ಬೆಂಗಳೂರು: ಜಯನಗರದಲ್ಲಿ ನಾಯಿ ಮೇಲೆ ಫೈರಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡು ಹಾರಿಸಿದ್ದ ವೃದ್ಧರೊಬ್ಬರನ್ನ ಬಂಧಿಸಿ, ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಫೈರಿಂಗ್ ಮಾಡಿದ್ದು ಶ್ಯಾಮಸುಂದರ್(83) ಎಂದು ತಿಳಿದುಬಂದಿದ್ದು, ಇವರು ನಿಮ್ಹಾನ್ಸ್ನ ನಿವೃತ್ತ ಪ್ರೊಫೆಸರ್ ಆಗಿದ್ದಾರೆ. ಈ ಮಧ್ಯೆ, ಗಾಯಾಳು ನಾಯಿಗೆ ಜಯನಗರದ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಅಪಾಯದಿಂದ ಪಾರಾಗಿದೆ.
ನಾಯಿಯ ಕಾಟಕ್ಕೆ ಬೇಸತ್ತು ಫೈರ್ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿರುವ ಆರೋಪಿ ನಿಮ್ಹಾನ್ಸ್ ಪ್ರೊಫೆಸರ್, ತಮ್ಮ ತೋಟದಲ್ಲಿ ಗಲೀಜು ಮಾಡಿದ್ದಕ್ಕೆ ಗುಂಡು ಹಾರಿಸಿದ್ದಾಗಿ ಹೇಳಿದ್ದಾರೆ. ಪ್ರವೀಣ್ ಎಂಬುವವರು ಘಟನೆಯ ಬಗ್ಗೆ ದೂರು ನೀಡಿದ್ದರು. ಈ ಬಗ್ಗೆ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಆರೋಪಿಯನ್ನ ಬಂಧಿಸಿ, ಬಳಿಕ ಬಿಡುಗಡೆ ಮಾಡಲಾಗಿದೆ.