ಕೊಡಗಿನ ಕೋಟೆಅಬ್ಬಿ ಜಲಪಾತದಲ್ಲಿ ಮುಳುಗಿ ತೆಲಂಗಾಣದ ಮೂವರು ಸಾವು

ಸೋಮವಾರಪೇಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕೋಟೆಅಬ್ಬಿ ಜಲಪಾತದಲ್ಲಿ ಮುಳುಗಿ ಮೃತಪಟ್ಟವರನ್ನು ಶ್ಯಾಮ (36), ಶಹೀಂದ್ರ (16), ಶ್ರೀಹರ್ಷ (18) ಎಂದು ಗುರುತಿಸಲಾಗಿದೆ.

ಕೊಡಗಿನ ಕೋಟೆಅಬ್ಬಿ ಜಲಪಾತದಲ್ಲಿ ಮುಳುಗಿ ತೆಲಂಗಾಣದ ಮೂವರು ಸಾವು
ಸಾಂಕೇತಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: May 29, 2022 | 6:50 PM

ಮಡಿಕೇರಿ: ಕೊಡಗಿನ ಕೋಟೆಅಬ್ಬಿ ಜಲಪಾತದಲ್ಲಿ ಮುಳುಗಿ ಮೂವರು ನೀರುಪಾಲಾಗಿದ್ದಾರೆ. ಕೊಡಗು (Kodagu) ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೋಟೆಅಬ್ಬಿ ಜಲಪಾತದಲ್ಲಿ ಈ ಘಟನೆ ನಡೆದಿದೆ. ಕೊಡಗಿಗೆ ಪ್ರವಾಸಕ್ಕೆ ಬಂದಿದ್ದ ತೆಲಂಗಾಣದ ಮೂವರು ನೀರುಪಾಲಾಗಿದ್ದಾರೆ. ಕೋಟೆಅಬ್ಬಿ ಜಲಪಾತದಲ್ಲಿ ಸ್ನಾನಕ್ಕಿಳಿದಿದ್ದಾಗ ಕಾಲು ಜಾರಿ ಮುಳುಗಿ ಅವರು ಸಾವನ್ನಪ್ಪಿದ್ದಾರೆ.

ಸೋಮವಾರಪೇಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕೋಟೆಅಬ್ಬಿ ಜಲಪಾತದಲ್ಲಿ ಮುಳುಗಿ ಮೃತಪಟ್ಟವರನ್ನು ಶ್ಯಾಮ (36), ಶಹೀಂದ್ರ (16), ಶ್ರೀಹರ್ಷ (18) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶದ ಅಪಘಾತದಲ್ಲಿ ಬೀದರ್​ನ 7 ಜನ ಸಾವು; ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಿಎಂ ಯೋಗಿ ಆದಿತ್ಯನಾಥ್​ಗೆ ಬೊಮ್ಮಾಯಿ ಮನವಿ

ಕೊಟ್ಟಿಗೆಹಾರದಲ್ಲಿ ವಾಹನ ಪಲ್ಟಿ: ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾದ್ದರಿಂದ 13 ಜನರಿಗೆ ಗಾಯವಾಗಿದೆ. ಕೊಟ್ಟಿಗೆಹಾರದ ಬಳಿ ನಿಯಂತ್ರಣ ತಪ್ಪಿ ತೂಫಾನ್ ವಾಹನ​ ಪಲ್ಟಿಯಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಈ ಘಟನೆ ನಡೆದಿದೆ. ತೂಫಾನ್​​ ವಾಹನಲ್ಲಿದ್ದ 13 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರ ಕೈ ಮುರಿತವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ