ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಪರಿಹಾರ ನೀಡುವ ವಿಚಾರದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿ, ಆ ಜಮೀನಿನ ಸಂಪೂರ್ಣ ಮಾಹಿತಿ ‘ಟಿವಿ9’ಗೆ ಲಭ್ಯವಾಗಿದೆ. ಆ ವಿವರ ಹಾಗೂ ಇಡೀ ಪ್ರಕರಣದ ಪ್ರಕರಣದ ಸಂಪೂರ್ಣ ಟೈಮ್ಲೈನ್ ಇಲ್ಲಿದೆ.
Ad
ಸಿದ್ದರಾಮಯ್ಯ
Follow us on
ಬೆಂಗಳೂರು, ಜುಲೈ 6: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದ ಪ್ರತಿಪಕ್ಷ ಬಿಜೆಪಿ ಸಿಎಂ ಸಿದ್ದರಾಮಯ್ಯರನ್ನು ಗುರಿಯಾಗಿಸಿಕೊಂಡು ತೀವ್ರ ವಾಗ್ದಾಳಿ ನಡೆಸುತ್ತಿದೆ. ಮತ್ತೊಂದೆಡೆ ಸಿದ್ದರಾಮಯ್ಯ ರಾಜೀನಾಮೆಗೂ ಆಗ್ರಹ ವ್ಯಕ್ತವಾಗಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಕಾಂಗ್ರೆಸ್ ಪಕ್ಷದವರೇ ಹಗರಣವನ್ನು ಬಯಲಿಗೆಳೆದಿದ್ದಾರೆ. ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಿಂದಲೇ ಈ ಕೃತ್ಯ ನಡೆದಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದರು. ಇದೀಗ, ಸಿಎಂ ಪತ್ನಿಗೆ ಹಂಚಿಕೆ ಮಾಡಲಾಗಿದೆ ಎಂಬ ನಿವೇಶನದ ಕುರಿತ ಸಂಪೂರ್ಣ ಮಾಹಿತಿ ‘ಟಿವಿ9’ಗೆ ದೊರೆತಿದೆ.
ಪ್ರಕರಣದ ಸಂಪೂರ್ಣ ಮಾಹಿತಿ ಮತ್ತು ಟೈಮ್ ಲೈನ್ ಇಲ್ಲಿದೆ.
ಕೆಸರೆ ಸರ್ವೇ ನಂ 462ನಲ್ಲಿ 3.16 ಎಕರೆ ಜಮೀನು
1992ರಲ್ಲಿ ಮುಡಾದಿಂದ ಜಮೀನು ವಶದ ಪ್ರಕ್ರಿಯೆ ಆರಂಭ
1997 ರಲ್ಲಿ ಜಮೀನು ಸ್ವಾಧೀನಕ್ಕೆ ಪಡೆದು ವಶಪಡಿಸಿಕೊಂಡ ಮುಡಾ
1998ರಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಟ್ಟ ಮುಡಾ
2003ರಲ್ಲಿ ಮೂಲ ಖಾತೆದಾರನ ಹೆಸರಿಗೆ ಜಮೀನು
2004ರಲ್ಲಿ ಜಮೀನು ಖರೀದಿ ಮಾಡಿದ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ
2005ರಲ್ಲಿ ಕೃಷಿ ಭೂಮಿಯಿಂದ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ
2010ಕ್ಕೆ ಮಲ್ಲಿಕಾರ್ಜುನ ಸ್ವಾಮಿಯಿಂದ ಸಿದ್ದರಾಮಯ್ಯ ಪತ್ನಿಗೆ ದಾನದ ಮೂಲಕ ಜಮೀನು
2014ರಲ್ಲಿ ನಮ್ಮ ಜಮೀನು ಮುಡಾ ಬಳಸಿಕೊಂಡಿದೆ ಎಂದು ಪಾರ್ವತಿಯಿಂದ ಮುಡಾಗೆ ದೂರು
2014ರಲ್ಲಿ ಮೊದಲ ಬಾರಿಗೆ ಸಭೆಯಲ್ಲಿ ಈ ವಿಚಾರ ಮಂಡನೆ
2017ರಲ್ಲಿ ಈ ಸಂಬಂಧ ತನಿಖೆಗೆ ಆದೇಶ
2017ರಲ್ಲಿ 15 ದಿನದ ತನಿಖೆ ನಡೆಸಿ ಪರಿಹಾರದ ಭೂಮಿ ನೀಡಲು ನಿರ್ಧಾರ
2018ರಲ್ಲಿ ಈ ಬಗ್ಗೆ ಪ್ರಕ್ರಿಯೆ ಆರಂಭ
2018ರಲ್ಲಿ ಪ್ರಕ್ರಿಯೆ ಪೂರ್ಣ
2020ರಲ್ಲಿ ವಿಜಯನಗರ ಮೂರನೇ ಹಂತದಲ್ಲಿ ಬದಲಿ ನಿವೇಶನ ನೀಡಲು ತೀರ್ಮಾನ
2021ಕ್ಕೆ ಪಾರ್ವತಿ ಅವರಿಗೆ ಬದಲಿ ನಿವೇಶನ ಹಂಚಿಕೆ ಮಾಡಿ ಹಕ್ಕು ಪತ್ರ