ನಂಜನಗೂಡು ಕೋರ್ಟ್​​ಗೆ ಬಂದ ಕುಚಿಕು ಕುಚಿಕು ಗೆಳೆಯರು!

|

Updated on: Nov 11, 2019 | 1:43 PM

ಮೈಸೂರು: ನಾಯಿಗಳು ಕೋತಿಗಳು ಒಬ್ಬರನೊಬ್ಬರು ನೋಡಿದರೆ ಎರಗುವುದು ಸಾಮಾನ್ಯ. ಆದರೆ ಇಲ್ಲಿ ಕೋತಿ ಮತ್ತು ನಾಯಿ ಮರಿಯ ಅಪರೂಪದ ಸ್ನೇಹ ನಂಜನಗೂಡಿನಲ್ಲಿ ಕಂಡುಬಂದಿದೆ. ಇವರಿಬ್ಬರ ಸ್ನೇಹಕ್ಕೆ ಜನ ಫಿದಾ ಆಗಿದ್ದಾರೆ. ಪ್ರವಾಹದ ಸಂದರ್ಭದಲ್ಲಿ ಗುಂಪಿನಿಂದ ತಪ್ಪಿಸಿಕೊಂಡು ಬಂದಿರುವ ಕೋತಿ ನಂಜನಗೂಡಿನ ಕೋರ್ಟ್ ನಲ್ಲಿ ಕೆಲಸ ಮಾಡುವ ಬಣ್ಣಾರಿ‌ ಎಂಬುವವರು ಸಾಕಿರುವ ನಾಯಿ ಮರಿಯ ಜೊತೆ ಸ್ನೇಹ ಬೆಳೆಸಿಕೊಂಡಿದೆ. ಇವರಿಬ್ಬರ ಸ್ನೇಹ ಒಂದೆ ತಾಯಿಯ ಮಕ್ಕಳಂತಿದೆ. ಒಂದಕ್ಕೊಂದು‌ ಮುದ್ದಾಡುತ್ತ ಕುಚಿಕು ಗೆಳೆಯರಂತೆ ಆಟವಾಡುತ್ತವೆ. ಕೋರ್ಟ್ ಆವರಣಕ್ಕೆ ಬಂದ ಜನರಿಗೆ […]

ನಂಜನಗೂಡು ಕೋರ್ಟ್​​ಗೆ  ಬಂದ ಕುಚಿಕು ಕುಚಿಕು ಗೆಳೆಯರು!
Follow us on

ಮೈಸೂರು: ನಾಯಿಗಳು ಕೋತಿಗಳು ಒಬ್ಬರನೊಬ್ಬರು ನೋಡಿದರೆ ಎರಗುವುದು ಸಾಮಾನ್ಯ. ಆದರೆ ಇಲ್ಲಿ ಕೋತಿ ಮತ್ತು ನಾಯಿ ಮರಿಯ ಅಪರೂಪದ ಸ್ನೇಹ ನಂಜನಗೂಡಿನಲ್ಲಿ ಕಂಡುಬಂದಿದೆ. ಇವರಿಬ್ಬರ ಸ್ನೇಹಕ್ಕೆ ಜನ ಫಿದಾ ಆಗಿದ್ದಾರೆ.

ಪ್ರವಾಹದ ಸಂದರ್ಭದಲ್ಲಿ ಗುಂಪಿನಿಂದ ತಪ್ಪಿಸಿಕೊಂಡು ಬಂದಿರುವ ಕೋತಿ ನಂಜನಗೂಡಿನ ಕೋರ್ಟ್ ನಲ್ಲಿ ಕೆಲಸ ಮಾಡುವ ಬಣ್ಣಾರಿ‌ ಎಂಬುವವರು ಸಾಕಿರುವ ನಾಯಿ ಮರಿಯ ಜೊತೆ ಸ್ನೇಹ ಬೆಳೆಸಿಕೊಂಡಿದೆ. ಇವರಿಬ್ಬರ ಸ್ನೇಹ ಒಂದೆ ತಾಯಿಯ ಮಕ್ಕಳಂತಿದೆ. ಒಂದಕ್ಕೊಂದು‌ ಮುದ್ದಾಡುತ್ತ ಕುಚಿಕು ಗೆಳೆಯರಂತೆ ಆಟವಾಡುತ್ತವೆ.

ಕೋರ್ಟ್ ಆವರಣಕ್ಕೆ ಬಂದ ಜನರಿಗೆ ಇವರಿಬ್ಬರ ಸ್ನೇಹ, ಪ್ರೀತಿ ಆಟವೇ ಮನರಂಜನೆ ನೀಡುತ್ತಿದೆ. ಈ ಕೋತಿಯು ಆಶ್ರಯ ಕೊಟ್ಟವರ ಜೊತೆ ಮಗುವಂತೆ ಹೆಗಲ ಮೇಲೆ, ತಲೆ ಮೇಲೆ ಕುಳಿತು ಆಟವಾಡುತ್ತೆ. ಸದ್ಯ ಕೋರ್ಟ್ ಆವರಣವೇ ಇವುಗಳ ಆಶ್ರಯ ತಾಣವಾಗಿದೆ.

Published On - 12:44 pm, Mon, 11 November 19