AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೋಷಕರನ್ನು ನಮ್ಮ ಮೇಲೆ ಎತ್ತಿಕಟ್ಟುವ ಕೆಲಸ ಮಾಡಿದ್ದೀರಾ -ಸಚಿವ ಸುರೇಶ್ ಕುಮಾರ್​ ವಿರುದ್ಧ MLC ಪುಟ್ಟಣ್ಣ ಗರಂ

ಶಿಕ್ಷಣ ಸಂಸ್ಥೆಗಳಿಗೆ ಯಾವ ರೀತಿಯಲ್ಲಿ ನೆರವು ನೀಡಿದ್ದೀರಾ?ಆತ್ಮಸಾಕ್ಷಿ ಇದ್ದರೆ 20 ಜನರಿಗೆ ಕೆಲಸ ಕೊಟ್ಟು ಸಂಬಳ ಕೊಡಿ. ಪೋಷಕರನ್ನು ನಮ್ಮ ಮೇಲೆ ಎತ್ತಿಕಟ್ಟುವ ಕೆಲಸ ಮಾಡಿದ್ದೀರಾ ಎಂದು ತಮ್ಮ ಆಕ್ರೋಶ ಹೊರಹಾಕಿದರು.

ಪೋಷಕರನ್ನು ನಮ್ಮ ಮೇಲೆ ಎತ್ತಿಕಟ್ಟುವ ಕೆಲಸ ಮಾಡಿದ್ದೀರಾ -ಸಚಿವ ಸುರೇಶ್ ಕುಮಾರ್​ ವಿರುದ್ಧ MLC ಪುಟ್ಟಣ್ಣ ಗರಂ
ಸುರೇಶ್ ಕುಮಾರ್ (ಎಡ); ಪುಟ್ಟಣ್ಣ (ಬಲ)
KUSHAL V
|

Updated on: Feb 09, 2021 | 11:09 PM

Share

ಬೆಂಗಳೂರು: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ನಿಮ್ಮ ಕೊಡುಗೆ ಏನು? ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್​ಗೆ ಎಂಎಲ್​ಸಿ ಪುಟ್ಟಣ್ಣ ಪ್ರಶ್ನೆ ಹಾಕಿದ್ದಾರೆ. ಶಿಕ್ಷಣ ಸಂಸ್ಥೆಗಳಿಗೆ ಯಾವ ರೀತಿಯಲ್ಲಿ ನೆರವು ನೀಡಿದ್ದೀರಾ?ಆತ್ಮಸಾಕ್ಷಿ ಇದ್ದರೆ 20 ಜನರಿಗೆ ಕೆಲಸ ಕೊಟ್ಟು ಸಂಬಳ ಕೊಡಿ. ಪೋಷಕರನ್ನು ನಮ್ಮ ಮೇಲೆ ಎತ್ತಿಕಟ್ಟುವ ಕೆಲಸ ಮಾಡಿದ್ದೀರಾ ಎಂದು ತಮ್ಮ ಆಕ್ರೋಶ ಹೊರಹಾಕಿದರು.

ಇಂತಹ ಎಡಬಿಡಂಗಿ ವ್ಯಕ್ತಿಯನ್ನು ನಾನು ಈವರೆಗೆ ನೋಡಿಲ್ಲ. ಒಂದು ಕೈಗಾರಿಕೆಗೆ ಎಷ್ಟೆಲ್ಲಾ ಅನುಕೂಲ ಮಾಡಿಕೊಡುತ್ತೀರಾ. ಅದೇ ರೀತಿ, ಶಿಕ್ಷಣ ಸಂಸ್ಥೆಗಳಿಗೆ ಏನು ಸೌಕರ್ಯ ನೀಡಿದ್ದೀರಾ? ನಾನು ಭಾರತೀಯ ಜನತಾ ಪಕ್ಷಕ್ಕೆ ಹೊಸದಾಗಿ ಬಂದಿದ್ದೆ. ಚುನಾವಣೆ ಇದ್ದಿದ್ದರಿಂದ ನಾನು ಸುಮ್ಮನೆ ಇದ್ದೆ. ಆದರೆ, ಫೆಬ್ರವರಿ 23ರ ಬೃಹತ್ ಹೋರಾಟಕ್ಕೆ ನಾನು ಬರುತ್ತೇನೆ ಎಂದು ಪುಟ್ಟಣ್ಣ ಹೇಳಿದರು. ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಸುರೇಶ್ ಕುಮಾರ್​ ಕಚೇರಿಗೆ ಬೀಗಹಾಕಿ ಹೋರಾಟ ನಡೆಸುತ್ತೇವೆ ಎಂದು ಸಚಿವರ ವಿರುದ್ಧ ಪುಟ್ಟಣ್ಣ ಆಕ್ರೋಶ ವ್ಯಕ್ತಪಡಿಸಿದರು.

‘ಶಿಕ್ಷಣ ಸಚಿವರಿಗೆ 1 ಫುಡ್​ ಕಿಟ್​ ಕೊಡುವ ಯೋಗ್ಯತೆಯಿಲ್ಲ’ ಶೇ.50ಕ್ಕೂ ಹೆಚ್ಚು ಮಕ್ಕಳು ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ. ಶಿಕ್ಷಣ ಸಚಿವರಿಗೆ 1 ಫುಡ್​ ಕಿಟ್​ ಕೊಡುವ ಯೋಗ್ಯತೆಯಿಲ್ಲ. ಲಕ್ಷಾಂತರ ಜನರಿಗೆ ರಾಜ್ಯ ಸರ್ಕಾರವೇ ಫುಡ್​ಕಿಟ್​ ನೀಡಿದೆ. ಆದರೆ, ಶಿಕ್ಷಕರ ವರ್ಗ ಏನು ಮಾಡಿದೆ. ಶಿಕ್ಷಕರ ವರ್ಗಾವಣೆಯನ್ನು ಸಚಿವರು, ಸರ್ಕಾರ ಕಡೆಗಣಿಸಿದೆ. ಶಿಕ್ಷಕರಿಗೆ TDF​ ಹಣದಿಂದ 5-10 ಸಾವಿರ ಕೊಡ್ಬೇಕಿತ್ತು. ಜನರು ಸಾಯುವಾಗ ಕೊಡಬೇಕಿದ್ದ ಹಣವನ್ನು ಏಕೆ ಕೊಡ್ತಿಲ್ಲ? ಎಂದು ಪ್ರಶ್ನಿಸಿದರು.

ಪೋಷಕರು ಸಂಕಷ್ಟದಲ್ಲಿದ್ದಿರುವುದರಿಂದ ನಮಗೂ ಬೇಸರವಿದೆ. ಆದರೆ, ಶಿಕ್ಷಣ ಮಂತ್ರಿ ಏನು ಮಾಡುತ್ತಿಲ್ಲ ಅನ್ನೋದೆ ನಮಗೆ ಸಮಸ್ಯೆ. ಶಿಕ್ಷಣ ಮಂತ್ರಿಗೆ ಎಷ್ಟೇ ಮನವಿ ನೀಡಿದ್ರೂ ಸಹಕಾರ ನೀಡ್ತಿಲ್ಲ ಎಂದು ವಿಧಾನಪರಿಷತ್​ ಸದಸ್ಯ ಪುಟ್ಟಣ್ಣ ಆರೋಪಿಸಿದ್ದಾರೆ.

ಖಾಸಗಿ ಶಾಲೆಗಳ ಶುಲ್ಕ ಇಳಿಕೆ ವಿರೋಧಿಸಿ ಧರಣಿ ನಡೆಸುವುದಾಗಿ ಮಾಜಿ ಸಂಸದ ಶಿವರಾಮೇಗೌಡ ಎಚ್ಚರಿಕೆ ನೀಡಿದ್ದಾರೆ. ಫೆಬ್ರವರಿ 20ರಂದು ಶಿಕ್ಷಣ ಸಚಿವರಿಗೆ ಮನವಿ ನೀಡುತ್ತೇವೆ. ಫೆಬ್ರವರಿ 23ರೊಳಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ರೆ MLC ಪುಟ್ಟಣ್ಣ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳುತ್ತೇವೆ. ಪ್ರತಿಭಟನೆಯಲ್ಲಿ 50,000ಕ್ಕೂ ಹೆಚ್ಚು ಜನ ಭಾಗಿಯಾಗ್ತೇವೆ ಎಂದು ಹೇಳಿದರು.

ಫೆ.23ರಂದು ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಬೃಹತ್ ಪ್ರತಿಭಟನೆ ಫೆ.23ರಂದು ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನಾ ಱಲಿ ನಡೆಸಲು ಸಂಸ್ಥೆಗಳು ನಿರ್ಧಾರ ಕೈಗೊಂಡಿದೆ.

ಖಾಸಗಿ ಶಾಲೆಗಳಲ್ಲಿ ಶುಲ್ಕ ಸಂಬಂಧ ರೈಲ್ವೆ ನಿಲ್ದಾಣದಿಂದ ಬೃಹತ್ ಪ್ರತಿಭಟನಾ ಱಲಿ ನಡೆಸುವ ತೀರ್ಮಾನ ಮಾಡಲಾಗಿದೆ. ಖಾಸಗಿ ಶಾಲೆಗಳ ಶುಲ್ಕ ಕಡಿತ ಆದೇಶ ಪುನರ್ ಪರಿಶೀಲಿಸಬೇಕು. ಜೊತೆಗೆ, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗೆ ಅನುದಾನ ನೀಡುವಂತೆ ಸಂಸ್ಥೆಗಳು ಆಗ್ರಹಿಸಿವೆ.

ಹಿಂದಿನ ಶಾಲೆಗಳಿಗೆ ಕಟ್ಟಡ ಸುರಕ್ಷಿತ ಪ್ರಮಾಣ ಪತ್ರ ಕೈಬಿಡಬೇಕು. ಇದಲ್ಲದೆ, 1ರಿಂದ 5ನೇ ತರಗತಿವರೆಗೆ ಶಾಲೆಗಳನ್ನ ಆರಂಭಿಸುವಂತೆ ಆಗ್ರಹಿಸಿದ್ದಾರೆ. BEO ಹಾಗೂ DDPI ಭ್ರಷ್ಟಾಚಾರ ನಿಯಂತ್ರಿಸುವಂತೆ ಆಗ್ರಹಿಸಿದ್ದಾರೆ.

ಫೆ.23ರ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿಭಟನೆಗೆ ಬೆಂಬಲವಿಲ್ಲ -ರುಪ್ಸಾ ಇತ್ತ, ಫೆ.23ರ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿಭಟನೆಗೆ ಬೆಂಬಲವಿಲ್ಲ ಎಂದು ಸರ್ಕಾರದ ವಿರುದ್ಧದ ಹೋರಾಟದಿಂದ ರುಪ್ಸಾ ಹಿಂದೆ ಸರಿದಿದೆ. ಈ ಕುರಿತು, ರುಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸ್ಪಷ್ಟನೆ ಕೊಟ್ಟಿದ್ದಾರೆ.

ಶೇ.30ರಷ್ಟು ಶುಲ್ಕ ಕಡಿತ ನಿರ್ಧಾರಕ್ಕೆ ನಮ್ಮ ಸಹಮತವಿದೆ. ರಾಜ್ಯ ಸರ್ಕಾರದ ನಿರ್ಧಾರಕ್ಕೆ ನಮ್ಮ ಯಾವುದೇ ತಕರಾರಿಲ್ಲ ಎಂದು ರುಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.

School Fees ಟಾರ್ಚರ್​ಗೆ ಬೇಸತ್ತು ವಿದ್ಯಾರ್ಥಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನ