ರೂಪಾಂತರಿತ ವೈರಸ್​ಗೆ ಹೆಚ್ಚು ಶಕ್ತಿಯಿಲ್ಲ: ಉಪಮುಖ್ಯಮಂತ್ರಿ ಅಶ್ವತ್ಥ್​​ ನಾರಾಯಣ್​

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 28, 2020 | 8:54 PM

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನಲ್ಲಿ ಮಾತನಾಡಿದ ಅಶ್ವತ್ಥ್​​ ನಾರಾಯಣ, ರೂಪಾಂತರ ವೈರಸ್ ಬಹಳ ಬೇಗನೇ ಹರಡುತ್ತದೆ. ಆದರೆ, ಈ ವೈರಸ್ ಅಷ್ಟೇನೂ ಪರಿಣಾಮಕಾರಿ ಅಲ್ಲ ಎಂದರು.

ರೂಪಾಂತರಿತ ವೈರಸ್​ಗೆ ಹೆಚ್ಚು ಶಕ್ತಿಯಿಲ್ಲ: ಉಪಮುಖ್ಯಮಂತ್ರಿ ಅಶ್ವತ್ಥ್​​ ನಾರಾಯಣ್​
ಉಪ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ
Follow us on

ಬೆಂಗಳೂರು: ಇಂಗ್ಲೆಂಡ್​ನಲ್ಲಿ ರೂಪಾಂತರಿತ ಕೊರೊನಾ ವೈರಸ್​ ಕಾಣಿಸಿಕೊಂಡ ನಂತರ ವಿಶ್ವದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಕೆಲವರು ಈ ವೈರಸ್​ ಹೆಚ್ಚು ಹಾನಿ ಮಾಡಲಿದೆ ಎನ್ನುವ ವಾದವನ್ನು ಮುಂದಿಟ್ಟಿದ್ದರು. ಇದರಿಂದ ನಮ್ಮ ರಾಜ್ಯದ ಜನತೆಯಲ್ಲಿ ಭಾರೀ ಆತಂಕ ಸೃಷ್ಟಿಯಾಗಿತ್ತು. ಈ ಆತಂಕವನ್ನು ಉಪಮುಖ್ಯಮಂತ್ರಿ ಅಶ್ವತ್ಥ್​​ ನಾರಾಯಣ್ ದೂರ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಚನ್ನಕೇಶವಸ್ವಾಮಿ ದೇವಾಲಯಕ್ಕೆ ಡಿಸಿಎಂ ಅಶ್ವತ್ಥ್ ನಾರಾಯಣ್ ಕುಟುಂಬ ಸಮೇತ ಭೇಟಿ ನೀಡಿದರು. ದೇವಾಲಯದ ಪಕ್ಕದಲ್ಲಿ ಬ್ರಾಹ್ಮಣ ಟ್ರಸ್ಟ್ ನಿರ್ಮಿಸಿರುವ ಕೇಶವ ಭವನದ ಲಿಫ್ಟ್​​ ಉದ್ಘಾಟನೆ ಕೂಡ ಮಾಡಿದರು. ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು, ರೂಪಾಂತರಿತ ವೈರಸ್ ಬಹಳ ಬೇಗನೇ ಹರಡುತ್ತದೆ. ಆದರೆ, ಈ ವೈರಸ್ ಅಷ್ಟೇನೂ ಪರಿಣಾಮಕಾರಿ ಅಲ್ಲ. ಮುಂಬರುವ ದಿನಗಳಲ್ಲಿ ವೈರಸ್​ ಶಕ್ತಿ ಮತ್ತಷ್ಟು ಕುಗ್ಗಲಿದೆ ಎಂದರು.

ಬ್ರಿಟನ್​ನಲ್ಲಿ ಕೊರೊನಾ ವೈರಾಣು ಹೊಸ ಅವತಾರ ತಾಳಿತ್ತು. ಈ ಮೂಲಕ 2ನೇ ಅಲೆಯ ಭೀತಿಯಿಂದ ಬ್ರಿಟನ್​ ಮತ್ತೆ ಲಾಕ್​ಡೌನ್​ ಮೊರೆ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ. ಕೊರೊನಾ ಮೊದಲ ಅಲೆಗಿಂತಲೂ 2ನೇ ಅಲೆ ಭೀಕರ ಮತ್ತು ಅಪಾಯಕಾರಿ ಎಂಬ ವಾದಗಳು ಕೇಳಿ ಬಂದಿದ್ದವು. ಹೀಗಾಗಿ, ಇತರೆ ದೇಶಗಳಿಂದ ಬ್ರಿಟನ್ನಿಗೆ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನಯಾನ ಸ್ಥಗಿತಗೊಳಿಸಲಾಗಿದೆ.

ಕೊರೊನಾ ವೈರಸ್​ 19 ಬಗೆಯ ರೂಪಾಂತರ ಪತ್ತೆ

 

Published On - 8:53 pm, Mon, 28 December 20