ಉಗ್ರರ ಮುಂದೆ ಕಾಂಗ್ರೆಸ್ ನಪುಂಸಕನಂತೆ ಮಂಡಿಯೂರಿತ್ತು; ಆರ್​ಎಸ್​ಎಸ್​ ವಿರುದ್ಧದ ಹೇಳಿಕೆಗೆ ಬಿಜೆಪಿ ತಿರುಗೇಟು

ಮೋದಿ ಸರ್ಕಾರ ಬರುವ ತನಕವೂ ಕಾಶ್ಮೀರದ ಶ್ರೀನಗರದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದಕ್ಕೆ ಬಿಡಲಿಲ್ಲ. ಅವತ್ತಿನ ಕಾಂಗ್ರೆಸ್ ಸರ್ಕಾರ ಉಗ್ರರ ಮುಂದೆ ಕಾಂಗ್ರೆಸ್ ನಪುಂಸಕರಂತೆ ಮಂಡಿಯೂರಿತ್ತು ಎಂದು ಕಾಂಗ್ರೆಸ್ ವಿರುದ್ಧ ಸುನಿಲ್​ ಕುಮಾರ್ ಕಿಡಿ ಕಾರಿದ್ದಾರೆ.

ಉಗ್ರರ ಮುಂದೆ ಕಾಂಗ್ರೆಸ್ ನಪುಂಸಕನಂತೆ ಮಂಡಿಯೂರಿತ್ತು; ಆರ್​ಎಸ್​ಎಸ್​ ವಿರುದ್ಧದ ಹೇಳಿಕೆಗೆ ಬಿಜೆಪಿ ತಿರುಗೇಟು
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: May 29, 2022 | 7:24 PM

ಬೆಂಗಳೂರು: ಆರ್​ಎಸ್​ಎಸ್ (RSS) ನಪುಂಸಕ ಸಂಘಟನೆ ಎಂಬ ಕಾಂಗ್ರೆಸ್ ಸರಣಿ ಟ್ವೀಟ್​ಗೆ ಬಿಜೆಪಿ (BJP) ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕಾಂಗ್ರೆಸ್ ಟ್ವೀಟ್‌ಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ (Pralhad Joshi), ಇರುವೆ ಕಟ್ಟಿದ ಗೂಡಿನಲ್ಲಿ ಹಾವು ಹೊಕ್ಕಂತೆ ಸಿದ್ದರಾಮಯ್ಯ (Siddaramaiah) ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಆರ್​ಎಸ್​ಎಸ್ ಬೈಯ್ಯುತ್ತಿದ್ದಾರೆ. ಆರ್​ಎಸ್​ಎಸ್​ ಹಿಂದೂ ಸಂಘಟನೆ. ಆರ್​ಎಸ್​​ಎಸ್​ ಅನ್ನು ಬೈದರೆ ಮತ್ತೆ ಸಿಎಂ ಮಾಡ್ತಾರೆಂಬ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ ಆ ಭ್ರಮೆಯಲ್ಲಿರೋದು ಬೇಡ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಅಧಿಕಾರಕ್ಕೆ ಬಂದರೂ ನಿಮ್ಮನ್ನು ಮುಖ್ಯಮಂತ್ರಿ ಮಾಡಲ್ಲ. ಬಾಯಿಗೆ ಬಂದಂತೆ ಮಾತನಾಡಿ ರಾಹುಲ್ ಸ್ಥಿತಿ ಹೀಗಾಗಿದೆ. ನೀವು ರಾಹುಲ್ ಗಾಂಧಿ (Rahul Gandhi) ತರಹ ಆಗಬೇಡಿ ಎಂದು ಟೀಕಿಸಿದ್ದಾರೆ.

ನಾಥೂರಾಮ್ ಗೋಡ್ಸೆ ಆರ್​ಎಸ್​ಎಸ್​ನವರು ಎಂಬ ವಿಚಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದರು. ಹೀಗೆ ಹೇಳಿ ಮಾನಹಾನಿ ಕೇಸ್‌ನಲ್ಲಿ ಕೋರ್ಟ್‌ಗೆ ಎಡತಾಕುತ್ತಿದ್ದಾರೆ. ಇನ್ನೊಂದಷ್ಟು ದಿನದಲ್ಲಿ‌ ಕೋರ್ಟ್‌ಗೆ ಕ್ಷಮೆಕೇಳಿ ವಾಪಾಸ್ ಬರುತ್ತಾರೆ. ಇಲ್ಲಿನ ಕಾಂಗ್ರೆಸ್ ಪರಿಸ್ಥಿತಿಯೂ ಅದೇ ಆಗುತ್ತದೆ ಎಂದು ಪ್ರಲ್ಹಾದ್ ಜೋಶಿ ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಬ್ರಿಟಿಷ್ ಸೈನ್ಯ ಸೇರಲು ತುದಿಗಾಲಲ್ಲಿ ನಿಂತಿದ್ದ ಆರ್​ಎಸ್​ಎಸ್​ ದೇಶದ್ರೋಹಿ ಸಂಘಟನೆ; ಕಾಂಗ್ರೆಸ್ ವಾಗ್ದಾಳಿ

ರಾಹುಲ್ ಗಾಂಧಿಗೆ ಬುದ್ಧಿ ಇಲ್ಲ. ಏನೇನೋ ಮಾತಾಡ್ತಾರೆ. ನೀವ್ಯಾಕೆ ಹಾಗೆ ಮಾತನಾಡುತ್ತೀರಿ? ಎಂದು ರಾಹುಲ್ ಗಾಂಧಿಗೆ ಪ್ರಲ್ಹಾದ್ ಜೋಶಿ ಪ್ರಶ್ನೆ ಮಾಡಿದ್ದಾರೆ. ವಲ್ಲಭಬಾಯಿ ಪಟೇಲರು ಗೃಹ ಮಂತ್ರಿ ಆಗಿದ್ದರು. ಗಾಂಧಿ ಹತ್ಯೆಗೂ ಆರ್‌ಎಸ್ಎಸ್‌ಗೂ ಸಂಬಂಧವಿಲ್ಲ ಅಂತ ಅವರೇ ಹೇಳಿದ್ದರು. ಆದರೆ ಪಟೇಲ್‌ರ ಮೇಲೆ ಅವರಿಗೆ ವಿಶ್ವಾಸ ಇಲ್ಲ. ನೆಹರು, ರಾಜೀವ ಗಾಂಧಿ, ಇಂದಿರಾ ಗಾಂಧಿ, ಸೋನಿಯಾಗಾಂಧಿ, ರಾಹುಲ್ ಮತ್ತು ಪ್ರಿಯಾಂಕಾರಷ್ಟೇ ಕಾಂಗ್ರೆಸ್ ನಾಯಕರು. ಪ್ರಿಯಾಂಕಾ ಗಾಂಧಿ ಮಕ್ಕಳೂ ಅವರಿಗೆ ಲೀಡರ್ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲ ತನಿಖೆ ಬಳಿಕವೇ ಪಟೇಲ್‌ರು ಆಗ ಈ ವಿಷಯ ಸ್ಪಷ್ಟಪಡಿಸಿದ್ದರು. ಆದರೂ ಈಗಿನ ಕಾಂಗ್ರೆಸ್​ ನಾಯಕರು ಅಜ್ಞಾನದಿಂದ ಹೀಗೆ ಹೇಳುತ್ತಿದ್ದಾರೆ. 1983ರಲ್ಲಿ ಸಿಖ್‌ರ ಕೊರಳಿಗೆ ಬೆಂಕಿ ಹಚ್ಚಿದ ಟೈರ್ ಹಾಕಿ ಕೊಂದಿದ್ದರು. ಮೂರು ಸಾವಿರ ಜನರ ನರಮೇಧ ಮಾಡಿದ್ದರು. 20-21ನೇ ಶತಮಾನದ ದೊಡ್ಡ ನರಮೇಧ ಅದಾಗಿತ್ತು. ಅದು ಕಾಂಗ್ರೆಸ್ ಮಾಡಿದ ದೆಹಲಿ ಹತ್ಯಾಕಾಂಡ. ಅವರಿಗೆ ನಾಚಿಕೆ, ಮಾನ ಮರ್ಯಾದೆ ಇಲ್ವಾ? ಇಡೀ ಎರಡು ವರ್ಷ ಪ್ರಜಾಪ್ರಭುತ್ವವನ್ನು ತಮ್ಮ ಕಾಲಿನಡಿ ಇಟ್ಟುಕೊಂಡವರು ಕಾಂಗ್ರೆಸ್​ನವರು ಎಂದು ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.

ಕಾಂಗ್ರೆಸ್ ನಪುಂಸಕ ಪಕ್ಷ- ಸುನಿಲ್ ಕುಮಾರ್: ‘RSS ನಪುಂಸಕ ಸಂಘಟನೆ ಎಂದು ಕಾಂಗ್ರೆಸ್​ ಟ್ವೀಟ್ ಹಿನ್ನೆಲೆ’ಯಲ್ಲಿ ಕಾಂಗ್ರೆಸ್​ ಟ್ವೀಟ್​ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರು ಮಾನಸಿಕ ವೇದನೆಗೆ ಒಳಗಾಗಿದ್ದಾರೆ. ಹುಬ್ಬಳ್ಳಿ ರಾಣಿ ಚೆನ್ನಮ್ಮ ಮೈದಾನದಲ್ಲಿ ಕಾಂಗ್ರೆಸ್ ಏನ್ಮಾಡಿತ್ತು? ಅವತ್ತು ರಾಷ್ಟ್ರಧ್ವಜದ ವಿಚಾರದಲ್ಲಿ ಹೇಗೆ ನಡೆದುಕೊಂಡಿದೆ? ಕಾಂಗ್ರೆಸ್​ ಹೇಗೆ ನಡೆದುಕೊಂಡಿದೆ ಅನ್ನೋದು ದೇಶವೇ ನೋಡಿದೆ. ಹುಬ್ಬಳ್ಳಿಯಲ್ಲಿ ನಪುಂಸಕನಂತೆ ನಡೆದುಕೊಂಡಿದ್ದು ಕಾಂಗ್ರೆಸ್. ರಾಷ್ಟ್ರಧ್ವಜದ ವಿಚಾರದಲ್ಲಿ ಕಾಂಗ್ರೆಸ್ ನಪುಂಸಕನಂತೆ ನಡೆದುಕೊಂಡಿತ್ತು. ಮೋದಿ ಸರ್ಕಾರ ಬರುವ ತನಕವೂ ಕಾಶ್ಮೀರದ ಶ್ರೀನಗರದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದಕ್ಕೆ ಬಿಡಲಿಲ್ಲ. ಅವತ್ತಿನ ಕಾಂಗ್ರೆಸ್ ಸರ್ಕಾರ ನಪುಂಸಕತ್ವ ತೋರಿಸಿತ್ತು. ಉಗ್ರರ ಮುಂದೆ ಕಾಂಗ್ರೆಸ್ ನಪುಂಸಕರಂತೆ ಮಂಡಿಯೂರಿತ್ತು. 60 ವರ್ಷದ ಆಡಳಿತದಲ್ಲಿ ಭಯೋತ್ಪಾದನೆ ನಿಗ್ರಹ ವಿಚಾರವಾಗಿ, ಗಡಿ ವಿಚಾರದಲ್ಲಿ ಕಾಂಗ್ರೆಸ್ ನಪುಂಸಕನಂತೆ ನಡೆದುಕೊಂಡಿತ್ತು ಎಂದು ಟ್ವೀಟ್​ ಮೂಲಕ ಕಾಂಗ್ರೆಸ್ ವಿರುದ್ಧ ಸುನಿಲ್​ ಕುಮಾರ್ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಆರ್​ಎಸ್​ಎಸ್​ ಕಾರ್ಯಕರ್ತನ ಬರ್ಬರ ಹತ್ಯೆ; ಪಿಎಫ್​ಐ ಕೈವಾಡವೆಂದ ಬಿಜೆಪಿ

RSS ನಪುಂಸಕ ಸಂಘಟನೆ ಎಂದು ಕಾಂಗ್ರೆಸ್​ ಟ್ವೀಟ್ ಹಿನ್ನೆಲೆ’ಯಲ್ಲಿ ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದು, ನಪುಂಸಕ ಎಂಬ ಪದ ನಪುಂಸಕರಿಗೆ ಮಾತ್ರ ಗೊತ್ತಿರುತ್ತದೆ ಎಂದು ಸಿದ್ದರಾಮಯ್ಯನವರ ವಿರುದ್ಧ ಹರಿಹಾಯ್ದಿದ್ದಾರೆ. ಆರ್​ಎಸ್​ಎಸ್​ ಹುಲಿ, ಸಿಂಹಗಳನ್ನು ತಯಾರಿಸುವ ಸಂಘ. ಕಾಂಗ್ರೆಸ್ ಪಕ್ಷ ನಪುಂಸಕ ಪಕ್ಷವಾಗುತ್ತಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ