ತಮನ್ನಾ ಭೇಟಿ ಮಾಡಿ ಮದುವೆಗೆ ಆಹ್ವಾನಿಸಿದ ಲವ್ ಮಾಕ್ಟೇಲ್ ಜೋಡಿ

ಫೆಬ್ರವರಿ 14 ರಂದು, ಅಂದರೆ ಪ್ರೇಮಿಗಳ ದಿನದಂದು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಸಪ್ತಪದಿ ತುಳಿಯಲಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

  • TV9 Web Team
  • Published On - 13:24 PM, 18 Jan 2021
ತಮನ್ನಾ ಭೇಟಿ ಮಾಡಿ ಮದುವೆಗೆ ಆಹ್ವಾನಿಸಿದ ಲವ್ ಮಾಕ್ಟೇಲ್ ಜೋಡಿ
ಮಿಲನ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಫೆಬ್ರವರಿ 14ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ನಟ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮಿಲನ ನಾಗರಾಜ್ ಜೋಡಿಯಾಗಿ ನಟಿಸಿದ ಲವ್ ಮಾಕ್ಟೇಲ್ ಚಿತ್ರ ಬಹಳ ಸದ್ದು ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಸಿನಿಮಾದ ಗುಂಗಿನಿಂದ ಇನ್ನೂ ಅನೇಕರು ಹೊರ ಬಂದಿಲ್ಲ. ಲವ್ ಮಾಕ್ಟೇಲ್ ಸಿನಿಮಾ ನಟ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮಿಲನ ನಾಗರಾಜ್​ಗೆ ಸಾಕಷ್ಟು ಜನಪ್ರಿಯತೆಯನ್ನೂ ತಂದುಕೊಟ್ಟಿತ್ತು. ಈ ಸಿನಿಮಾದ ಮೂಲಕ ನಟ ಡಾರ್ಲಿಂಗ್ ಕೃಷ್ಣ ಸ್ಯಾಂಡಲ್​ವುಡ್​ನಲ್ಲಿ ಬಹು ಬೇಡಿಕೆಯ ನಟರ ಸಾಲಿಗೆ ಸೇರಿದರು. ಮಿಲನಾ ನಾಗರಾಜ್ ಕೂಡ ತಮ್ಮ ಹೊಸ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿ ಬಿಟ್ಟರು.

ಲವ್ ಮಾಕ್ಟೇಲ್ ಯಶಸ್ಸಿನ ನಂತರ ಲವ್ ಮಾಕ್ಟೇಲ್ 2 ಸಿನಿಮಾ ತೆರೆಕಾಣಲು ಸಜ್ಜಾಗುತ್ತಿದೆ. ಇದರ ನಡುವೆಯೇ ಕೃಷ್ಣ ಹಾಗೂ ಮಿಲನ ಅವರು ಫೆಬ್ರವರಿ 14 ರಂದು, ಅಂದರೆ ಪ್ರೇಮಿಗಳ ದಿನದಂದು ಸಪ್ತಪದಿ ತುಳಿಯಲಿದ್ದಾರೆ. ಆ ಮೂಲಕ ತಮ್ಮ ವೈವಾಹಿಕ ಜೀವನಕ್ಕೆ ಪ್ರವೇಶ ಮಾಡಲಿದ್ದಾರೆ. ಪ್ರಸ್ತುತ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಬಿಡುವು ಮಾಡಿಕೊಂಡು ತಮ್ಮ ಮದುವೆಯ ಆಮಂತ್ರಣವನ್ನು ನಟ-ನಟಿಯರಿಗೆ ಖುದ್ದಾಗಿ ನೀಡುತ್ತಿದ್ದಾರೆ. ಆ ಫೋಟೋಗಳು ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.

ಇನ್ನೂ ವಿಶೇಷ ಅಂದರೆ, ಲವ್ ಮಾಕ್ಟೇಲ್ ಗೆ ಸಿಕ್ಕ ಯಶಸ್ಸಿನ ಪರಿಣಾಮ ಇದೇ ಸಿನಿಮಾವನ್ನು ಈಗ ತೆಲುಗಿನಲ್ಲಿ ಕೂಡಾ ರಿಮೇಕ್ ಮಾಡಲಾಗುತ್ತಿದೆ. ಹೀಗಾಗಿ, ಸದ್ಯ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ತಮ್ಮ ಲವ್ ಮಾಕ್ಟೇಲ್ ಸಿನಿಮಾದ ತೆಲುಗು ರಿಮೇಕ್​ನಲ್ಲಿ ನಟಿಸುತ್ತಿರುವ ನಟನಟಿಯನ್ನು ಭೇಟಿಯಾಗಿರುವ ಫೋಟೋಗಳು ಎಲ್ಲರ ಗಮನವನ್ನು ಸೆಳೆಯುತ್ತಿದೆ.

ತೆಲುಗಿನಲ್ಲಿ ಲವ್ ಮಾಕ್ಟೇಲ್ ಸಿನಿಮಾ ಚಿತ್ರೀಕರಣ ಈಗಾಗಲೆ ಆರಂಭವಾಗಿದ್ದು, ಈ ಸಿನಿಮಾದಲ್ಲಿ ತೆಲುಗಿನ ನಟ ಸತ್ಯದೇವ್ ಮತ್ತು ಸೌತ್ ಸಿನಿಪ್ರಿಯರ ಫೇವರೇಟ್ ಮಿಲ್ಕಿ ಬ್ಯೂಟಿ ತಮನ್ನಾ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ನಟಿ ತಮನ್ನಾ ಅವರನ್ನು ನಟ ಕೃಷ್ಣ ಹಾಗೂ ನಟಿ ಮಿಲನಾ ಭೇಟಿ ಮಾಡಿದ್ದು ಅವರನ್ನು ಮದುವೆಗೆ ಆಹ್ವಾನ ಮಾಡಿದ್ದಾರೆ. ಈ ಫೋಟೋಗಳನ್ನು ನಟಿ ಮಿಲನಾ ನಾಗರಾಜ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮದುವೆ ಸಿದ್ಧತೆಯಲ್ಲಿರುವ ಲವ್​ ಮಾಕ್ಟೆಲ್​ ಜೋಡಿ ಡಾರ್ಲಿಂಗ್​ ಕೃಷ್ಣ-ಮಿಲನ​ ನಾಗರಾಜ್​ ಬ್ಯಾಚುಲರ್​ ಪಾರ್ಟಿ