ಬೆಂಗಳೂರು, ಫೆಬ್ರವರಿ 13: ಮುಡಾ ಹಗರಣ ಸಂಬಂಧ ಒಂದೆಡೆ ಜಾರಿ ನಿರ್ದೇಶನಾಲಯ ತನಿಖೆ ಚುರುಕುಗೊಳಿಸಿದ್ದರೆ ಮತ್ತೊಂದೆಡೆ, ಲೋಕಾಯುಕ್ತ ತನಿಖೆಯ ಅಂತಿಮ ವರದಿ ಸಲ್ಲಿಕೆ ಮಾಡಲಾಗಿದೆ. ಹಗರಣದ ಇಂಚಿಂಚೂ ತನಿಖೆ ನಡೆಸಿರುವ ಲೋಕಾಯುಕ್ತ ಪೊಲೀಸರು, ಐಜಿಪಿ ಸುಬ್ರಮಣ್ಯೇಶ್ವರ ರಾವ್ಗೆ ತನಿಖೆಯ ಅಂತಿಮ ವರದಿ ಸಲ್ಲಿಕೆ ಮಾಡಿದ್ದಾರೆ. ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ ಸಲ್ಲಿಸಿರುವ ವರದಿಯಲ್ಲಿ ಕೆಲವು ಮಹತ್ವದ ಅಂಶಗಳನ್ನು ಉಲ್ಲೇಖ ಮಾಡಲಾಗಿದೆ.
550 ಪುಟಗಳ ವರದಿ ಸಲ್ಲಿಕೆ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು, 5 ಭಾಗಗಳಾಗಿ ವಿಂಗಡಣೆ ಮಾಡಿದ್ದಾರೆ.
ಕೆಲ ಅಧಿಕಾರಿಗಳು ನಿಯಮ ಗಾಳಿಗೆ ತೂರಿರುವುದು ಕಂಡು ಬಂದಿದೆ. ಮುಡಾದಲ್ಲಿ 14 ಸೈಟ್ ನೀಡುವ ಅವಶ್ಯಕತೆ ಇರಲಿಲ್ಲವೆಂದು ಉಲ್ಲೇಖ ಮಾಡಲಾಗಿದೆ. ಸೈಟ್ ನೀಡುವ ಅವಶ್ಯಕತೆ ಇಲ್ಲದೇ ಇದ್ರೂ ಸೈಟ್ ನೀಡಿರುವುದು ಕಂಡುಬಂದಿದೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಹಗರಣದಲ್ಲಿ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗಿರುವುದು ಕಂಡು ಬಂದಿಲ್ಲ, ಆದರೆ, ಕೆಲವೊಂದು ದಾಖಲೆಗಳು, 14 ಸೈಟ್ಗಳನ್ನು ನೀಡಿರುವ ಬಗ್ಗೆ ಉಲ್ಲೇಖ ಮಾಡಲಾಗಿದೆ.
ಇದನ್ನೂ ಓದಿ: ‘ಲಾಂಗೆಸ್ಟ್ ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ’ ಆಗ್ತೀನಿ ಎಂದ ಸಿದ್ದರಾಮಯ್ಯ: ಸಿಎಂ ಹುದ್ದೆ ಚರ್ಚೆಗೆ ಮೆಗಾ ಟ್ವಿಸ್ಟ್
ಇದೀಗ ದೂರುದಾರ ಸ್ನೇಹಮಯಿ ಕೃಷ್ಣ ನಡೆ ನಿಗೂಢವಾಗಿದೆ. ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸದಿರಲು ನಿರ್ಧಾರ ಮಾಡಿದ್ದಾರೆ. ಮತ್ತೊಂದು ವಿಶೇಷ ಅಂದರೆ, ಮುಡಾ ಹಗರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ತಾವೇ ವಾದ ಮಂಡನೆಗೆ ಸ್ನೇಹಮಯಿ ಕೃಷ್ಣ ನಿರ್ಧಾರ ಮಾಡಿದ್ದಾರೆ. ವಕೀಲರನ್ನು ನೇಮಿಸಿಕೊಳ್ಳುವ ಬದಲು, ತಾವೇ ವಾದ ಮಂಡನೆ ಮಾಡಲಿದ್ದಾರೆ. ವಕೀಲರ ನೇಮಿಸಿಕೊಳ್ಳುವ ಹಕ್ಕನ್ನು ಉಳಿಸಿಕೊಂಡು, ವಕೀಲರ ಸಹಕಾರ ಸಲಹೆಗಳೊಂದಿಗೆ ತಮ್ಮ ಆರೋಪಗಳ ಸಂಬಂಧ ಹೋರಾಟ ಮಾಡಲಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ