ಅರಬಗಟ್ಟೆ ಕೊವಿಡ್ ಕೇರ್ ಸೆಂಟರ್​ನಲ್ಲಿ ಕೆಲಸ ಮಾಡಿದ್ದ ಪ್ರತಿಯೊಬ್ಬರಿಗೂ 1 ಸಾವಿರ ರೂ. ಹಂಚಿದ ಎಂ ಪಿ ರೇಣುಕಾಚಾರ್ಯ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದ ಕೊವಿಡ್ ಕೇರ್​ ಸೆಂಟರ್​ನಲ್ಲಿ ಹಲವರು ಕೆಲಸ ಮಾಡಿದ್ದರು. ಈ ಕೊರೊನಾ ಚಿಕಿತ್ಸಾ ಕೇಂದ್ರದಲ್ಲಿ ಕಳೆದ 2 ತಿಂಗಳಿಂದ 500ಕ್ಕೂ ಹೆಚ್ಚು ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿತ್ತು.

ಅರಬಗಟ್ಟೆ ಕೊವಿಡ್ ಕೇರ್ ಸೆಂಟರ್​ನಲ್ಲಿ ಕೆಲಸ ಮಾಡಿದ್ದ ಪ್ರತಿಯೊಬ್ಬರಿಗೂ 1 ಸಾವಿರ ರೂ. ಹಂಚಿದ ಎಂ ಪಿ ರೇಣುಕಾಚಾರ್ಯ
ರೇಣುಕಾಚಾರ್ಯ ಸಹಾಯ
Follow us
TV9 Web
| Updated By: ganapathi bhat

Updated on:Jul 19, 2021 | 5:09 PM

ದಾವಣಗೆರೆ: ಕೊವಿಡ್ ಕೇರ್ ಸೆಂಟರ್​ನಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ತಲಾ 1 ಸಾವಿರ ರೂಪಾಯಿಯನ್ನು ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹಂಚಿದ್ದಾರೆ. ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಹಲವು ಸತ್ಕಾರ್ಯಗಳಿಂದ ಜನರ ಮನಗೆದ್ದಿದ್ದ ಶಾಸಕರು ಈಗ ಕೊವಿಡ್ ಕೇರ್ ಸೆಂಟರ್​ನಲ್ಲಿ ಶ್ರಮಿಸಿದ ಪ್ರತಿಯೊಬ್ಬರಿಗೂ 1 ಸಾವಿರ ರೂಪಾಯಿ ಹಣ ನೀಡಿದ್ದಾರೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದ ಕೊವಿಡ್ ಕೇರ್​ ಸೆಂಟರ್​ನಲ್ಲಿ ಹಲವರು ಕೆಲಸ ಮಾಡಿದ್ದರು. ಈ ಕೊರೊನಾ ಚಿಕಿತ್ಸಾ ಕೇಂದ್ರದಲ್ಲಿ ಕಳೆದ 2 ತಿಂಗಳಿಂದ 500ಕ್ಕೂ ಹೆಚ್ಚು ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿತ್ತು. ಕೊವಿಡ್ ಕೇರ್ ಸೆಂಟರ್​ನಲ್ಲಿ ಸೇವೆ ಸಲ್ಲಿಸಿದ ನರ್ಸ್​ಗಳು, ಅಡುಗೆ ಸಹಾಯಕಿಯರು, ಪೌರಕಾರ್ಮಿಕರಿಗೆ ರೇಣುಕಾಚಾರ್ಯ ಹಣ ಹಂಚಿಕೆ ಮಾಡಿದ್ದಾರೆ. ಕಳೆದ 1 ತಿಂಗಳಿಂದ ಕೊವಿಡ್ ಕೇರ್ ಸೆಂಟರ್​ನಲ್ಲೇ ಉಳಿದಿದ್ದ ಎಂ.ಪಿ. ರೇಣುಕಾಚಾರ್ಯ ಎಲ್ಲರಿಗೂ ಹಣ ಹಂಚಿ ತೆರಳಿದ್ದಾರೆ.

ಕೊವಿಡ್ ಕೇರ್ ಸೆಂಟರ್ ವಾಸ್ತವ್ಯದಿಂದ ಹೊರಬಂದು ಮೃತ್ಯುಂಜಯ ಹೋಮ ಕೊವಿಡ್ ಕೇರ್ ಸೆಂಟರ್ ವಾಸ್ತವ್ಯದಿಂದ ಹೊರ ಬಂದ ರೇಣುಕಾಚಾರ್ಯ ಹೊನ್ನಾಳಿ ಹಿರೇಕಲ್ಮಠದಲ್ಲಿ ಮೃತ್ಯುಂಜಯ ಹೋಮ ಮಾಡಿಸಿಕೊಂಡಿದ್ದಾರೆ. ಕಳೆದ ಒಂದು ತಿಂಗಳಿನಿಂದ ಕೊವಿಡ್ ಕೇರ್ ಸೆಂಟರ್​ನಲ್ಲಿ ಸೋಂಕಿತರೊಂದಿಗೆ ವಾಸ್ತವ್ಯ ಇದ್ದ ರೇಣುಕಾಚಾರ್ಯ ಕೊವಿಡ್ ಕೇರ್ ಸೆಂಟರ್ ಬಂದ್ ಮಾಡಿದ ಹಿನ್ನೆಲೆ ಇಂದು ಮನೆಗೆ ಮರಳಿದ್ದಾರೆ. ಕೊವಿಡ್ ಕೇರ್ ಸೆಂಟರ್​ನಿಂದ ಹೊರ ಬಂದ ಹಿನ್ನೆಲೆ ಮಠದಲ್ಲಿ ಪತ್ನಿ ಸುಮಾ ಜೊತೆ ಸೇರಿ ಮೃತ್ಯುಂಜಯ ಹೋಮದಲ್ಲಿ ಪಾಲ್ಗೊಂಡಿದ್ದಾರೆ.

ನೀವು ಇರುವವರೆಗೂ ಕೊರೊನಾ ಸೋಂಕಿನ ಐದಾರು ಅಲೆ ಬಂದರೂ ನಮಗೆ ಏನೂ ಆಗುವುದಿಲ್ಲ ಎಂದು ಜನರು ರೇಣುಕಾಚಾರ್ಯಗೆ ಶ್ಲಾಘನೆ ವ್ಯಕ್ತಪಡಿಸಿದ್ದರು. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮಸ್ಥರು ಶಾಸಕ ರೇಣುಕಾಚಾರ್ಯ ಅವರಿಗೆ ಈ ಮೊದಲು ವಂದನಾ ಕಾರ್ಯಕ್ರಮ ಏರ್ಪಡಿಸಿದ್ದರು. ಶಾಸಕ ರೇಣುಕಾಚಾರ್ಯ ಗ್ರಾಮದಲ್ಲಿ ಲಸಿಕೆ ಅಭಿಯಾನವನ್ನು ಆರಂಭಿಸಿದ ಕಾರಣಕ್ಕೆ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಗ್ರಾಮಸ್ಥರು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ನಿಮ್ಮಂತಹ ಆತ್ಮಸ್ಥೈರ್ಯ ತುಂಬುವ ಶಾಸಕರಿದ್ದರೇ ಸಾಕು. ಯಾವ ಅಲೆ ಬಂದರೂ ನಮಗೆ ಏನೂ ಆಗುವುದಿಲ್ಲ ಎಂದು ಶಾಸಕ ರೇಣುಕಾಚಾರ್ಯಗೆ ಧನ್ಯವಾದ ಅರ್ಪಿಸಿದ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದರು. ಇದೇ ವೇಳೆ ಮಾತನಾಡಿದ ಶಾಸಕ ರೇಣುಕಾಚಾರ್ಯ, ನಾನು ರಾತ್ರಿ ‌ಒಂದು ಗಂಟೆಗೆ ಮಲಗಿ ಬೆಳಗ್ಗೆ ಐದು ಗಂಟೆಗೆ ಎದ್ದು ಸೋಂಕಿತರಿಗೆ ಯೋಗ ಮಾಡಿಸುವೆ. ಮೂರನೇ ಅಲೆ ಎದುರಿಸಲು ಹೊನ್ನಾಳಿ ಮತ್ತು ನ್ಯಾಮತಿ‌ ತಾಲೂಕುಗಳಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಎಷ್ಟೇ ಕೊರೊನಾ ಅಲೆ ಬರಲಿ..ನೀವಿರುವವರೆಗೂ ನಮಗೆ ಏನೂ ಆಗಲ್ಲ; ಶಾಸಕ ರೇಣುಕಾಚಾರ್ಯಗೆ ಗ್ರಾಮಸ್ಥರಿಂದ ಶ್ಲಾಘನೆ

ಕೊರೊನಾದಿಂದ ಅನಾಥಳಾದ ಬಾಲಕಿಯನ್ನು ದತ್ತು ಪಡೆಯಲು ನಿರ್ಧರಿಸಿದ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ

Published On - 4:58 pm, Mon, 19 July 21

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ