ಕಣ್ಸನ್ನೆ ಬೆಡಗಿ ಪ್ರಿಯಾ ಮೇಲೆ ನವರಸ ನಾಯಕ ಕೆಂಗಣ್ಣು ಬೀರಿದ್ದು ಯಾಕೆ?

ಕಣ್ಸನ್ನೆ ಬೆಡಗಿ ಪ್ರಿಯಾ ಮೇಲೆ ನವರಸ ನಾಯಕ ಕೆಂಗಣ್ಣು ಬೀರಿದ್ದು ಯಾಕೆ?

ಬೆಂಗಳೂರು: ದಿನಬೆಳಗಾಗೋದರೊಳಗೆ ಇಂಟರ್ನೆಟ್​ ಸೆನ್ಸೇಷನ್​ ಆಗಿ ಖ್ಯಾತಿಗೆ ಬಂದವಳು ಕಣ್ ಸನ್ನೆ ಬೆಡಗಿ ಪ್ರಿಯಾ ವಾರಿಯರ್. ಅದೊಂದೇ ಸಾಧನೆಯೆಂದು ಸಿನಿರಂಗದಲ್ಲೂ ಚಾಲ್ತಿಗೂ ಬಂದವಳು. ಇಂತಹ ಬೆಡಗಿ ಮೇಲೆ ನಮ್ಮ ನವರಸ ನಾಯಕ ಜಗ್ಗೇಶ್ ನಿಗಿನಿಗಿ ಕೆಂಗಣ್ಣು ಬೀರಿದ್ದಾರೆ.

ಪ್ರಿಯಾ ವಾರಿಯರ್ ವಿರುದ್ಧ ಕಿರಿಕಾರಿದ ನಟ ಜಗ್ಗೇಶ್​: ಪ್ರಿಯಾ ವಾರಿಯರ್ ಬಗ್ಗೆ ಯಾರೀಕೆ ಎಂದು ಪ್ರಶ್ನೆ ಹಾಕಿರುವ ಜಗ್ಗಣ್ಣ, ಸಂದರ್ಭವೊಂದನ್ನು ಉಲ್ಲೇಖಿಸುತ್ತಾ ಇನ್ಸ್​ಟಾಗ್ರಾಮ್ ನಲ್ಲಿ ಸುದೀರ್ಘ ಲೇಖನವನ್ನೇ ಬರೆದಿದ್ದಾರೆ.

ಏನಾಯ್ತೆಂದ್ರೆ, ಒಕ್ಕಲಿಗರ ವಿದ್ಯಾಸಂಸ್ಥೆ ವಾರ್ಷಿಕೋತ್ಸವ ಸಮಾರಂಭಕ್ಕೆ ಜಗ್ಗೇಶ್ ಅತಿಥಿಯಾಗಿ ಹೋಗಿದ್ರು.ಅಲ್ಲಿ ವೇದಿಕೆ ಮೇಲೆ ಪ್ರಿಯಾ ವಾರಿಯರನ್ನ ಕಂಡು ಬೇಸರಗೊಂಡಿದ್ದಾರೆ. ಕಣ್ಣು ಹೊಡೆದ ಈ ನಟಿ ಎಲ್ಲಾ ಗಣ್ಯರಿಗಿಂತ ಯುವ ಸಮಾಜಕ್ಕೆ ದೇವತೆಯಂತೆ ಕಾಣ್ತಿದ್ದಾಳೆ ವಿಡಿಯೋದಲ್ಲಿ. ಅಬ್ಬಕ್ಕನಲ್ಲ, ಸಾಲುಮರದ ತಿಮ್ಮಕ್ಕನಲ್ಲ, ಹಸಿದವರಿಗೆ ಅನ್ನ ಇಟ್ಟ ತಾಯಿಯಲ್ಲ. ಬದುಕು, ದೇಶ, ಶಿಕ್ಷಕ, ಸಾಧಕರು ಎಲ್ಲರಿಗಿಂತ ಇಂಥ ಕ್ಷಣಿಕ ಹೆಸ್ರು ಮಾಡಿದ್ದನ್ನು ಆರಾಧಿಸೋರು ನಮ್ಮ ಸಂಸ್ಕೃತಿ ಉಳಿಸ್ತಾರಾ? ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

Published On - 4:53 pm, Mon, 11 November 19

Click on your DTH Provider to Add TV9 Kannada