ಅತ್ತೆ ಮೇಲಿನ ಕೋಪಕ್ಕೆ ಮಕ್ಕಳಿಗೆ ವಿಷವಿಟ್ಟ ತಾಯಿ, 1 ಮಗು ಸಾವು

ಮಂಡ್ಯ: ಅತ್ತೆ ಮೇಲಿನ ಕೋಪಕ್ಕೆ ಮಕ್ಕಳಿಗೆ ವಿಷವಿಕ್ಕಿ ತಾಯಿಯೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಳವಳ್ಳಿ ತಾಲೂಕಿನ ದಳವಾಯಿಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಿಕಿತ್ಸೆ ಫಲಕಾರಿಯಾಗದೆ 1 ವರ್ಷದ ಲೋಹಿತ್ ಮೃತಪಟ್ಟಿದ್ದು, 3 ವರ್ಷದ ಪುನೀತ್ ಹಾಗೂ ತಾಯಿ ಸೌಜನ್ಯ(24) ಸ್ಥಿತಿ ಗಂಭೀರವಾಗಿದೆ. ಅತ್ತೆ ತನ್ನ ಮಕ್ಕಳನ್ನು ಮಾತಾನಾಡಿಸುತ್ತಿದ್ದಳು ಎಂಬ ಏಕೈಕ ಕಾರಣಕ್ಕೆ ಸೌಜನ್ಯ ಗಲಾಟೆ ಮಾಡಿದ್ದಾಳೆ. ಈ ವಿಷಯ ಪತಿ ಶಿವಪ್ಪಗೆ ತಿಳಿದು ಮನೆಗೆ ಬಂದು ವಿಚಾರಿಸಿದಾಗ ಪತ್ನಿ ಸೌಜನ್ಯ ವಿಷ ಸೇವಿಸಿರುವ ವಿಷಯ ತಿಳಿದಿದೆ. ಆಸ್ಪತ್ರೆಗೆ ಕರೆದೊಯ್ಯುವಾಗಲೂ […]

ಅತ್ತೆ ಮೇಲಿನ ಕೋಪಕ್ಕೆ ಮಕ್ಕಳಿಗೆ ವಿಷವಿಟ್ಟ ತಾಯಿ, 1 ಮಗು ಸಾವು
ಸಾಧು ಶ್ರೀನಾಥ್​

Updated on: Nov 14, 2019 | 1:33 PM

ಮಂಡ್ಯ: ಅತ್ತೆ ಮೇಲಿನ ಕೋಪಕ್ಕೆ ಮಕ್ಕಳಿಗೆ ವಿಷವಿಕ್ಕಿ ತಾಯಿಯೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಳವಳ್ಳಿ ತಾಲೂಕಿನ ದಳವಾಯಿಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಿಕಿತ್ಸೆ ಫಲಕಾರಿಯಾಗದೆ 1 ವರ್ಷದ ಲೋಹಿತ್ ಮೃತಪಟ್ಟಿದ್ದು, 3 ವರ್ಷದ ಪುನೀತ್ ಹಾಗೂ ತಾಯಿ ಸೌಜನ್ಯ(24) ಸ್ಥಿತಿ ಗಂಭೀರವಾಗಿದೆ.

ಅತ್ತೆ ತನ್ನ ಮಕ್ಕಳನ್ನು ಮಾತಾನಾಡಿಸುತ್ತಿದ್ದಳು ಎಂಬ ಏಕೈಕ ಕಾರಣಕ್ಕೆ ಸೌಜನ್ಯ ಗಲಾಟೆ ಮಾಡಿದ್ದಾಳೆ. ಈ ವಿಷಯ ಪತಿ ಶಿವಪ್ಪಗೆ ತಿಳಿದು ಮನೆಗೆ ಬಂದು ವಿಚಾರಿಸಿದಾಗ ಪತ್ನಿ ಸೌಜನ್ಯ ವಿಷ ಸೇವಿಸಿರುವ ವಿಷಯ ತಿಳಿದಿದೆ. ಆಸ್ಪತ್ರೆಗೆ ಕರೆದೊಯ್ಯುವಾಗಲೂ ಮಕ್ಕಳಿಗೆ ವಿಷ ನೀಡಿರುವ ವಿಚಾರವನ್ನು ಸೌಜನ್ಯ ಬಾಯ್ಬಿಟ್ಟಿಲ್ಲ.

ತಾಯಿ ಆಸ್ಪತ್ರೆಗೆ ಹೋದ ಬೆನ್ನಲ್ಲೇ ಮನೆಯಲ್ಲಿದ್ದ ಮಕ್ಕಳು ಸಹ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಮಕ್ಕಳನ್ನೂ ಆಸ್ಪತ್ರೆಗೆ ಪೋಷಕರು ಕರೆದೊಯ್ದಿದ್ದಾರೆ. ಆದ್ರೆ ಚಿಕಿತ್ಸೆ ಫಲಿಸದೆ ಲೋಹಿತ್ ಮೃತಪಟ್ಟಿದ್ದಾನೆ. ತಾಯಿ ಸೌಜನ್ಯಾ, ಪುನೀತ್​ಗೆ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಘಟನೆ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 12:52 pm, Thu, 14 November 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us