BDA ಮಾದರಿಯಲ್ಲೇ ಮುಡಾಗೆ ಪ್ರತ್ಯೇಕ ಕಾಯ್ದೆ ಅಸ್ತು: ಹಗರಣ ಬೆನ್ನಲ್ಲೇ ಸಂಪುಟ ಮಹತ್ವದ ತೀರ್ಮಾನ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 13, 2024 | 10:13 PM

ಮುಡಾ ವಿವಾದದ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ಬಿಡಿಎ ಮಾದರಿಯಲ್ಲಿ ಪ್ರತ್ಯೇಕ ಕಾಯ್ದೆಯನ್ನು ರಚಿಸಲು ಸರ್ಕಾರ ನಿರ್ಧರಿಸಿದೆ. ಈ ಕಾಯ್ದೆಯನ್ನು ಮುಂದಿನ ವಾರ ವಿಧಾನಸಭೆಯಲ್ಲಿ ಮಂಡಿಸಲಾಗುತ್ತಿದೆ. ಈ ಹೊಸ ಕಾಯ್ದೆಯು ಭೂಸ್ವಾಧೀನ, ಸೈಟ್ ಹಂಚಿಕೆ ಮತ್ತು ನಕ್ಷೆ ಅನುಮೋದನೆಯನ್ನು ಸುಗಮಗೊಳಿಸುತ್ತದೆ. ನೂತನ ಕಾಯ್ದೆ ಪ್ರಕಾರ 3-4 ರಾಜಕೀಯ ನಾಯಕರಿಗೆ ಮಾತ್ರ ಅವಕಾಶವಿರುತ್ತದೆ.

BDA ಮಾದರಿಯಲ್ಲೇ ಮುಡಾಗೆ ಪ್ರತ್ಯೇಕ ಕಾಯ್ದೆ ಅಸ್ತು: ಹಗರಣ ಬೆನ್ನಲ್ಲೇ ಸಂಪುಟ ಮಹತ್ವದ ತೀರ್ಮಾನ
BDA ಮಾದರಿಯಲ್ಲೇ ಮುಡಾಗೆ ಪ್ರತ್ಯೇಕ ಕಾಯ್ದೆ ಅಸ್ತು: ಹಗರಣ ಬೆನ್ನಲ್ಲೇ ಸಂಪುಟ ಮಹತ್ವದ ತೀರ್ಮಾನ
Follow us on

ಬೆಂಗಳೂರು, ಡಿಸೆಂಬರ್​ 13: ಮುಡಾ (muda) ವಿವಾದ ಬೆನ್ನಲ್ಲೇ ಪ್ರತ್ಯೇಕ ಕಾಯ್ದೆಗೆ ರಚನೆಗೆ ಸರ್ಕಾರ ಅಸ್ತು ಎಂದಿದೆ.  ಆ ಮೂಲಕ ಬೆಳಗಾವಿ ಸುವರ್ಣಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಬಿಡಿಎ ಮಾದರಿಯಲ್ಲೇ ಮುಡಾಗೆ ಪ್ರತ್ಯೇಕೆ ಕಾಯ್ದೆ ರಚನೆಯಾಗಲಿದ್ದು, ಮುಂದಿನ ವಾರ ಅಧಿವೇಶನದಲ್ಲಿ ಬಿಲ್ ಮಂಡನೆಯಾಗಲಿದೆ.

ಈವರೆಗೂ ಮುಡಾ ನಗರಾಭಿವೃದ್ಧಿ ಪ್ರಾಧಿಕಾರದ ಅಧೀನದಲ್ಲಿತ್ತು. 1987ರ ಕಾಯ್ದೆ ಅನ್ವಯ ಮುಡಾ ಕಾರ್ಯನಿರ್ವಹಿಸುತ್ತಿದೆ. ಈಗ ಬಿಡಿಎ ಮಾದರಿಯಲ್ಲೇ ಮುಡಾಗೆ ಪ್ರತ್ಯೇಕ ಕಾಯ್ದೆಗೆ ಸರ್ಕಾರ ಮುಂದಾಗಿದೆ. ಹೊಸ ಕಾಯ್ದೆಯಂತೆ ಭೂಸ್ವಾಧೀನ, ಸೈಟ್​ ಹಂಚಿಕೆ ಮತ್ತು ನಕ್ಷೆ ಮಂಜೂರಾತಿ ಮಾಡಲಾಗಿದೆ.

ಇದನ್ನೂ ಓದಿ: ನಿಜವಾಯ್ತು ಟಿವಿ9 ಡಿಜಿಟಲ್​ ನುಡಿದಿದ್ದ ಭವಿಷ್ಯ; ಮುಡಾ ಕಚೇರಿ ಮೇಲೆ ಇಡಿ ದಾಳಿ, ಸಿದ್ದರಾಮಯ್ಯಗೆ ಹೆಚ್ಚಿದ ಸಂಕಷ್ಟ

ಈ ಮೊದಲು 100ಕ್ಕೂ ಹೆಚ್ಚು ರಾಜಕೀಯ ನಾಯಕರೇ ಮುಡಾ ಸದಸ್ಯರಾಗಿದ್ದರು. ಹಾಗಾಗಿ ನೂತನ ಕಾಯ್ದೆ ಪ್ರಕಾರ 3 ರಿಂದ 4 ರಾಜಕೀಯ ನಾಯಕರಿಗಷ್ಟೇ ಸದಸ್ಯರಾಗಲು ಅವಕಾಶವಿರುತ್ತದೆ. ನೂತನ ಕಾಯ್ದೆ ಪ್ರಕಾರ ಬಹುತೇಕ ಅಧಿಕಾರಿಗಳಿಗೆ ಹೆಚ್ಚು ಅವಕಾಶವಿರಲಿದ್ದು, ಬಿಡಿಎ ಮಾದರಿಯಲ್ಲಿ ಅಧಿಕಾರಿಗಳು ಬೋರ್ಡ್​​​ನಲ್ಲಿರುತ್ತಾರೆ.

ಮತ್ತೆ ಸ್ನೇಹಮಹಿ ಕೃಷ್ಣ ವಿಚಾರಣೆಗೆ ಹಾಜರು

ಇತ್ತೀಚೆಗೆ ಮುಡಾ ಹಗರಣದ ಸಂಬಂಧ ಈಗಾಗಲೆ ಮೈಸೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳು ಹಗರಣ ಸಂಬಂಧ ವಿಚಾರಣೆ ನಡೆಸಿದ್ದಾರೆ. ಮತ್ತೊಂದು ಕಡೆ ಬೆಂಗಳೂರಿನಲ್ಲಿ ಇಡಿ ಅಧಿಕಾರಿಗಳು ಕೂಡ ತನಿಖೆ ಮುಂದುವರಿಸಿದ್ದಾರೆ. ಹಗರಣ ಸಂಬಂಧ ದೂರುದಾರ ಸ್ನೇಹಮಹಿ ಕೃಷ್ಣ ನಿನ್ನೆ ಮತ್ತೆ ವಿಚಾರಣೆಗೆ ಹಾಜರಾಗಿದ್ದರು.

ಇದನ್ನೂ ಓದಿ: ಮುಡಾ ಹಗರಣ: ಸೈಟ್ ವಾಪಸ್ ಕೊಟ್ಟರೆ ಸಿದ್ದರಾಮಯ್ಯ ಸಂಕಷ್ಟ ಕಡಿಮೆಯಾಗುತ್ತಾ? ಕಾನೂನು ತಜ್ಞರು ಹೇಳಿದ್ದಿಷ್ಟು

ಮುಡಾ ಹಗರಣ ಸಂಬಂಧ ದೂರುದಾರ ಸ್ನೇಹಮಹಿ ಕೃಷ್ಣರನ್ನು ಇಡಿ ಅಧಿಕಾರಿಗಳು ನಿನ್ನೆ ವಿಚಾರಣೆ ನಡೆಸಿದ್ದರು. ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಪಡೆಯುವ ಉದ್ದೇಶಕ್ಕಾಗಿ ಸ್ನೇಹಮಹಿ ಕೃಷ್ಣಗೆ ಇಡಿ ಬುಲಾವ್ ನೀಡಿತ್ತು. ಅದರಂತೆ ಬೆಳಿಗ್ಗೆ ಶಾಂತಿನಗರದ ಇಡಿ ಕಚೇರಿಗೆ ಕೆಲವು ದಾಖಲೆಗಳ ಸಮೇತ ಬಂದಿದ್ದ ಕೃಷ್ಣ ಇಡಿ ಅಧಿಕಾರಿಗಳು ಕೇಳಿದ ಮಾಹಿತಿ ನೀಡಿದ್ದರು.

ಸದ್ಯ ಮುಡಾ ಪ್ರಕರಣ ಲೋಕಾಯುಕ್ತ ತನಿಖೆ, ಇಡಿ ತನಿಖೆ ಮಧ್ಯೆ ನ್ಯಾಯಾಲಯದಲ್ಲೂ ಬಿಸಿ ಏರಿದೆ. ಈ ಮಧ್ಯೆ ಸ್ನೇಹಮಹಿ ಕೃಷ್ಣ ಇಡಿ ವಿಚಾರಣೆಗೆ ಹಾಜರಾಗಿದ್ದು, ತನಿಖೆಯ ಕುತೂಹಲ ಹೆಚ್ಚಿಸಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.