ಪ್ರಯಾಣಿಕರೆ ಗಮನಿಸಿ.. ಈ ಮಾರ್ಗದಲ್ಲಿ 4 ದಿನ ಮೆಟ್ರೋ ಸೇವೆ ಇರಲ್ಲ..!

sadhu srinath

sadhu srinath |

Updated on: Nov 10, 2019 | 9:40 PM

ಬೆಂಗಳೂರು: ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದ ಕಾಮಗಾರಿ ಹಿನ್ನೆಲೆಯಲ್ಲಿ ನ.14ರಂದು ಆರ್.ವಿ.ರಸ್ತೆಯಿಂದ ಯಲಚೇನಹಳ್ಳಿ ನಡುವಿನ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತವಾಗಲಿದೆ. ಆರ್​ವಿ ರಸ್ತೆಯಲ್ಲಿ ಇಂಟರ್ ಚೇಂಜ್ ನಿಲ್ದಾಣ ನಿರ್ಮಾಣವಾಗುತ್ತಿರುವ ಕಾರಣ ಆರ್.ವಿ.ರಸ್ತೆ-ಯಲಚೇನಹಳ್ಳಿ ಮಾರ್ಗದಲ್ಲಿ ನ.14ರಿಂದ ನ.17ರವರೆಗೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ನ.14ರ ಬೆಳಗ್ಗೆ 5 ಗಂಟೆಯಿಂದಲೇ ಮೆಟ್ರೋ ಸಂಚಾರ ಸ್ಥಗಿತವಾಗಲಿದ್ದು, ನ.17ರ ರಾತ್ರಿ 11 ಗಂಟೆವರೆಗೂ ಸಹ ಮೆಟ್ರೋ ಸೇವೆ ಇರುವುದಿಲ್ಲ. ಹೀಗಾಗಿ ಆರ್​.ವಿ.ರಸ್ತೆಯ ಮೆಟ್ರೋ ನಿಲ್ದಾಣದಿಂದ ಯಲಚೇನಹಳ್ಳಿವರೆಗೆ ನಮ್ಮ ಮೆಟ್ರೋ ಸಂಸ್ಥೆ ​ ಬಿಎಂಟಿಸಿ ಬಸ್ ಸೌಲಭ್ಯವನ್ನು […]

ಪ್ರಯಾಣಿಕರೆ ಗಮನಿಸಿ.. ಈ ಮಾರ್ಗದಲ್ಲಿ 4 ದಿನ ಮೆಟ್ರೋ ಸೇವೆ ಇರಲ್ಲ..!

ಬೆಂಗಳೂರು: ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದ ಕಾಮಗಾರಿ ಹಿನ್ನೆಲೆಯಲ್ಲಿ ನ.14ರಂದು ಆರ್.ವಿ.ರಸ್ತೆಯಿಂದ ಯಲಚೇನಹಳ್ಳಿ ನಡುವಿನ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತವಾಗಲಿದೆ.

ಆರ್​ವಿ ರಸ್ತೆಯಲ್ಲಿ ಇಂಟರ್ ಚೇಂಜ್ ನಿಲ್ದಾಣ ನಿರ್ಮಾಣವಾಗುತ್ತಿರುವ ಕಾರಣ ಆರ್.ವಿ.ರಸ್ತೆ-ಯಲಚೇನಹಳ್ಳಿ ಮಾರ್ಗದಲ್ಲಿ ನ.14ರಿಂದ ನ.17ರವರೆಗೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ನ.14ರ ಬೆಳಗ್ಗೆ 5 ಗಂಟೆಯಿಂದಲೇ ಮೆಟ್ರೋ ಸಂಚಾರ ಸ್ಥಗಿತವಾಗಲಿದ್ದು, ನ.17ರ ರಾತ್ರಿ 11 ಗಂಟೆವರೆಗೂ ಸಹ ಮೆಟ್ರೋ ಸೇವೆ ಇರುವುದಿಲ್ಲ. ಹೀಗಾಗಿ ಆರ್​.ವಿ.ರಸ್ತೆಯ ಮೆಟ್ರೋ ನಿಲ್ದಾಣದಿಂದ ಯಲಚೇನಹಳ್ಳಿವರೆಗೆ ನಮ್ಮ ಮೆಟ್ರೋ ಸಂಸ್ಥೆ ​ ಬಿಎಂಟಿಸಿ ಬಸ್ ಸೌಲಭ್ಯವನ್ನು ಕಲ್ಪಿಸಿದೆ.

ಜಯನಗರ-ನಾಗಸಂದ್ರ ಮಾರ್ಗದ ಸಂಚಾರದಲ್ಲಿ ಯಾವುದೇ ವ್ಯತ್ಯಯವಿರುವುದಿಲ್ಲ. ಈ ಮಾರ್ಗದಲ್ಲಿ ಎಂದಿನಂತೆ ಮೆಟ್ರೋ ಸೇವೆ ಲಭ್ಯವಿರಲಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada