ಮರಳು, ಕ್ರಷರ್ ಇಲ್ಲದೆ ನಮ್ಮ ಅಭಿವೃದ್ಧಿಯಾಗಲ್ಲ – ಗಣಿ ಸಚಿವ ಮರುಗೇಶ್ ನಿರಾಣಿ

| Updated By: ಸಾಧು ಶ್ರೀನಾಥ್​

Updated on: Feb 27, 2021 | 2:36 PM

Murugesh Nirani: ಪ್ರತಿಯೊಬ್ಬ ವ್ಯಕ್ತಿಗೂ ಮರಳು ಸಿಗಬೇಕು ಎಂದು ಹೇಳಿದರು. ಜೊತೆಗೆ 79ನೇ ವರ್ಷಕ್ಕೆ ಕಾಲಿಟ್ಟ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಹುಟ್ಟು ಹಬ್ಬವನ್ನು ದೇಶ ವಿದೇಶದಲ್ಲಿ ಆಚರಣೆ ಮಾಡುತ್ತಿದ್ದಾರೆ. ಅವರಿಗೆ ಇನ್ನು ಹೆಚ್ಚು ಕೆಲಸ ಮಾಡುವ ಶಕ್ತಿ ಕೊಡಲಿ ಎಂದು ಹಾರೈಸಿದರು.

ಮರಳು, ಕ್ರಷರ್ ಇಲ್ಲದೆ ನಮ್ಮ ಅಭಿವೃದ್ಧಿಯಾಗಲ್ಲ - ಗಣಿ ಸಚಿವ ಮರುಗೇಶ್ ನಿರಾಣಿ
ಸಚಿವ ಮುರುಗೇಶ್​ ನಿರಾಣಿ
Follow us on

ಕೊಪ್ಪಳ: ಮರಳು, ಕ್ರಷರ್ ಇಲ್ಲದೆ ನಮ್ಮ ಅಭಿವೃದ್ಧಿಯಾಗಲ್ಲ. ಮರಳು, ಕಲ್ಲು ಗಣಿಗಾರಿಕೆ ಸ್ಥಗಿತ ಮಾಡುವುದಕ್ಕೆ ಆಗುವುದಿಲ್ಲ ಎಂದಿರುವ ಗಣಿ ಮತ್ತು ಭೂವಿಜ್ಞಾನ ಸಚಿವ ಮರುಗೇಶ್ ನಿರಾಣಿ ಅವರು 100 ಲಾರಿಗಳಲ್ಲಿ 10 ಲಾರಿಗೆ ಮಾತ್ರ ಅನುಮತಿ ಇರುತ್ತದೆ. 90 ಲಾರಿ ನಂಬರ್ ಡಬಲ್ ಇರುತ್ತದೆ. ಹೆಚ್ಚುವರಿ ಹಣ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೇಬಿಗೆ ಹೋಗುತ್ತದೆ. ಎಲ್ಲಾ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಇದರಲ್ಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಮುತ್ತಿಗೆ ರಾಜಕೀಯ ಪ್ರೇರಿತ ಎಂದು ಹೇಳಿದ ಸಚಿವ ನಿರಾಣಿ, ಅಲ್ಲಿ ಮೃತರಾದವರಿಗೆ ಕೆಲಸ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಗಲಾಟೆ ಆಯಿತು. ಕ್ರಮ ಕೈಗೊಳ್ಳಲು ಹಟ್ಟಿ ಚಿನ್ನದ ಗಣಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕೊರೊನಾದಿಂದ ಹಟ್ಟಿ ಚಿನ್ನದ ಗಣಿಯಲ್ಲಿ ಉತ್ಪಾದನೆ ಕುಂಠಿತವಾಗಿದೆ. 70 ವರ್ಷಗಳಿಂದ ಗಣಿಯಲ್ಲಿ ಗಟ್ಟಿ ಬಂಗಾರ ಮಾರುತ್ತಿದ್ದಾರೆ. ಆಭರಣ ತಯಾರಿಸಿ ಮಾರಾಟ ಮಾಡುವಂತೆ ಸೂಚಿಸಿದ್ದೇನೆ ಎಂದರು.

ಅಲ್ಲದೇ ಹಟ್ಟಿ ಚಿನ್ನದ ಗಣಿಯನ್ನು ಕರ್ನಾಟಕ ಸ್ಟೇಟ್ ಹಟ್ಟಿ ಚಿನ್ನದ ಗಣಿ ಎಂದು ಮರು ನಾಮಕಾರಣ ಮಾಡಲಾಗುವುದು. ಗೋಲ್ಡ್ ಮೈನ್ ಯಾವ ಕಡೆ ಹೆಚ್ಚಿದೆ ಅಲ್ಲಿ ಕೆಲವರಿಗೆ ತರಬೇತಿ ನೀಡುವ ಯೋಚನೆ ಇದೆ. ಉತ್ಪಾದನೆ ಜಾಸ್ತಿ ಮಾಡಲು ಕೆಲ ಯುವಕರಿಗೆ ತರಬೇತಿ ನೀಡಲಾಗುವುದು. ಕರ್ನಾಟಕದಲ್ಲೇ ಹೆಚ್ಚು ಖನಿಜ ಸಂಪತ್ತು ಇದೆ. ಅದು ನಮ್ಮ ಸೌಭಾಗ್ಯ ಎಂದು ಹೇಳಿದರು.

ಕೆಲಸ ಮಾಡುವ ಶಕ್ತಿ ಕೊಡಲಿ
ರಾಜ್ಯದಲ್ಲಿ ಮರಳು ನೀತಿ ಸರಳೀಕರಣ ಆಗಬೇಕು. ಅಧಿಕಾರಿಗಳಿಂದ, ಜನಪ್ರತಿನಿಧಿಗಳಿಂದ ಕಿರುಕುಳ ಆಗಬಾರದು. ಪ್ರತಿಯೊಬ್ಬ ವ್ಯಕ್ತಿಗೂ ಮರಳು ಸಿಗಬೇಕು ಎಂದು ಹೇಳಿದರು. ಜೊತೆಗೆ 79ನೇ ವರ್ಷಕ್ಕೆ ಕಾಲಿಟ್ಟ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಹುಟ್ಟು ಹಬ್ಬವನ್ನು ದೇಶ ವಿದೇಶದಲ್ಲಿ ಆಚರಣೆ ಮಾಡುತ್ತಿದ್ದಾರೆ. ಅವರಿಗೆ ಇನ್ನು ಹೆಚ್ಚು ಕೆಲಸ ಮಾಡುವ ಶಕ್ತಿ ಕೊಡಲಿ ಎಂದು ಹಾರೈಸಿದರು.

ಕಾಶಪ್ಪನವರಷ್ಟು ಲೀಡರ್​ಶಿಪ್​ ನನಗೆ ಇಲ್ಲ ಎಂದ ನಿರಾಣಿ
ಪಂಚಮಸಾಲಿ ಮೀಸಲಾತಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ನಿರಾಣಿ ಯಾವುದೇ ಸಮಾಜದ ಒಬ್ಬ ವ್ಯಕ್ತಿಗೆ ಮೀಸಲಾತಿ ಕೊಡುವ ಹಕ್ಕಿಲ್ಲ. ವೀರಶೈವ ಲಿಂಗಾಯತ ಸಮಾಜ ಒಗ್ಗಟ್ಟಾಗಿರಬೇಕು. ಇಡೀ ವೀರಶೈವ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಸಿಗಬೇಕು. ಮುಖ್ಯಮಂತ್ರಿಗಳು ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ ಎಂದರು. ಅಲ್ಲದೇ ವಿಜಯಾನಂದ ಕಾಶಪ್ಪನವರಷ್ಟು ಲೀಡರ್​ಶಿಪ್ ನನಗೆ ಇಲ್ಲ. ಅವರು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ ಎಂದು ಸಚಿವರು ವ್ಯಂಗ್ಯ ಮಾಡಿದರು.

ಇದನ್ನೂ ಓದಿ

ಅಕ್ರಮ ಸ್ಫೋಟಕಗಳನ್ನು ಹಿಂದಿರುಗಿಸದಿದ್ದರೆ ಗಣಿ ಗುತ್ತಿಗೆ ಲೈಸೆನ್ಸ್ ರದ್ದು; ಮುರುಗೇಶ್ ನಿರಾಣಿ ಎಚ್ಚರಿಕೆ

ಗಣಿಗಳಲ್ಲಿ 15 ದಿನಕ್ಕೊಮ್ಮೆ ಅಧಿಕಾರಿಗಳಿಂದ ಸ್ಫೋಟಕಗಳ ಪರಿಶೀಲನೆ: ಬಸವರಾಜ ಬೊಮ್ಮಾಯಿ