ಚಿಕ್ಕಬಳ್ಳಾಪುರ: ಕೋತಿಗಳಿಗೆ ವಿಷ ಉಣಿಸಿ ಅಮಾನುಷವಾಗಿ ಕೊಂದ ಕಿರಾತಕರು
ವಿಷಪೂರಿತ ಆಹಾರ ಕೊಟ್ಟು ಕೋತಿಗಳನ್ನ ದುಷ್ಕರ್ಮಿಗಳು ಕೊಂದು ಹಾಕಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚನ್ನಬೈರೇನಹಳ್ಳಿಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ: ವಿಷಪೂರಿತ ಆಹಾರ ಕೊಟ್ಟು ಕೋತಿಗಳನ್ನ ದುಷ್ಕರ್ಮಿಗಳು ಕೊಂದು ಹಾಕಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚನ್ನಬೈರೇನಹಳ್ಳಿಯಲ್ಲಿ ನಡೆದಿದೆ.
ಇನ್ನು, ವಿಷಾಹಾರವನ್ನು ಸೇವಿಸಿ ಕೆಲವು ಕೋತಿಗಳು ಮೃತಪಟ್ಟಿದ್ದರೆ ಮತ್ತೆ ಕೆಲವು ಕೋತಿಗಳ ಸ್ಥಿತಿ ಗಂಭೀರವಾಗಿದೆ. ಈ ನಡುವೆ, ಕೋತಿಗಳ ಕಳೆಬರ ಸಾಗಿಸಲು ಬಂದವರ ವಿರುದ್ಧ ಗ್ರಾಮಸ್ಥರು ತಮ್ಮ ಆಕ್ರೋಶ ಹೊರಹಾಕಿದರು.
ಕಳೆಬರ ಸಾಗಿಸುತ್ತಿದ್ದ ಟ್ರ್ಯಾಕ್ಟರ್ನ ತಡೆದು ಗ್ರಾಮಸ್ಥರು ತಮ್ಮ ಆಕ್ರೋಶ ಹೊರಹಾಕಿದರು. ಇದಲ್ಲದೆ ಗ್ರಾಮಸ್ಥರು, ಟ್ರ್ಯಾಕ್ಟರ್ ಚಾಲಕನನ್ನ ವಶಕ್ಕೆ ಪಡೆದರು. ಈ ವೇಳೆ, ಟ್ರ್ಯಾಕ್ಟರ್ನಲ್ಲಿದ್ದ ನಾಲ್ವರು ಯುವಕರು ಪರಾರಿಯಾದರು.
ನೂರಾರು ಎಕರೆ ಅರಣ್ಯ ಪ್ರದೇಶಕ್ಕೆ ಹಬ್ಬಿದ ಕಾಡ್ಗಿಚ್ಚಿಗಿಂತ.. ಅಧಿಕಾರಿಗಳಿಗೆ ಅರಣ್ಯ ಸಚಿವರ ಸಭೆಯೇ ಮುಖ್ಯವಾಯ್ತಾ?