ಕಿರುತೆರೆಗೆ ಕಾಲಿಡುತ್ತಿದ್ದಾರೆ ತಮನ್ನಾ ಭಾಟಿಯಾ; ಅಡುಗೆ ಶೋ ಹೋಸ್ಟ್​ ಮಾಡೋಕೆ ನಟಿ ರೆಡಿ

Tamannaah Bhatia: ತೆಲುಗಿನ ಜನಪ್ರಿಯ ವಾಹಿನಿ ಜೆಮಿನಿ ಟಿವಿಯಲ್ಲಿ ಪ್ರಸಾರವಾಗಲಿರುವ ಅಡುಗೆ ಶೋಅನ್ನು ತಮನ್ನಾ ನಡೆಸಿಕೊಡಲಿದ್ದಾರೆ. ಇತ್ತೀಚೆಗೆ ಅವರು ತಮಿಳಿನ ‘ನವೆಂಬರ್ ಸ್ಟೋರಿ’ ವೆಬ್​ ಸೀರಿಸ್​ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು.

ಕಿರುತೆರೆಗೆ ಕಾಲಿಡುತ್ತಿದ್ದಾರೆ ತಮನ್ನಾ ಭಾಟಿಯಾ; ಅಡುಗೆ ಶೋ ಹೋಸ್ಟ್​ ಮಾಡೋಕೆ ನಟಿ ರೆಡಿ
ತಮನ್ನಾ ಭಾಟಿಯಾ

ಚಿತ್ರರಂಗದಲ್ಲಿ ಒಂದು ಹಂತದ ಯಶಸ್ಸು ಪಡೆದ ನಂತರದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ರಿಯಾಲಿಟಿ ಶೋಗಳ ನಿರೂಪಕರಾಗಿ ಮಿಂಚುತ್ತಾರೆ. ಸ್ಯಾಂಡಲ್​ವುಡ್​ನ ಸ್ಟಾರ್​ ನಟ ಕಿಚ್ಚ ಸುದೀಪ್​, ಪುನೀತ್​ ರಾಜ್​ಕುಮಾರ್​, ಮಲಯಾಳಂ ಮೋಹನ್​ಲಾಲ್​, ಬಾಲಿವುಡ್​ ಅಮಿತಾಭ್​ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ನಾನಾ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಈಗ ನಟಿ ತಮನ್ನಾ ಭಾಟಿಯಾ ಕೂಡ ಕಿರುತೆರೆಗೆ ಕಾಲಿಡೋಕೆ ರೆಡಿ ಆಗಿದ್ದಾರೆ.

ತೆಲುಗಿನ ಜನಪ್ರಿಯ ವಾಹಿನಿ ಜೆಮಿನಿ ಟಿವಿಯಲ್ಲಿ ಪ್ರಸಾರವಾಗಲಿರುವ ಅಡುಗೆ ಶೋಅನ್ನು ತಮನ್ನಾ ನಡೆಸಿಕೊಡಲಿದ್ದಾರೆ. ಇತ್ತೀಚೆಗೆ ಅವರು ತಮಿಳಿನ ‘ನವೆಂಬರ್ ಸ್ಟೋರಿ’ ವೆಬ್​ ಸೀರಿಸ್​ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಹೀಗಿರುವಾಗಲೇ ಅವರು ವೆಬ್​ ಸೀರಿಸ್​ನಲ್ಲಿ ನಟಿಸೋಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇನ್ನು, ಈ ಶೋನಲ್ಲಿ ಗೆಲ್ಲುವವರಿಗೆ ಬರೋಬ್ಬರಿ 25 ಲಕ್ಷ ರೂಪಾಯಿ ಬಹುಮಾನದ ಹಣ ಸಿಗಲಿದೆ. ಇನ್ನು, ತಮನ್ನಾ ಈ ಶೋ ನಡೆಸಿಕೊಡೋಕೆ ಕೋಟಿ ಮೊತ್ತದ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.

ಕೊವಿಡ್​ ಲಾಕ್​ಡೌನ್​ನಿಂದ ಶೂಟಿಂಗ್​ ನಿಂತಿತ್ತು. ಹೀಗಾಗಿ, ತಮನ್ನಾ ಮನೆಯಲ್ಲೇ ಇದ್ದರು. ಸೋಮವಾರದಿಂದ ಅವರು ಸಿನಿಮಾ ಸೆಟ್​​ಗೆ ಮರಳಿದ್ದಾರೆ. ಹಿಂದಿಯಲ್ಲಿ ತೆರೆಗೆ ಬಂದಿದ್ದ ಸೂಪರ್​ ಹಿಟ್​ ಚಿತ್ರ ಅಂಧಾಧುನ್​ ಸಿನಿಮಾದ ತೆಲುಗು ರಿಮೇಕ್​ನಲ್ಲಿ ತಮನ್ನಾ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಟಬು ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ತಮನ್ನಾ ಮಾಡಲಿದ್ದಾರೆ. ರಾಧಿಕಾ ಆಪ್ಟೆ ಮಾಡಿದ ಪಾತ್ರಕ್ಕೆ ನಭಾ ನಟೇಶ್​ ಜೀವ ತುಂಬಲಿದ್ದು, ​ ಆಯುಷ್ಮಾನ್​ ಖುರಾನಾ ಮಾಡಿದ ಪಾತ್ರದಲ್ಲಿನಿತೀನ್ ಕಾಣಿಸಿಕೊಳ್ಳಲಿದ್ದಾರೆ. ತಮನ್ನಾ ಮಾಡುತ್ತಿರುವ ಪಾತ್ರವನ್ನು ಈ ಮೊದಲು ರಮ್ಯಾ ಕೃಷ್ಣ ಅವರಿಗೆ ನೀಡಲಾಗಿತ್ತು. ಆದರೆ, ಅವರು ಈ ಆಫರ್ ತಿರಸ್ಕರಿಸಿದ್ದರು.

ಇದನ್ನೂ ಓದಿ: Tamannaah Bhatia: ತಮನ್ನಾ ಭಾಟಿಯಾ ಹಿಂದಿರುವುದು ವಿರಾಟ್ ಕೊಹ್ಲಿ…?

ತಮನ್ನಾ ಭೇಟಿ ಮಾಡಿ ಮದುವೆಗೆ ಆಹ್ವಾನಿಸಿದ ಲವ್ ಮಾಕ್ಟೇಲ್ ಜೋಡಿ