನ ವಿಶೇಷ ದಿನಕ್ಕಾಗಿ ವಿವಿಧ ಖಾದ್ಯಗಳನ್ನು ತಯಾರಿಸಿ. ಸ್ಪೈಸಿ ರೆಸಿಪಿಗಳನ್ನು ರೆಡಿಮಾಡಿ ಮನೆಯವರ ಖುಷಿಯೊಂದಿಗೆ ಊಟ ಸವಿಯಿರಿ

*ಒಳಾಂಗಣದಲ್ಲಿ ಆಡಬಹುದಾದ ಆಟದ ಸಿದ್ಧತೆ ಮಾಡಿ. ಮನೆಯವರನ್ನೆಲ್ಲಾ ಸೇರಿಸಿ ಮೋಜು-ಮಸ್ತಿಯಿಂದ ಸಮಯ ಕಳೆಯಿರಿ

*ನಿಮ್ಮ ಸ್ನೇಹಿತರು ದೂರದಲ್ಲಿದ್ದರೆ ಆನ್​ಲೈನ್​ ಮೂಲಕ ಅವರನ್ನು ಸಂಪರ್ಕಿಸಿ.. ವಿಡಿಯೋ ಕಾಲ್​ ಮೂಲಕ ಅವರೊಂದಿಗೆ ಸಂತೋಷದ ಸಮಯವನ್ನು ಕಳೆಯಿರಿ

ಇದನ್ನೂ ಓದಿ: 

ಮಂಡ್ಯದ KRS ಹಿನ್ನೀರಿನಲ್ಲಿ ಮೈಸೂರು ಪೊಲೀಸರ ಮಸ್ತ್​ ಪಿಕ್‌ನಿಕ್ ಪಾರ್ಟಿ: ನಮಗಿಲ್ಲದ ಅವಕಾಶ ಅವರಿಗ್ಯಾಕೆ? ಎಂದ ಸಾರ್ವಜನಿಕರು

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಹಸಿರು ಹೊದ್ದು ನಿಂತ ಕರೀಘಟ್ಟ ಬೆಟ್ಟ!;

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada