AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​ಗೆ ವ್ಯಾಕರಣ ಪಾಠ ಮಾಡಿದ ಸಂಸದ ಪ್ರತಾಪ್ ಸಿಂಹ: ಟ್ವೀಟ್​ ಮೂಲಕ ತಿರುಗೇಟು

ಕಾಂಗ್ರೆಸ್ಸಿಗರೇ, ಬೇರೆಯವರಿಗೆ ಏಕವಚನ, ಬಹುವಚನ ಮತ್ತು ವ್ಯಾಕರಣದ ಪಾಠ ಹೇಳುವ ಮೊದಲು ಸ್ವತಃ ತಿದ್ದಿಕೊಳ್ಳಿ ಎಂದು ಕಾಂಗ್ರೆಸ್​ಗೆ ಸಂಸದ ಪ್ರತಾಪ್ ಸಿಂಹ ಕೌಂಟರ್ ನೀಡಿದ್ದಾರೆ. ಸಿದ್ಧರಾಮಯ್ಯರ ಪೋಸ್ಟ್ ಹಾಗೂ ಕಾಂಗ್ರೆಸ್ ಪೋಸ್ಟ್​ಗೆ ಟ್ವೀಟ್​ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್​ಗೆ ವ್ಯಾಕರಣ ಪಾಠ ಮಾಡಿದ ಸಂಸದ ಪ್ರತಾಪ್ ಸಿಂಹ: ಟ್ವೀಟ್​ ಮೂಲಕ ತಿರುಗೇಟು
ಸಂಸದ ಪ್ರತಾಪ್ ಸಿಂಹ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Dec 27, 2023 | 3:43 PM

ಬೆಂಗಳೂರು, ಡಿಸೆಂಬರ್​ 27: ಕಾಂಗ್ರೆಸ್ಸಿಗರೇ, ಬೇರೆಯವರಿಗೆ ಏಕವಚನ, ಬಹುವಚನ ಮತ್ತು ವ್ಯಾಕರಣದ ಪಾಠ ಹೇಳುವ ಮೊದಲು ಸ್ವತಃ ತಿದ್ದಿಕೊಳ್ಳಿ ಎಂದು ಕಾಂಗ್ರೆಸ್​ಗೆ ಸಂಸದ ಪ್ರತಾಪ್ ಸಿಂಹ (Pratap Simha) ಕೌಂಟರ್ ನೀಡಿದ್ದಾರೆ. ಸಿದ್ಧರಾಮಯ್ಯರ ಪೋಸ್ಟ್ ಹಾಗೂ ಕಾಂಗ್ರೆಸ್ ಪೋಸ್ಟ್​ಗೆ ಟ್ವೀಟ್​ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ. ಪ್ರಧಾನಿಯನ್ನ ಮಿಸ್ಟರ್ ಮೋದಿ ಎಂದು ಬರೆದಿರುವ ಅಣ್ಣ ನಾಡಕಳ್ಳ, ತಮ್ಮ ವಿಕ್ರಮ್ ಸಿಂಹ ಕಾಡುಗಳ್ಳ ಎಂಬ ಕಾಂಗ್ರೆಸ್​ ಪೋಸ್ಟ್​ಗೆ ವ್ಯಂಗ್ಯವಾಗಿ ಕಿಡಿಕಾರಿದ್ದಾರೆ.

ಅಣ್ಣ ಪ್ರತಾಪ್ ಸಿಂಹ ನಾಡಕಳ್ಳ, ತಮ್ಮ ವಿಕ್ರಮ್ ಸಿಂಹ ಕಾಡುಗಳ್ಳ! ಹತ್ತಾರು ಎಕರೆಯಲ್ಲಿದ್ದ ಸಾವಿರಾರು ಮರಗಳನ್ನು ಮಾರಣ ಹೋಮ ಮಾಡಿ, ಕಳ್ಳಸಾಗಣೆಗೆ ಮುಂದಾಗಿದ್ದ ಪ್ರತಾಪ್ ಸಿಂಹನ ಸಹೋದರನ ಮೇಲೆ ಪ್ರಕರಣ ದಾಖಲಿಸಿ ತನಿಖೆ ಮಾಡಲಾಗುತ್ತಿದೆ.

ಸಂಸದ ಪ್ರತಾಪ್ ಸಿಂಹ ಟ್ವೀಟ್​ 

ವೀರಪ್ಪನ್​ನಿಂದ ತೆರವಾದ ಸ್ಥಾನಕ್ಕೆ ತಮ್ಮ ಸಹೋದರನನ್ನು ಪ್ರತಿಷ್ಠಾಪಿಸಲು ಮುಂದಾಗಿರುವಂತಿದೆ ಪ್ರತಾಪ್ ಸಿಂಹ! ಈ ಅಣ್ಣ ತಮ್ಮಂದಿರಿಂದ ನಾಡು, ಕಾಡು ಎರಡಕ್ಕೂ ಆಪತ್ತು ಅಲ್ಲವೇ ಬಿಜೆಪಿ ಎಂದು ಕಾಂಗ್ರೆಸ್​ ಇತ್ತೀಚೆಗೆ ಟ್ವೀಟ್​ ಮಾಡಿತ್ತು.

ಈ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದು, ಮಾನ್ಯ ಮುಖ್ಯಮಂತ್ರಿಗಳೇ, ನನ್ನ ತಮ್ಮ ಮರಗಳ್ಳನಾ? ನಿಮ್ಮದೇ ಸರ್ಕಾರ ಹಾಕಿರುವ FIR ನಲ್ಲಿ ಯಾರ ಹೆಸರಿದೆ? ನನ್ನ ಮೇಲೆ ಇನ್ನೂ ನಡೆಯಲಿದೆ ಅವ್ಯಾಹತ ಆಕ್ರಮಣ ಎಂದು ಬರೆದುಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.