ಮಣಿಯದ ಎಂಪಿ ರೇಣುಕಾಚಾರ್ಯ; ರವಿಕುಮಾರ್ ಮತ್ತು ಮುರುಗೇಶ್ ನಿರಾಣಿ ಸಂಧಾನ ವಿಫಲ

ಮಣಿಯದ ಎಂಪಿ ರೇಣುಕಾಚಾರ್ಯ; ರವಿಕುಮಾರ್ ಮತ್ತು ಮುರುಗೇಶ್ ನಿರಾಣಿ ಸಂಧಾನ ವಿಫಲ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 19, 2024 | 10:36 AM

ರೇಣುಕಾಚಾರ್ಯ ಜೊತೆ ಮಾತುಕತೆ ನಡೆಸಿ ಸಂಧಾನಕ್ಕೆಂದು ಬಂದಿದ್ದ ಮಾಜಿ ಸಚಿವ ಮುರುಗೇಶ್ ನಿರಾಣಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಮಾಜಿ ಶಾಸಕನ ಮನವೊಲಿಸಲು ವಿಫಲರಾಗಿ ನಿರಾಶೆಯಿಂದ ವಾಪಸ್ಸು ಹೋಗಬೇಕಾಯಿತು. ದಾವಣಗೆರೆ ಹಾಲಿ ಸಂಸದ ಜಿಎಂ ಸಿದ್ದೇಶ್ವರ ಅವರ ಪತ್ನಿ ಗಾಯತ್ರಿಯವರಿಗೆ ನೀಡಿರುವ ಟಿಕೆಟ್ ಕ್ಯಾನ್ಸಲ್ ಮಾಡಿ ತನಗೆ ನೀಡಬೇಕೆಂದು ರೇಣುಕಾಚಾರ್ಯ ಪಟ್ಟು ಹಿಡಿದಿದ್ದಾರೆ.

ದಾವಣಗೆರೆ: ಮಾಧ್ಯಮಗಳಲ್ಲಿ ಪದೇಪದೆ ವರದಿಯಾಗುತ್ತಿರುವ ಹಾಗೆ ರಾಜ್ಯ ಬಿಜೆಪಿ ಘಟಕದಲ್ಲಿ ಬಂಡಾಯದ ಗಾಳಿ ಜೋರಾಗಿ ಬೀಸುತ್ತಿದೆ. ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (MP Renukacharya) ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ತಮಗೆ ನೀಡಬೇಕೆಂದು ಪಟ್ಟು ಹಿಡಿದು ಕೂತಿದ್ದಾರೆ. ಹಿರಿಯ ನಾಯಕ ಕೆಎಸ್ ಈಶ್ವರಪ್ಪರಂತೆ (KS Eshwarappa) ಅವರು ರೆಬೆಲ್ ಪ್ರವೃತ್ತಿ ಪ್ರದರ್ಶಿಸುತ್ತಿರುವುದು ಗೊತ್ತಿರುವ ಸಂಗತಿಯೇ. ನಿನ್ನೆ ಶಿವಮೊಗ್ಗದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಕಾರ್ಯಕ್ರಮದಲ್ಲಿ ಇವರಿಬ್ಬರು ಭಾಗಿಯಾಗದೆ ತಮ್ಮ ಮುನಿಸು ಮತ್ತು ಅಸಮಾಧಾನ ಪ್ರಕಟಿಸಿದರು. ರೇಣುಕಾಚಾರ್ಯ ಜೊತೆ ಇತರ ಅತೃಪ್ತ ನಾಯಕರು ಎಸ್ ಎ ರವೀಂದ್ರನಾಥ್, ಕರುಣಾಕರ ರೆಡ್ಡಿ, ಬಸವರಾಜ್, ಮಾಡಾಳ್ ಮಲ್ಲಿಕಾರ್ಜುನ, ಬಿಜೆ ಅಜಯಕುಮಾರ್, ಲೋಕಿಕೆರೆ ನಾಗರಾಜ್ ಮತ್ತು ಡಾ ರವಿಕುಮಾರ್ ಸೇರಿದ್ದಾರೆ ಮತ್ತು ಒಟ್ಟುಗೂಡಿ ಸಭೆಗಳನ್ನೂ ನಡೆಸುತ್ತಿದ್ದಾರೆ. ಅವರ ಜೊತೆ ಮಾತುಕತೆ ನಡೆಸಿ ಸಂಧಾನಕ್ಕೆಂದು ಬಂದಿದ್ದ ಮಾಜಿ ಸಚಿವ ಮುರುಗೇಶ್ ನಿರಾಣಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಮಾಜಿ ಶಾಸಕನ ಮನವೊಲಿಸಲು ವಿಫಲರಾಗಿ ನಿರಾಶೆಯಿಂದ ವಾಪಸ್ಸು ಹೋಗಬೇಕಾಯಿತು. ದಾವಣಗೆರೆ ಹಾಲಿ ಸಂಸದ ಜಿಎಂ ಸಿದ್ದೇಶ್ವರ ಅವರ ಪತ್ನಿ ಗಾಯತ್ರಿಯವರಿಗೆ ನೀಡಿರುವ ಟಿಕೆಟ್ ಕ್ಯಾನ್ಸಲ್ ಮಾಡಿ ತನಗೆ ನೀಡಬೇಕೆಂದು ರೇಣುಕಾಚಾರ್ಯ ಪಟ್ಟು ಹಿಡಿದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ: ಯತ್ನಾಳ್, ವಿ ಸೋಮಣ್ಣ ಅವರ ಪಾಪದ ಕೊಡ ತುಂಬಿದೆ, ನಾಶವಾಗುತ್ತಾರೆ ಎಂದ ಎಂಪಿ ರೇಣುಕಾಚಾರ್ಯ