ಕರ್ನಾಟಕ ಕಾಂಗ್ರೆಸ್ ಮನೆಯಲ್ಲಿ ಬದಲಾವಣೆಯ ಹೊಗೆ: ಹೈಕಮಾಂಡ್ ಅಲರ್ಟ್​

ಕರ್ನಾಟಕ ಕಾಂಗ್ರೆಸ್ ಮನೆಯಲ್ಲಿ ನಡೆಯುತ್ತಿರುವ ಪ್ರತಿ ಚಟುವಟಿಕೆಗಳು ಬೆಂಕಿಯಷ್ಟೇ ಧಗಧಗಿಸುತ್ತಿದೆ. ಇದರ ಶಾಖ ದೂರದ ದೆಹಲಿಗೆ ಹೋಗಿ ಮುಟ್ಟುತ್ತಿದೆ. ಯಾಕಂದ್ರೆ ಸಚಿವರ ಸೀಕ್ರೆಟ್ ಸಭೆಗಳು ಅಷ್ಟೊಂದು ಕುತೂಹಲದ ಜೊತೆ ಡಿಕೆ ಬ್ರದರ್ ಆತಂಕಕ್ಕೂ ಕಾರಣವಾಗಿದೆ. ಅಷ್ಟಕ್ಕೂ ಆಗಿದ್ದೇನು? ಕಾಂಗ್ರೆಸ್ ಕೋಟೆಯಲ್ಲಿ ಆಗ್ತಿರೋ‌ ಮಿಂಚಿನ ಚಟುವಟಿಕೆ ಏನು ಎನ್ನುವ ಒಂದು ವರದಿ ಇಲ್ಲಿದೆ ನೋಡಿ.

ಕರ್ನಾಟಕ ಕಾಂಗ್ರೆಸ್ ಮನೆಯಲ್ಲಿ ಬದಲಾವಣೆಯ ಹೊಗೆ: ಹೈಕಮಾಂಡ್ ಅಲರ್ಟ್​
ಕರ್ನಾಟಕ ಕಾಂಗ್ರೆಸ್
Follow us
| Updated By: ರಮೇಶ್ ಬಿ. ಜವಳಗೇರಾ

Updated on: Oct 09, 2024 | 9:36 PM

ಬೆಂಗಳೂರು, (ಅಕ್ಟೋಬರ್ 09): ಮುಡಾ ಹಗರಣದಲ್ಲಿ ಇಡಿ ಪ್ರವೇಶದ ಬಳಿಕ ಕರ್ನಾಟಕ ಕಾಂಗ್ರೆಸ್​​ನಲ್ಲಿ ಸಭೆ ಮೇಲೆ ಸಭೆಗಳು.. ಗುಪ್ತ್ ಗುಪ್ತ್ ಚರ್ಚೆಗಳು.. ರಾಜ್ಯ ರಾಜಕಾರಣದಲ್ಲಿ ಈಗ ನಡೆಯುತ್ತಿರುವ ಒಂದೊಂದೇ ಸಭೆಗಳು ಹಲವು ಚರ್ಚೆಗೆ ಗ್ರಾಸವಾಗುವ ಜೊತೆ ಜೊತೆಗೆ ಕುತೂಹಲ ಹುಟ್ಟಿಸುತ್ತಿವೆ. ಅವರ ಮನೆಗೆ ಇವರು, ಇವರ ಮನೆಗೆ ಅವರು ಹೋದ್ರು. ಯಾಕೆ ಹೋದ್ರೂ ಎನ್ನುವುದೇ ಚರ್ಚೆಯ ಕೇಂದ್ರ ಬಿಂದುವಾಗಿದೆ. ಹೆಚ್ಚು ಕಡಿಮೆ ಕಳೆದೊಂದು ವಾರದಿಂದ ನಡೆಯುತ್ತಿರುವ ರಹಸ್ಯ ಸಭೆಗಳ ಜಂಜಾಟಕ್ಕೆ ದೂರದ ದೆಹಲಿ ಹೈಕಮಾಂಡ್ ನಾಯಕರು ಕೂಡ ತಲೆಕೆಡಿಸಿಕೊಂಡಿದ್ದಾರೆ.

ಕುತೂಹಲ ಹೆಚ್ಚಿಸಿದ ದಲಿತ ಸಚಿವರ‌ ಸೀಕ್ರೇಟ್ ಮೀಟಿಂಗ್

ರಾಜ್ಯ ರಾಜಕೀಯದಲ್ಲೀಗ ಬದಲಾವಣೆಯ ಬಿರುಗಾಳಿ ಎದ್ದಿದೆ. ಮುಡಾ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಕೋರ್ಟ್​ನಲ್ಲಿ ಹೋರಾಡುತ್ತಿರುವಾಗ ಬದಲಾವಣೆ ಎಂಬ ಬೆಂಕಿ ಚೆಂಡು ಎಲ್ಲರ ಮನೆ ಬಾಗಿಲಿಗೆ ಹೋಗಿ ಬರುತ್ತಿದೆ. ಇದೇ ವಿಚಾರವಾಗಿ ಸಚಿವರು, ಶಾಸಕರು ಸೀಕ್ರೆಟ್ ಸಭೆಗಳನ್ನ ನಡೆಸ್ತಿದ್ದಾರೆ‌. ನಿನ್ನೆಯಷ್ಟೇ ಮೈಸೂರಿನಲ್ಲಿ ಮೂವರು ದಲಿತ ಸಚಿವರು ಸಭೆ ನಡೆಸಿದ್ದು ಕುತೂಹಲ ಮತ್ತಷ್ಟು ಹೆಚ್ಚಿಸಿದೆ.. ದಸರಾ ಪ್ರಯುಕ್ತ ಮೈಸೂರಿಗೆ ತೆರಳಿದ್ದ ಸಚಿವ ಡಾ ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ‌ ಹಾಗೂ ಹೆಚ್ ಸಿ ಮಹಾದೇವಪ್ಪ ಸಭೆ ಮಾಡಿದ್ದರು. ಸಂಸದ ಸುನೀಲ್ ಬೋಸ್ ನಿವಾಸದಲ್ಲಿ ನಡೆದಿದ್ದ ರಹಸ್ಯ ಮೀಟಿಂಗ್ ಬದಲಾವಣೆ ಎಂಬ ಚರ್ಚೆಗೆ ಕಾರಣವಾಗಿದೆ. ಇದೇ ಸಭೆ ಕುರಿತ ಪ್ರಶ್ನೆಗೆ ಸಚಿವರು ಕಾಫಿಗೆ ಟಚ್ ಕೊಟ್ಟಿದ್ದಾರೆ.‌‌ನಾವು ಕಾಫಿ ಪೇ ಚರ್ಚಾ ನಡೆಸಿದ್ದೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಸಚಿವರು ಅದೇನೇ ಹೇಳಿದ್ರೂ ಸಭೆ ಮಾತ್ರ ಕುತೂಹಲ ಇನ್ನಷ್ಟು ಹೆಚ್ಚಿಸಿದೆ. ಯಾಕಂದ್ರೆ ಸಿದ್ದರಾಮಯ್ಯ ಅವರ ಅತ್ಯಾಪ್ತ ಸಚಿವರು ಹಾಗೂ ದಲಿತರು ಸಚಿವರು ಎನಿಸಿಕೊಂಡುವರು ಸೀಕ್ರೆಟ್ ಮೀಟಿಂಗ್ ಮಾಡಿದ್ದು ಡಿಕೆ ಬ್ರದರ್ ಅಲರ್ಟ್ ಆಗುವಂತೆ ಮಾಡಿದೆ.. ಇದೇ ಕಾರಣಕ್ಕೆ ಡಿಕೆ ಸಹೋದರರು ಬೇರೆಯದ್ದೇ ರೀತಿಯಲ್ಲಿ ದಾಳ‌ ಉರುಳಿಸುತ್ತಿದ್ದಾರೆ..

ಕರ್ನಾಟಕ ಕಾಂಗ್ರೆಸ್​​ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ದೂರದ ದೆಹಲಿ ಹೈಕಮಾಂಡ್ ನಾಯಕರು ಅಲರ್ಟ್ ಆಗಿದ್ದಾರೆ. ಸೀಕ್ರೆಟ್ ಮೀಟಿಂಗ್ ಗಳಿಗೆ ಬ್ರೇಕ್ ಹಾಕುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಗೆ ಟಾಸ್ಕ್ ನೀಡಿದಂತಿದೆ. ಕೆಲ ಸಚಿವರ ಹೇಳಿಕೆಗಳು, ಪ್ರತ್ಯೇಕ ಸಭೆಗಳು ನಡೀತಿರೋದು ಹೈಕಮಾಂಡ್ ಗೆ ಗೊತ್ತಾಗಿದೆ. ಅಲ್ಲದೇ ಒಳ ಜಗಳದಿಂದ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸೋಲಾದಕ್ಕೆ ಎಚ್ಚೆತ್ತ ಕಾಂಗ್ರೆಸ್ ಹೈಕಮಾಂಡ್, ಸಚಿವರು, ಶಾಸಕರ ವಿರುದ್ದ ಕ್ರಮಕ್ಕೆ ಮುಂದಾಗಿದೆ.

​ಸಿಎಂ-ಡಿಸಿಎಂಗೆ ಹೈಕಮಾಂಡ್ ಖಡಕ್ ಸೂಚನೆ

ಈ ಬಗ್ಗೆ ದೂರವಾಣಿ ಮೂಲಕ ಸಿಎಂ, ಡಿಸಿಎಂ ಜೊತೆ ಕೆ ಸಿ ವೇಣುಗೋಪಾಲ ಮಾತುಕತೆ ನಡೆಸಿದ್ದು,. ಇಂತಹ ಬೆಳವಣಿಗೆಗಳನ್ನು ಸಹಿಸಲಾಗದು‌. ಇದರಿಂದ ಬಿಜೆಪಿ ಮತ್ತು ಜೆಡಿಎಸ್ ಗೆ ಲಾಭ ಎಂಬ ಅಭಿಪ್ರಾಯವನ್ನ ವೇಣುಗೋಪಾಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇದಕ್ಕೆಲ್ಲಾ ಬ್ರೇಕ್ ಹಾಕಬೇಕು ಎನ್ನುವ ಕಾರಣಕ್ಕೆ ಇವತ್ತು ಸಿಎಂ ಹಾಗೂ ಡಿಸಿಎಂ ಸಭೆ ನಡೆಸಿದ್ರು.. ಈ ವೇಳೆ ಶಾಸಕರು, ಸಚಿವರ ‌ಮೀಟಿಂಗ್ ಗಳಿಗೆ ಕಡಿವಾಣ ಹಾಕೋದರ ಕುರಿತು ಚರ್ಚೆ ನಡೆಸಲಾಗಿದೆಯಂತೆ..ಆದ್ರೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್, ಬೇರೆಯದ್ದೇ ರೀತಿಯಲ್ಲಿ ಉತ್ತರ ನೀಡಿದ್ದಾರೆ..

ಅದೇನೇ ಹೇಳಿ, ಬೆಂಕಿ ಇಲ್ಲದೇ ಹೊಗೆಯಾಡಲ್ಲ, ಪೆಟ್ರೋಲ್ ಡೀಸೆಲ್ ಇಲ್ಲದೇ ಗಾಡಿ ಓಡಲ್ಲ. ಅದೇ ರೀತಿ ಈ ರಹಸ್ಯ ಸಭೆಗಳು. ಬದಲಾವಣೆ, ಅದು ಇದು ಎಂಬ ಬೆಂಕಿ ಕಾಂಗ್ರೆಸ್ ಮನೆಯಲ್ಲಿ ಹೊಗೆಯಾಡುತ್ತಿದೆ. ಇದು ಮುಂದೆ ಯಾವ್ಯಾವ ಹಾದಿ‌ ಹಿಡಿಯುತ್ತದೆ ಎನ್ನುವುದನ್ನು ಕಾದುನೋಡಬೇಕಷ್ಟೇ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್
ದರ್ಶನ್-ಪವಿತ್ರಾ ಜಾಮೀನು ಅರ್ಜಿ ವಿಚಾರಣೆ LIVE
ದರ್ಶನ್-ಪವಿತ್ರಾ ಜಾಮೀನು ಅರ್ಜಿ ವಿಚಾರಣೆ LIVE
ಶಿವಕುಮಾರ್​ಗೆ ಮುನ್ನ ಸಿಎಂ ಭೇಟಿಯಾಗಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಶಿವಕುಮಾರ್​ಗೆ ಮುನ್ನ ಸಿಎಂ ಭೇಟಿಯಾಗಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಜೈಲಿಗೆ ಬಂದ ಡಾಕ್ಟರ್​ಗಳಲ್ಲಿ ಒಬ್ಬರೂ ಪರಿಣಿತರಲ್ಲ, ಎಲ್ಲರೂ ಜ್ಯೂನಿಯರ್​ಗಳು
ಜೈಲಿಗೆ ಬಂದ ಡಾಕ್ಟರ್​ಗಳಲ್ಲಿ ಒಬ್ಬರೂ ಪರಿಣಿತರಲ್ಲ, ಎಲ್ಲರೂ ಜ್ಯೂನಿಯರ್​ಗಳು