ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ (Monkey Fever) ಗ್ರಾಮ ಪಂಚಾಯತ್ ಸದಸ್ಯ ಬಲಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯತ್ ಸದಸ್ಯ (Gram Panchayat member) ರಾಮಸ್ವಾಮಿ ಕರುಮನೆ (55) ಮೃತಪಟ್ಟವರು. ಚಿಕಿತ್ಸೆ ಫಲಿಸದೇ ಮಣಿಪಾಲ್ ಆಸ್ಪತ್ರೆಯಲ್ಲಿ ರಾಮಸ್ವಾಮಿ ಕೊನೆಯುಸಿರೆಳೆದಿದ್ದಾರೆ. ರಾಮಸ್ವಾಮಿಗೆ ಏಪ್ರಿಲ್ 24ರಂದು ಜ್ವರ ಕಾಣಿಸಿಕೊಂಡಿದ್ದು, ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಗುಣಮುಖವಾಗದೆ, ಕಾಯಿಲೆ ಉಲ್ಬಣಗೊಂಡ ಪರಿಣಾಮ ಮಣಿಪಾಲ ಕಸ್ತೂರಬಾ ಆಸ್ಪತ್ರೆಗೆ ಏಪ್ರಿಲ್ 26 ರಂದು ದಾಖಲು ಮಾಡಲಾಗಿತ್ತು.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕಳೆದ ತಿಂಗಳು ಮಂಗನ ಕಾಯಿಲೆಗೆ 85 ವರ್ಷದ ವೃದ್ಧೆ ಜಾನಕಿ ಹೆಗಡೆ ಬಲಿಯಾಗಿದ್ದಾರೆ. ಸಿದ್ದಾಪುರದಲ್ಲಿ ಒಂದು ವಾರದಲ್ಲಿ ಮಂಗನ ಕಾಯಿಲೆಯ 8 ಸೋಂಕಿತರು ಪತ್ತೆಯಾಗಿದ್ದಾರೆ. ಸಿದ್ದಾಪುರ ತಾಲೂಕಿನ ಹಲಗೇರಿ, ಕೋಲ್ ಸಿರ್ಸಿ, ಕಾನಸೂರು, ಬೀಳಗಿ ಗ್ರಾಮದಲ್ಲಿ ಹೊನ್ನಾವರ ತಾಲೂಕಿನ ಗೇರುಸೊಪ್ಪದಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಒಂದೇ ವಾರದಲ್ಲಿ 8 ಸೋಂಕಿತರು ಪತ್ತೆಯಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಮಂಗನ ಕಾಯಿಲೆ ತಡೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹೇಳಿದ್ದಾರೆ.
ವೀರಾಜಪೇಟೆ: ಮರ ಕಡಿಯುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಕಾರ್ಮಿಕ ಸಾವು
ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದ ಕಾಫಿ ತೋಟದಲ್ಲಿ ಮರ ಕಡಿಯುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಪಣಿಯರವರ ತೋಲ (38) ಎಂಬ ಕಾರ್ಮಿಕ ಮೃತಪಟ್ಟಿದ್ದಾರೆ. ಕೊಡಗು ಜಿಲ್ಲೆಯ ವೀರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೆ. ಅಯ್ಯಪ್ಪ ಎಂಬವರ ಕಾಫಿ ತೋಟದಲ್ಲಿ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ:
ದೇವಿಯ ತಾಳಿ ಕದ್ದು, 101 ರೂ ತಪ್ಪು ಕಾಣಿಕೆ ಸಮೇತ ತಾಳಿ ವಾಪಸ್ ಮಾಡಿದ ಕಳ್ಳರು!
ಇದನ್ನೂ ಓದಿ:
ಹಳೆ ಕಾಯಿನ್ ಗೆ ಕೋಟ್ಯಂತರ ರೂ ಆಮಿಷ! 26 ಲಕ್ಷ ಕೊಟ್ಟು ಮೋಸ ಹೋದ ವ್ಯಕ್ತಿ, ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡ್ಕೊಂಡ
Published On - 4:16 pm, Tue, 3 May 22