ಕುಕ್ಕರಹಳ್ಳಿ ಆಯ್ತು,ಈಗ ಲಿಂಗಾಂಬುಧಿ ಕೆರೆಯಲ್ಲೂ ಪಕ್ಷಿಗಳ ನಿಗೂಢ ಸಾವು

ಮೈಸೂರು: ನಗರದ ಕೆರೆಗಳಲ್ಲಿ ಹಕ್ಕಿಗಳ ಸರಣಿ ಸಾವು ಮುಂದುವರಿದಿದೆ. ಇತ್ತೀಚೆಗಷ್ಟೇ ಕುಕ್ಕರಹಳ್ಳಿ ಕೆರೆಯಲ್ಲಿ 3 ಪೆಲಿಕಾನ್ ಹಕ್ಕಿಗಳು ಮೃತಪಟ್ಟಿದ್ದವು. ಇದೀಗ ಲಿಂಗಾಂಬುಧಿಯ ಕೆರೆಯಲ್ಲಿ ಕಳೆದ 2 ದಿನ‌ದಿಂದ ಒಂದೊಂದೇ ಹಕ್ಕಿಗಳು ನಿಗೂಢವಾಗಿ ಸಾವನ್ನಪ್ಪುತ್ತಿವೆ. ಲಿಂಗಾಂಬುಧಿ ಕೆರೆಯಲ್ಲಿ ಸುಮಾರು 15ಕ್ಕೂ ಹೆಚ್ಚು ನಾರ್ಥನ್ ಶಾವೆಲ್ಲರ್ ಹಕ್ಕಿಗಳು ಮೃತಪಟ್ಟಿವೆ. ಈ ಹಕ್ಕಿಗಳು ಸಂತಾನೋತ್ಪತ್ತಿ ಉದ್ದೇಶಕ್ಕಾಗಿ ಉತ್ತರ ಭಾರತದಿಂದ ವಲಸೆ ಬರುತ್ತವೆ. ಹಕ್ಕಿಗಳ ಸರಣಿ ಸಾವು ಪಕ್ಷಿ ಪ್ರಿಯರಲ್ಲಿ ಆತಂಕ ಸೃಷ್ಟಿಸಿದೆ.

ಕುಕ್ಕರಹಳ್ಳಿ ಆಯ್ತು,ಈಗ ಲಿಂಗಾಂಬುಧಿ ಕೆರೆಯಲ್ಲೂ ಪಕ್ಷಿಗಳ ನಿಗೂಢ ಸಾವು

Updated on: Nov 17, 2019 | 11:56 AM

ಮೈಸೂರು: ನಗರದ ಕೆರೆಗಳಲ್ಲಿ ಹಕ್ಕಿಗಳ ಸರಣಿ ಸಾವು ಮುಂದುವರಿದಿದೆ. ಇತ್ತೀಚೆಗಷ್ಟೇ ಕುಕ್ಕರಹಳ್ಳಿ ಕೆರೆಯಲ್ಲಿ 3 ಪೆಲಿಕಾನ್ ಹಕ್ಕಿಗಳು ಮೃತಪಟ್ಟಿದ್ದವು. ಇದೀಗ ಲಿಂಗಾಂಬುಧಿಯ ಕೆರೆಯಲ್ಲಿ ಕಳೆದ 2 ದಿನ‌ದಿಂದ ಒಂದೊಂದೇ ಹಕ್ಕಿಗಳು ನಿಗೂಢವಾಗಿ ಸಾವನ್ನಪ್ಪುತ್ತಿವೆ.

ಲಿಂಗಾಂಬುಧಿ ಕೆರೆಯಲ್ಲಿ ಸುಮಾರು 15ಕ್ಕೂ ಹೆಚ್ಚು ನಾರ್ಥನ್ ಶಾವೆಲ್ಲರ್ ಹಕ್ಕಿಗಳು ಮೃತಪಟ್ಟಿವೆ. ಈ ಹಕ್ಕಿಗಳು ಸಂತಾನೋತ್ಪತ್ತಿ ಉದ್ದೇಶಕ್ಕಾಗಿ ಉತ್ತರ ಭಾರತದಿಂದ ವಲಸೆ ಬರುತ್ತವೆ. ಹಕ್ಕಿಗಳ ಸರಣಿ ಸಾವು ಪಕ್ಷಿ ಪ್ರಿಯರಲ್ಲಿ ಆತಂಕ ಸೃಷ್ಟಿಸಿದೆ.