ಮುಖಕ್ಕೆ ತನ್ನದೇ ಎಂಜಲು ಹಚ್ಚಿಕೊಳ್ಳುವ ತಮನ್ನಾ ಭಾಟಿಯಾ! ವಿಚಿತ್ರ ವರ್ತನೆಗೆ ಕಾರಣ ಏನು?

ತಮನ್ನಾ ಹೇಳಿದ ಮಾತನ್ನು ನಂಬುವುದು ಅಥವಾ ನಂಬದಿರುವುದು ಅವರ ಅಭಿಮಾನಿಗಳ ಆಯ್ಕೆಗೆ ಬಿಟ್ಟ ವಿಚಾರ. ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಮತ್ತು ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.

ಮುಖಕ್ಕೆ ತನ್ನದೇ ಎಂಜಲು ಹಚ್ಚಿಕೊಳ್ಳುವ ತಮನ್ನಾ ಭಾಟಿಯಾ! ವಿಚಿತ್ರ ವರ್ತನೆಗೆ ಕಾರಣ ಏನು?
ತಮನ್ನಾ ಭಾಟಿಯಾ
Follow us
ಮದನ್​ ಕುಮಾರ್​
|

Updated on: Jun 18, 2021 | 12:38 PM

ನಟಿ ತಮನ್ನಾ ಭಾಟಿಯಾ ದಕ್ಷಿಣ ಭಾರತದಲ್ಲಿ ಸ್ಟಾರ್​ ನಟಿ. ಬಾಹುಬಲಿ ಮುಂತಾದ ಸಿನಿಮಾಗಳ ಮೂಲಕ ಅವರು ದೇಶಾದ್ಯಂತ ಸಖತ್​ ಜನಪ್ರಿಯತೆ ಪಡೆದುಕೊಂಡಿದ್ದಾರೆ. ತೆಲುಗು ಮತ್ತು ತಮಿಳಿನಲ್ಲಿ ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ನಟನೆ ಮಾತ್ರವಲ್ಲದೆ ತಮ್ಮ ಸೌಂದರ್ಯದ ಕಾರಣದಿಂದಲೂ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಅವರ ಸುಕೋಮಲ ತ್ವಚೆಗೆ ಎಲ್ಲರೂ ಫಿದಾ ಆಗಿದ್ದಾರೆ. ‘ಮಿಲ್ಕೀ ಬ್ಯೂಟಿ’ ಎಂದು ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಕರೆಯುತ್ತಾರೆ. ಹಾಗಾದರೆ ನಟಿ ತಮನ್ನಾ ಅವರ ಮಿರುಗುವ ತ್ವಚೆಯ ರಹಸ್ಯ ಏನು?

ಸಾಮಾನ್ಯ ಜನರ ರೀತಿಯೇ ತಮನ್ನಾ ಕೂಡ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಯಿಂದ ಬಳಲುತ್ತಿದ್ದರು. ಮೊಡವೆ, ಮುಖದ ಮೇಲಿನ ಕಲೆ ಮುಂತಾದವುಗಳಿಂದ ಮುಕ್ತಿ ಪಡೆಯಲು ಅವರು ಅನೇಕ ಔಷಧಿಗಳನ್ನು ಪ್ರಯತ್ನಿಸಿದ್ದಾರೆ. ಅದರಲ್ಲಿ ತುಂಬ ವಿಚಿತ್ರ ಎನಿಸುವಂತಹ ಪ್ರಯೋಗಗಳೂ ಇವೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಅವರು ತಮ್ಮ ಎಂಜಲನ್ನು ಕೂಡ ಮುಖಕ್ಕೆ ಹಚ್ಚಿಕೊಂಡಿದ್ದಾರಂತೆ! ಹಾಗಂತ ಇದು ಗಾಸಿಪ್​ ಅಲ್ಲ. ಸ್ವತಃ ಅವರೇ ಈ ಬಗ್ಗೆ ಹೇಳಿಕೊಂಡಿದ್ದಾರೆ.

ಇತ್ತೀಚೆಗಿನ ಒಂದು ಸಂದರ್ಶನದಲ್ಲಿ ತಮನ್ನಾ ಈ ಬಗ್ಗೆ ಬಾಯಿ ಬಿಟ್ಟಿದ್ದಾರೆ. ‘ಮುಖಕ್ಕೆ ನಾನು ಹಚ್ಚಿದ ಅತಿ ವಿಚಿತ್ರ ವಸ್ತು ಎಂದರೆ ಅದು ಎಂಜಲು. ಅದರಲ್ಲೂ ಬೆಳಗ್ಗಿನ ಸಮಯ ಬರುವ ಎಂಜಲು. ಮೊಡವೆಗಳನ್ನು ಒಣಗಿಸುವ ಸಾಮರ್ಥ್ಯ ಅದಕ್ಕಿದೆ. ಕೇಳೋಕೆ ಇದು ಬಹಳ ವಿಚಿತ್ರ ಎನಿಸಬಹುದು. ಆದರೆ ನಿಜವಾಗಿಯೂ ಅದು ಕೆಲಸ ಮಾಡುತ್ತದೆ’ ಎಂದು ತಮ್ಮನ್ನಾ ಹೇಳಿದ್ದಾರೆ. ಇದು ನಿಜವೇ ಎಂದು ಅನೇಕರು ಹುಬ್ಬೇರಿಸುತ್ತಿದ್ದಾರೆ.

ದಯವಿಟ್ಟು ಗಮನಿಸಿ, ತಮನ್ನಾ ಹೇಳಿದ ಮಾತನ್ನು ನಂಬುವುದು ಅಥವಾ ನಂಬದಿರುವುದು ಅವರ ಅಭಿಮಾನಿಗಳ ಆಯ್ಕೆಗೆ ಬಿಟ್ಟ ವಿಚಾರ. ಆದರೆ ಯಾವುದೇ ಆರೋಗ್ಯ ಸಮಸ್ಯೆಗೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಮತ್ತು ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ಈಗಲೂ ತಮನ್ನಾ ಬಹುಬೇಡಿಕೆಯ ನಟಿಯಾಗಿ ತಮ್ಮ ಚಾರ್ಮ್​ ಉಳಿಸಿಕೊಂಡಿದ್ದಾರೆ. ಅವರು ನಟಿಸಿದ ಹೊಸ ವೆಬ್​ ಸಿರೀಸ್​ ‘ನವೆಂಬರ್​ ಸ್ಟೋರಿಸ್​’ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ಇತ್ತೀಚೆಗೆ ಬಿಡುಗಡೆ ಆಯಿತು. ಶೀಘ್ರದಲ್ಲೇ ಅವರು ಅಡುಗೆ ಕಾರ್ಯಕ್ರಮವೊಂದರ ನಿರೂಪಕಿಯಾಗಿ ಕಿರುತೆರೆಗೂ ಕಾಲಿಡಲಿದ್ದಾರೆ. ಹಲವು ಸಿನಿಮಾಗಳ ಆಫರ್​ ಕೂಡ ಅವರ ಕೈಯಲ್ಲಿದೆ.​

ಇದನ್ನೂ ಓದಿ:

ಕಿರುತೆರೆಗೆ ಕಾಲಿಡುತ್ತಿದ್ದಾರೆ ತಮನ್ನಾ ಭಾಟಿಯಾ; ಅಡುಗೆ ಶೋ ಹೋಸ್ಟ್​ ಮಾಡೋಕೆ ನಟಿ ರೆಡಿ

ಕಿರುತೆರೆಗೆ ಕಾಲಿಡುತ್ತಿದ್ದಾರೆ ತಮನ್ನಾ ಭಾಟಿಯಾ; ಅಡುಗೆ ಶೋ ಹೋಸ್ಟ್​ ಮಾಡೋಕೆ ನಟಿ ರೆಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ