ದೀರ್ಘಕಾಲಿಕ ಕೊವಿಡ್ನಿಂದ ಹೊರ ಬಂದ ಮೇಲೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡಿರುವುದರ ಕುರಿತಾಗಿ ಆಲೋಚಿಸುವುದು ಒಳಿತು. ಕೊವಿಡ್ ಸೋಂಕಿನ ವಿರುದ್ಧ ಹೋರಾಡಿದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಂಡಿರುತ್ತದೆ. ಪೌಷ್ಠಿಕ ಆಹಾರದ ಜತೆಗೆ ಉತ್ತಮ ವ್ಯಾಯಾಮ ರೂಢಿಯಲ್ಲಿಟ್ಟುಕೊಂಡರೆ ನಮ್ಮ ಆರೋಗ್ಯದ ಆರೈಕೆ ಮಾಡಿಕೊಳ್ಳಲು ಸಾಧ್ಯ. ದೀರ್ಘಕಾಲಿಕ ಕೊವಿಡ್ನಲ್ಲಿ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮತ್ತು ದೇಹದ ಫಿಟ್ನೆಸ್ ಕಾಪಾಡಿಕೊಳ್ಳಲು ತಮ್ಮ ಮೊದಲಿನ ದಿನಚರಿಗೆ ಮರಳಿದ ನಟಿ ಕತ್ರಿನಾ ಕೈಫ್ ಸ್ಪೂರ್ತಿದಾಯಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಕೊವಿಡ್ ನಂತ ಮರಳಿ ನನ್ನ ಮೊದಲಿನ ದಿನಚರಿಗೆ ಮರಳುವಂತೆ ನಾನು ಯೋಚಿಸಬೇಕು. ನೀವು ನಿಮ್ಮಲ್ಲಿ ಒಮ್ಮೆ ಯೋಚಿಸಿ. ಕೊವಿಡ್ಗಿಂತಲೂ ಮೊದಲು ನಿಮ್ಮ ದಿನಚರಿ ಹೇಗಿತ್ತು? ನಿಧಾನವಾಗಿ ನಿಮ್ಮ ದೇಹವನ್ನು ಮೊದಲಿನ ದಿನಚರಿಗೆ ಹೊಂದಿಸಿ. ಹಂತ ಹಂತವಾಗಿ ದೇಹಕ್ಕೆ ವಿಶ್ರಾಂತಿ ನೀಡುತ್ತಾ ನಿಮ್ಮ ಮೊದಲಿನ ದಿನಚರಿಯತ್ತ ಸಾಗಲು ಪ್ರಯತ್ನಿಸಿ ಎಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
View this post on Instagram
ಅವರವರ ದೇಹ ಪ್ರಕೃತಿಗೆ ಸಂಬಂಧಿಸಿದಂತೆ ಕೊವಿಡ್-19 ಸೋಂಕು ಲಕ್ಷಣಗಳಿಂದ ಸಂಪೂರ್ಣವಾಗಿ ಹೊರಬರಲು ಸಮಯ ಹಿಡಿಯುತ್ತದೆ. ನಿಮ್ಮ ದೇಹಕ್ಕೆ ಒತ್ತಡ ನೀಡದೇ ಮನಸ್ಸಿನ ಆಲೋಚನೆಗಳನ್ನು ಬದಲಾಯಿಸಿಕೊಳ್ಳಿ. ಕೊವಿಡ್ಗಿಂತಲೂ ಮೊದಲು ನಿಮ್ಮ ದಿನಚರಿ ಹೇಗಿತ್ತು? ಎಂಬುದರ ಕುರಿತಾಗಿ ಯೋಚಿಸಿ ಮತ್ತು ಮೊದಲಿನ ಸ್ಥಿತಿಗೆ ನಿಮ್ಮ ದೇಹ ಒಗ್ಗುವಂತೆ ಹಂತಹಂತವಾಗಿ ದಿನಚರಿಯಲ್ಲಿ ತೊಡಗಿಕೊಳ್ಳಿ. ಹೆಚ್ಚು ವಿಶ್ರಾಂತಿಯೊಂದಿಗೆ ನಿಮ್ಮ ದಿನನಿತ್ಯದ ಚಟುವಟಿಕೆ ಇರಲಿ. ಯಾವುದೇ ಸಮಸ್ಯೆಯಿಂದ ಹೊರಬರಲು ಸಮಯ ಬೇಕೇಬೇಕು.
ಇದನ್ನೂ ಓದಿ:
Post Covid: ದೀರ್ಘಕಾಲಿಕ ಕೊವಿಡ್ ಲಕ್ಷಣಗಳಿಂದ ಹೊರಬರಲು ಸರಳ ವಿಧಾನಗಳು
Long Covid Symptoms: ದೀರ್ಘಕಾಲಿಕ ಕೊವಿಡ್ ರೋಗ ಲಕ್ಷಣಗಳು ಹಾಗೂ ನಿರ್ವಹಿಸುವ ಕೆಲವು ಸಲಹೆಗಳು