ಕರ್ನಾಟಕದಲ್ಲಿ ಮನಿ ಲ್ಯಾಂಡರಿಂಗ್ ಆಗ್ತಾಯಿದೆ: ಬಿಜೆಪಿ ವಿರುದ್ಧ ಸುರ್ಜೇವಾಲಾ ಕಿಡಿ

| Updated By: ಗಂಗಾಧರ​ ಬ. ಸಾಬೋಜಿ

Updated on: Apr 21, 2024 | 5:01 PM

ಚಾಮರಾಜನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ರಾಜ್ಯ ಚುನಾವಣಾ ಉಸ್ತುವಾರಿ ರಣ್ ದೀಪ್ ಸಿಂಗ್ ಸುರ್ಜೇವಾಲ, ರಾಜ್ಯದಲ್ಲಿ ಬಿಜೆಪಿ ನಾಯಕರು ಕೋಟಿ ಗಟ್ಟಲೆ ಹಣವನ್ನು ಕಾರಿನಲ್ಲಿ ವರ್ಗಾವಣೆ ಮಾಡುತ್ತಿದ್ದಾರೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಕೋಟಿಗಟ್ಟಲೇ ಹಣ ಡ್ರಾ ಮಾಡಿದ್ದಾರೆ. ಕರ್ನಾಟಕದಲ್ಲಿ ಮನಿ ಲ್ಯಾಂಡರಿಂಗ್ ಆಗುತ್ತಿದೆ. ಕರ್ನಾಟಕ ಜನತೆಗೆ ಬಿಜೆಪಿ ಈ ಬಗ್ಗೆ ಉತ್ತರಿಸಬೇಕಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಮನಿ ಲ್ಯಾಂಡರಿಂಗ್ ಆಗ್ತಾಯಿದೆ: ಬಿಜೆಪಿ ವಿರುದ್ಧ ಸುರ್ಜೇವಾಲಾ ಕಿಡಿ
ಸುರ್ಜೇವಾಲ
Follow us on

ಚಾಮರಾಜನಗರ, ಏಪ್ರಿಲ್​ 21: ಕರ್ನಾಟಕದಲ್ಲಿ ಮನಿ ಲ್ಯಾಂಡರಿಂಗ್ ಆಗುತ್ತಿದೆ. ಭಾರತೀಯ ಜನತಾ ಪಾರ್ಟಿ (BJP) ಕರ್ನಾಟಕ ಜನತೆಗೆ ಉತ್ತರಿಸಬೇಕಾಗಿದೆ ಎಂದು ಕಾಂಗ್ರೆಸ್ ರಾಜ್ಯ ಚುನಾವಣಾ ಉಸ್ತುವಾರಿ ರಣ್ ದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ವಾಗ್ದಾಳಿ ಮಾಡಿದ್ದಾರೆ. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದಕ್ಕೆ ನೇರವಾಗಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್​. ಅಶೋಕ್ ಉತ್ತರಿಸಬೆಕಾಗಿದೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ನಾಯಕರು ಕೋಟಿ ಗಟ್ಟಲೆ ಹಣ ಕಾರಿನಲ್ಲಿ ವರ್ಗಾವಣೆ ಮಾಡುತ್ತಿದ್ದಾರೆ

ರಾಜ್ಯದಲ್ಲಿ ಬಿಜೆಪಿ ನಾಯಕರು ಕೋಟಿ ಗಟ್ಟಲೆ ಹಣವನ್ನು ಕಾರಿನಲ್ಲಿ ವರ್ಗಾವಣೆ ಮಾಡುತ್ತಿದ್ದಾರೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಕೋಟಿಗಟ್ಟಲೇ ಹಣ ಡ್ರಾ ಮಾಡಿದ್ದಾರೆ. ಮಾರ್ಚ್ 27 ರಂದು ಹಣವನ್ನ ಡ್ರಾ ಮಾಡಿದ್ದಾರೆ ಒಂದು ತಿಂಗಳ ಬಳಿಕ ಆ ಹಣವನ್ನ ತೆಗೆದುಕೊಂಡು ಹೋಗುತ್ತಿದ್ದಾರೆ. 10 ಕಿಲೋ ಮೀಟರ್ ಹಣವನ್ನ ವರ್ಗಾವಣೆ ಮಾಡಲು ಒಂದು ತಿಂಗಳು ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ದೇವೇಗೌಡರೇ ನೀವು ಮೋದಿಯವರನ್ನು ಹೊಗಳಲು ಸುಳ್ಳು ಹೇಳಿದ್ದು ಸರಿಯೇ: ಸಿದ್ದರಾಮಯ್ಯ ಪ್ರಶ್ನೆ

ಮೈಸೂರು ಚಾಮರಾಜನಗರಕ್ಕೆ ಈ ಹಣ ಬಂದು ತಲುಪಿದೆ. ಆದಾಯ ತೆರಿಗೆ ಇಲಾಖೆ ಕೇಂದ್ರ ಸರ್ಕಾರದ ಪರವಿದೆ. ಕೇಂದ್ರ ಚುನಾವಣಾ ಆಯೋಗದ ನಡೆ ಅಸಮಾಧಾನ ಹುಟ್ಟು ಹಾಕುತ್ತಿದ್ದೆ ಎಂದು ಮಾತಿನುದ್ದಕ್ಕೂ ಬಿಜೆಪಿಯ ನಾಯಕರು ಹಾಗೂ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದರು.

ಯಾವುದೇ ಕಾರಣಕ್ಕೂ ಈ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ

1.25 ಕೋಟಿ ಮಹಿಳೆಯರು ಗ್ಯಾರಂಟಿ ಯೋಜನೆಯ ಪಲಾನುಭವಿಗಳು ಇದ್ದಾರೆ. ಮಹಿಳೆಯರಿಗೆ ಹಣ ತಲುಪುತ್ತಿರುವುದನ್ನ ತಡೆಯಲು ಬಿಜೆಪಿ ಯತ್ನಿಸುತ್ತಿದೆ. ಗ್ಯಾರಂಟಿ ಯೋಜನೆಯಿಂದ ಬಿಜೆಪಿಗೆ ಏನು ಸಮಸ್ಯೆಯಾಗಿದೆ. ನಾವು ಯಾವುದೇ ಕಾರಣಕ್ಕೂ ಈ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ. ಜನರ ಆಶೀರ್ವಾದ ಇದ್ದರೆ ಕೇವಲ ಐದು ವರ್ಷ ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿಯೂ ಗ್ಯಾರಂಟಿ ನಿಲ್ಲಿಸಲ್ಲ ಎಂದು ಹೇಳಿದ್ದಾರೆ.

ಜೂನ್ 4ಕ್ಕೆ ಮೋದಿ ಕೆಳಗಿಳಿಯುತ್ತಾರೆ ಅದನ್ನು ನೀವು ನೋಡುತ್ತೀರಾ. ಭದ್ರ ಯೋಜನೆ ಏನಾಯ್ತು ನ್ಯಾಷನಲ್ ಹೈವೆ ಕಾಮಗಾರಿ ಏನಾಯ್ತು? ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಎಂದ ಕೇಂದ್ರ ಸರ್ಕಾರ ಈಗ ರೈತರ ಕೈಗೆ ಚೊಂಬು ಕೊಟ್ಟಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದಲ್ಲಿ ಕನ್ನಡಿಗರ ಬದುಕಿಗೆ ಗ್ಯಾರಂಟಿ ಇಲ್ಲ: ಯಡಿಯೂರಪ್ಪ

ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯುವಕರಿದ್ದು, ಉತ್ಸಾಹಕರಿದ್ದಾರೆ. ಈ ಬಾರಿ ಕಾಂಗ್ರೆಸ್ ನಿಂದ ಅತಿ ಹೆಚ್ಚು ಯುವಕರಿಗೆ ಅವಕಾಶ ಮಾಡಿ ಕೊಟ್ಟಿದೆ. 28 ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚಾಗಿ ಯುವಕರಿಗೆ ಅವಕಾಶವನ್ನ ನಮ್ಮ ಪಕ್ಷ, ನಮ್ಮ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಡಿ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.