ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ರಿಸೆಪ್ಷನ್ನಲ್ಲಿ.. ಯಶ್, ಸುದೀಪ್ ಡಾನ್ಸ್ ಧಮಾಕಾ!
ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಅವರ ಆರತಕ್ಷತೆ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ನಟರು ಆಗಮಿಸಿ ನವದಂಪತಿಗೆ ಶುಭಹಾರೈಸಿದರು. ಈ ವೇಳೆ, ಸಮಾರಂಭದಲ್ಲಿ ನಟ ನಟಿಯರ ಡಾನ್ಸ್ ಧಮಾಕಾ ಎಲ್ಲರ ಗಮನ ಸೆಳೆಯಿತು.
ಬೆಂಗಳೂರು: ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಅವರ ಆರತಕ್ಷತೆ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ನಟರು ಆಗಮಿಸಿ ನವದಂಪತಿಗೆ ಶುಭಹಾರೈಸಿದರು. ಈ ವೇಳೆ, ಸಮಾರಂಭದಲ್ಲಿ ನಟ ನಟಿಯರ ಡಾನ್ಸ್ ಧಮಾಕಾ ಎಲ್ಲರ ಗಮನ ಸೆಳೆಯಿತು.
ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಚ್ಚ ಸುದೀಪ್ ಅವರ ಜಬರ್ದಸ್ತ್ ಸ್ಟೆಪ್ಸ್ ನೋಡಿ ನೆರೆದವರು ಫುಲ್ ಫಿದಾ ಆದರು. ಈ ವೇಳೆ, ನಟರ ಪತ್ನಿಯರು, ನಟಿ ಹರ್ಷಿಕಾ ಪೂಣಚ್ಚಾ ಮತ್ತು ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ ಸಾಥ್ಕೊಟ್ಟರು.
ಅಂದ ಹಾಗೆ, ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಹಾಗೂ ಅಕ್ಷಯ್ ಡಿಸೆಂಬರ್ 28ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನಿನ್ನೆ ರಾತ್ರಿ ನಗರದ ಖಾಸಗಿ ಹೋಟೆಲ್ನಲ್ಲಿ ರಿಸೆಪ್ಷನ್ ಸಮಾರಂಭವನ್ನು ಆಯೋಜಿಸಲಾಗಿತ್ತು.
ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ, ಅಕ್ಷಯ್ ಆರತಕ್ಷತೆ: ಗಣ್ಯಾತಿಗಣ್ಯರಿಂದ ನವದಂಪತಿಗೆ ಶುಭಹಾರೈಕೆ
Published On - 5:44 pm, Sun, 17 January 21