Monsoon 2022: ಕೇರಳಕ್ಕೆ ಮುಂಗಾರು ಪ್ರವೇಶ; ಜೂನ್ ಮೊದಲ ವಾರದಲ್ಲಿ ಕರ್ನಾಟಕದಲ್ಲಿ ಮಾನ್ಸೂನ್ ಶುರು

| Updated By: ಸುಷ್ಮಾ ಚಕ್ರೆ

Updated on: May 29, 2022 | 6:16 PM

Kerala Monsoon: ಸಾಮಾನ್ಯವಾಗಿ ಪ್ರತಿವರ್ಷ ಜೂನ್ 1ರಂದು ಕೇರಳದಲ್ಲಿ ಮುಂಗಾರು ಪ್ರವೇಶವಾಗುತ್ತದೆ. ಆದರೆ, ಈ ಬಾರಿ ಮೂರು ದಿನ ಮೊದಲೇ ಮಾನ್ಸೂನ್ ಪ್ರವೇಶವಾಗಿದೆ.

Monsoon 2022: ಕೇರಳಕ್ಕೆ ಮುಂಗಾರು ಪ್ರವೇಶ; ಜೂನ್ ಮೊದಲ ವಾರದಲ್ಲಿ ಕರ್ನಾಟಕದಲ್ಲಿ ಮಾನ್ಸೂನ್ ಶುರು
ರಾಜ್ಯದಲ್ಲಿ ವರುಣನ ಆರ್ಭಟ
Follow us on

ಬೆಂಗಳೂರು: ಕೇರಳಕ್ಕೆ ಮುಂಗಾರು ಮಳೆ (Monsoon) ಎಂಟ್ರಿಯಾಗಿದೆ. ಕೇರಳದಲ್ಲಿ ಈ ವರ್ಷದ ನೈಋತ್ಯ ಮಾನ್ಸೂನ್ ಶುರುವಾಗಿದ್ದು, ವಾಡಿಕೆಗಿಂತ 3 ದಿನ‌ ಮುಂಚಿತವಾಗಿ ಮುಂಗಾರು ಪ್ರವೇಶವಾಗಿದೆ. ಜೂನ್​ ಮೊದಲ ವಾರದಲ್ಲಿ ಕರ್ನಾಟಕಕ್ಕೂ ಮುಂಗಾರು ಪ್ರವೇಶವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ. ಕೇರಳದಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಸಾಮಾನ್ಯವಾಗಿ ಪ್ರತಿವರ್ಷ ಜೂನ್ 1ರಂದು ಕೇರಳದಲ್ಲಿ ಮುಂಗಾರು ಪ್ರವೇಶವಾಗುತ್ತದೆ. ಆದರೆ, ಈ ಬಾರಿ ಮೂರು ದಿನ ಮೊದಲೇ ಮಾನ್ಸೂನ್ ಪ್ರವೇಶವಾಗಿದೆ. ಅಂತಿಮವಾಗಿ ಜೂನ್ 1ರ ಸಾಮಾನ್ಯ ದಿನಾಂಕಕ್ಕಿಂತ ಮೂರು ದಿನಗಳ ಮುಂಚಿತವಾಗಿ ಕೇರಳದಲ್ಲಿ ನೈಋತ್ಯ ಮಾನ್ಸೂನ್ ಪ್ರಾರಂಭವಾಗಿದೆ. ಕೇರಳದಾದ್ಯಂತ ವ್ಯಾಪಕವಾದ ಮಳೆಯ ಹೊರತಾಗಿಯೂ ಮಾನ್ಸೂನ್‌ನ ಆರಂಭವು ತೀವ್ರತೆಯ ದೃಷ್ಟಿಯಿಂದ ಕಡಿಮೆಯಾಗಿದೆ.

ಇದನ್ನೂ ಓದಿ:Monsoon 2022: ಕರ್ನಾಟಕದ ಕರಾವಳಿಯಲ್ಲಿ ಇಂದು ಮಳೆ; ಇನ್ನೆರಡು ದಿನಗಳಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶ ಸಾಧ್ಯತೆ

ಮುಂದಿನ ಐದು ದಿನಗಳಲ್ಲಿ ಕೇರಳದಾದ್ಯಂತ ಗುಡುಗು ಮತ್ತು ಮಿಂಚು ಸಹಿತ ವ್ಯಾಪಕವಾದ ಮಳೆಯ ಮುನ್ಸೂಚನೆ ಇದೆ, ಗುರುವಾರದವರೆಗೆ ಕೇರಳದ ಕರಾವಳಿಯಲ್ಲಿ ಹಳದಿ ಅಲರ್ಟ್​ ಘೋಷಿಸಲಾಗಿದೆ. ಮುಂದಿನ 3-4 ದಿನಗಳಲ್ಲಿ ಕೇರಳದ ಕೆಲವು ಭಾಗಗಳು, ತಮಿಳುನಾಡು, ಕರ್ನಾಟಕ ಮತ್ತು ಈಶಾನ್ಯ ರಾಜ್ಯಗಳ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ.

ಇನ್ನಷ್ಟು ಮಳೆಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ