ಪ್ರಾಣಿಗಳ ಸ್ಥೂಲಕಾಯತೆ ಸಮಸ್ಯೆಯ ಲಕ್ಷಣಗಳು, ಕಾರಣಗಳು ಮತ್ತು ಚಿಕಿತ್ಸಾ ವಿಧಾನ ತಿಳಿಯಿರಿ

Obesity in Animals: ಸಾಕು ಪ್ರಾಣಿಗಳಲ್ಲಿ ಸ್ಥೂಲಕಾಯತೆ ಕಾಣಿಸಿಕೊಳ್ಳಲು ಪ್ರಮುಖ ಕಾರಣವೆಂದರೆ ಆಹಾರದ ಅಸಮತೋಲನೆ, ಅತಿಯಾದ ಆಹಾರ ಮತ್ತು ಜಂಕ್​​ಫುಡ್​ಗಳು. ಅದಾಗ್ಯೂ, ಬೆಕ್ಕುಗಳು ಅಥವಾ ಇತರ ಪ್ರಾಣಿಗಳಿಗೆ ಹೋಲಿಸಿದರೆ ನಾಯಿಗಳಲ್ಲಿ ಹೆಚ್ಚು ಬೊಜ್ಜು ಕಂಡುಬರುತ್ತದೆ.

ಪ್ರಾಣಿಗಳ ಸ್ಥೂಲಕಾಯತೆ ಸಮಸ್ಯೆಯ ಲಕ್ಷಣಗಳು, ಕಾರಣಗಳು ಮತ್ತು ಚಿಕಿತ್ಸಾ ವಿಧಾನ ತಿಳಿಯಿರಿ
ಸಾಂದರ್ಭಿಕ ಚಿತ್ರ

ಪ್ರಾಣಿಗಳಲ್ಲಿ ಸ್ಥೂಲಕಾಯತೆಯ ಲಕ್ಷಣಗಳು ಕಂಡು ಬರುವುದು ಸಾಮಾನ್ಯ. ಅದರಲ್ಲಿಯೂ ಸಾಕು ಪ್ರಾಣಿಗಳಲ್ಲಿ ಹೆಚ್ಚಾಗಿ ಈ ಸಮಸ್ಯೆ ಕಾಡುತ್ತದೆ. ಇದು ಪ್ರಾಣಿಗಳ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಅಂತಹ ಸಾಕುಪ್ರಾಣಿಗಳಲ್ಲಿ ಸಂಧಿವಾತ, ಹೃದ್ರೋಗ, ಉಸಿರಾಟ ತೊಂದರೆ, ಅಧಿಕ ರಕ್ತದೊತ್ತಡದಂತಹ ಸಮಸ್ಯೆ ಕಾಡಬಹುದು.

ಪ್ರಾಣಿಗಳಲ್ಲಿ ಸ್ಥೂಲಕಾಯತೆಗೆ ಕಾರಣವೇನು?
ಅತಿಯಾದ ಆಹಾರ ಸೇವನೆ ಮತ್ತು ದೇಹಕ್ಕೆ ವ್ಯಾಯಾಮ ಇಲ್ಲದಿದ್ದಾಗ ಪ್ರಾಣಿಗಳಲ್ಲಿ ಬೊಜ್ಜಿನ ಸಮಸ್ಯೆ ಕಾಡುತ್ತದೆ. ಇದರಿಂದ ಸ್ಥೂಲಕಾಯತೆ ಸಮಸ್ಯೆ ಕಂಡು ಬರಲು ಕಾರಣವಾಗುತ್ತದೆ. ಇದರಿಂದಾಗಿ ಪ್ರಾಣಿಗಳು ಹೆಚ್ಚು ಕುಗ್ಗಿ ಹೋಗುತ್ತವೆ. ಮಲಗಿದಲ್ಲೇ ಮಲಗಿರುವುದು, ಉಸಿರಾಟದ ತೊಂದರೆ, ಆಲಸ್ಯದಂತಹ ಲಕ್ಷಣಗಳು ಕಂಡು ಬರುವುದು ಹೆಚ್ಚು. ಅದರಲ್ಲಿಯೂ ಹೈಪೋಥೈರಾಯ್ಡಿಸಮ್​ ಮತ್ತು ಇನ್ಸುಲಿನೋಮಾದಂತಹ ಕಾಯಿಲೆಗಳು ಸಾಕುಪ್ರಾಣಿಗಳಲ್ಲಿ ಬೊಜ್ಜು ಉಂಟು ಮಾಡುತ್ತದೆ.

ಸಾಕು ಪ್ರಾಣಿಗಳಲ್ಲಿ ಸ್ಥೂಲಕಾಯತೆ ಕಾಣಿಸಿಕೊಳ್ಳಲು ಪ್ರಮುಖ ಕಾರಣವೆಂದರೆ ಆಹಾರದ ಅಸಮತೋಲನೆ, ಅತಿಯಾದ ಆಹಾರ ಮತ್ತು ಜಂಕ್​​ಫುಡ್​ಗಳು. ಅದಾಗ್ಯೂ, ಬೆಕ್ಕುಗಳು ಅಥವಾ ಇತರ ಪ್ರಾಣಿಗಳಿಗೆ ಹೋಲಿಸಿದರೆ ನಾಯಿಗಳಲ್ಲಿ ಹೆಚ್ಚು ಬೊಜ್ಜು ಕಂಡುಬರುತ್ತದೆ. ಸಾಕುಪ್ರಾಣಿಗಳಲ್ಲಿ ಮಾತ್ರವಲ್ಲದೇ ಕಾಡು ಪ್ರಾಣಿಗಳ ಮೇಲೂ ಬೊಜ್ಜು ಆರೋಗ್ಯದ ಮೇಲೆ ಪರಿಣಾಮ ಬೀರುವುದುಂಟು.

ತಡೆಗಟ್ಟುವ ಕ್ರಮ ಮತ್ತು ಚಿಕಿತ್ಸೆ
ಸಾಕುಪ್ರಾಣಿಗಳ ಜೀವನ ಶೈಲಿಯನ್ನು ಸರಿಯಾಗಿ ನೋಡಿಕೊಳ್ಳಬೇಕು. ಸರಿಯಾದ ಆಹಾರ ಮತ್ತು ಆಹಾರ ನೀಡುವ ಸಮಯ ಸರಿಯಾಗಿರಬೇಕು. ಪ್ರಕೃತಿಯೊಂದಿಗೆ ನಾಯಿ ಸರಿಯಾಗಿ ಹೊಂದಿಕೊಳ್ಳುತ್ತಿದೆಯೇ? ಹೆಚ್ಚು ಚಟುವಟಿಕೆಯಿಂದ ಕೂಡಿದೆಯೇ ಎಂಬುದರ ಕುರಿತಾಗಿ ಲಕ್ಷ್ಯವಹಿಸಿರಬೇಕು ಹಾಗೂ ನಿಯಮಿತವಾಗಿ ನಾಯಿಗಳಿಗೆ ವಾಕಿಂಗ್​ ಮಾಡಿಸುವುದನ್ನು ಪ್ರತಿನಿತ್ಯವೂ ಅಭ್ಯಾಸದಲ್ಲಿಡಬೇಕು.

ಇದನ್ನೂ ಓದಿ:

ಲಾಕ್​ಡೌನ್​ ವೇಳೆ ಬೀದಿನಾಯಿಗಳಿಗೆ ಮಾಂಸದೂಟ ಹಾಕಿದ ಮೊತ್ತ 15 ಲಕ್ಷ ರೂ; ಹಸುಗಳಿಗೆ ಮೇವು ಪೂರೈಕೆ ಮೊತ್ತ 3 ಲಕ್ಷ ರೂ: ಬಿಬಿಎಂಪಿ

Viral Video: ನಾಯಿಯಿಂದಾದ ಅಚಾತುರ್ಯಕ್ಕೆ ವ್ಯಕ್ತಿಗೆ ಶಿಕ್ಷೆ! ನಿಜವಾಗಿಯೂ ಏನಾಯ್ತು ಅಲ್ಲಿ?

Read Full Article

Click on your DTH Provider to Add TV9 Kannada