ಕೊರೊನಾ ಸೋಂಕಿತರ ಸಂಬಂಧಿಕರು ಮತ್ತು ಸಾರ್ವಜನಿಕರಿಗೆ ಬಿರಿಯಾನಿ ಹಂಚಿದ ಸಚಿವ ಎಂಟಿಬಿ ನಾಗರಾಜ್

ಹೊಸಕೋಟೆಯಲ್ಲಿ ಕಳೆದ ಹದಿನಾಲ್ಕು ದಿನಗಳಿಂದ ಸಚಿವ ಎಂಟಿಬಿ ನಾಗರಾಜ್ ಊಟ ಹಂಚುತ್ತಿದ್ದಾರೆ. ಇನ್ನೂ ಇಂದು ಭಾನುವಾರವಾದ್ದರಿಂದ ಜನರಿಗೆ ಭರ್ಜರಿ ಬಿರಿಯಾನಿಯನ್ನು ಸಚಿವರು ಹಂಚಿದ್ದಾರೆ. ಇಂದು ಹೊಸಕೋಟೆಯಲ್ಲಿ ಎರಡು ಸಾವಿರ ಬಿರಿಯಾನಿ ಮಾಡಿಸಿದ್ದು, ಬಿರಿಯಾನಿ ಪಡೆಯಲು ಆಸ್ಪತ್ರೆ ಬಳಿ ಸಾಲುಗಟ್ಟಿ ಜನ ನಿಂತಿದ್ದಾರೆ.

ಕೊರೊನಾ ಸೋಂಕಿತರ ಸಂಬಂಧಿಕರು ಮತ್ತು ಸಾರ್ವಜನಿಕರಿಗೆ ಬಿರಿಯಾನಿ ಹಂಚಿದ ಸಚಿವ ಎಂಟಿಬಿ ನಾಗರಾಜ್
ಬಿರಿಯಾನಿ ಹಂಚಿದ ಸಚಿವ ಎಂಟಿಬಿ ನಾಗರಾಜ್
Edited By:

Updated on: Jun 06, 2021 | 5:32 PM

ಬೆಂಗಳೂರು: ಕೊರೊನಾ ಸೋಂಕನ್ನು ನಿಯಂತ್ರಿಸಲು ಲಾಕ್​ಡೌನ್​ ಜಾರಿಯಾದ ಕಾರಣ ಒಂದು ಹೊತ್ತಿನ ಊಟಕ್ಕೂ ಜನ ಪರದಾಡುವಂತಾಗಿದೆ. ಸಂಕಷ್ಟದಲ್ಲಿರುವ ಕೊರೊನಾ ಸೋಂಕಿತರ ಸಂಬಂಧಿಕರು ಮತ್ತು ಸಾರ್ವಜನಿಕರಿಗೆ ಸಚಿವ ಎಂಟಿಬಿ ನಾಗರಾಜ್ ಬಿರಿಯಾನಿ ಹಂಚಿದ್ದಾರೆ. ಹೊಸಕೋಟೆಯ ಸರ್ಕಾರಿ ಆಸ್ಪತ್ರೆ ಮುಂಭಾಗ ಬಿರಿಯಾನಿಗೆ ನಾ ಮುಂದು ತಾ ಮುಂದು ಅಂತ ಜನ ಮುಗಿಬಿದ್ದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ಕಳೆದ ಹದಿನಾಲ್ಕು ದಿನಗಳಿಂದ ಸಚಿವ ಎಂಟಿಬಿ ನಾಗರಾಜ್ ಊಟ ಹಂಚುತ್ತಿದ್ದಾರೆ. ಇನ್ನೂ ಇಂದು ಭಾನುವಾರವಾದ್ದರಿಂದ ಜನರಿಗೆ ಭರ್ಜರಿ ಬಿರಿಯಾನಿಯನ್ನು ಸಚಿವರು ಹಂಚಿದ್ದಾರೆ. ಇಂದು (ಜೂನ್ 6) ಹೊಸಕೋಟೆಯಲ್ಲಿ ಎರಡು ಸಾವಿರ ಬಿರಿಯಾನಿ ಮಾಡಿಸಿದ್ದು, ಬಿರಿಯಾನಿ ಪಡೆಯಲು ಆಸ್ಪತ್ರೆ ಬಳಿ ಸಾಲುಗಟ್ಟಿ ಜನ ನಿಂತಿದ್ದಾರೆ.

ರಾಜ್ಯದಲ್ಲಿ ಲಾಕ್​ಡೌನ್​ ಸಡಿಲಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಚಿವ ಎಂಟಿಬಿ ನಾಗರಾಜ್, ಜೂ.14ರವರೆಗೆ ಅನ್​ಲಾಕ್​ ಬೇಡ ಎಂದು ಹೇಳಿದ್ದೇನೆ. ನಿನ್ನೆ ರಾತ್ರಿ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿ ಹೇಳಿದ್ದೇನೆ. ಈಗಾಗಲೇ ಕೊರೊನಾ ಕೇಸ್ ಇಳಿಮುಖವಾಗುತ್ತಿದೆ. ಬೆಂಗಳೂರಿನಲ್ಲೂ ಪ್ರಕರಣಗಳು ಇಳಿಮುಖವಾಗುತ್ತಿವೆ. ಹೀಗಾಗಿ ಜೂನ್ 14ರ ವರೆಗೆ ಅನ್​ಲಾಕ್​ ಬೇಡ ಎಂದಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ

2006ರಲ್ಲಿ ನಡೆದಿದ್ದ ಆ ದುರಂತದ ಬಗ್ಗೆ ವಾಟ್ಸ್​ಆ್ಯಪ್​ ಸ್ಟೇಟಸ್​ ಹಾಕಿದ್ದಕ್ಕೆ ಪತ್ರಕರ್ತನ ವಿರುದ್ಧ ಎಫ್​ಐಆರ್​..

ನಾಯಕತ್ವ ಬದಲಾವಣೆ ಚರ್ಚೆಗೆ ಇತಿಶ್ರೀ ಹಾಡಲೇಬೇಕು: ಸಿಎಂ ಯಡಿಯೂರಪ್ಪ ಆಪ್ತರಿಂದ ನಿರ್ಧಾರ

(MTB Nagaraj gave Biryani to Corona infected relatives and the public in devanahalli)