AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಹಿನ್ನೆಲೆ: ಸರಳವಾಗಿ ನಡೆದ ಮೈಲಾಪುರ ಮಲ್ಲಯ್ಯನ ಜಾತ್ರೆ!

ಮೈಲಾಪುರದ ಮೈಲಾರಲಿಂಗೇಶ್ವರ ಪಲ್ಲಕ್ಕಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಎಲ್ಲೆಡೆ ಕಂಡು ಬಂದಿದ್ದರಿಂದ ಸರಳವಾಗಿ ಜಾತ್ರೆ ನಡೆಸುವಂತೆ ಜಿಲ್ಲಾಡಳಿತ ತಿಳಿಸಿದೆ. ಈ ಕುರಿತಂತೆ ಜಾತ್ರೆ ಕಟ್ಟು ನಿಟ್ಟಿನಲ್ಲಿ ಸರಳವಾಗಿ ಗುರವಾರ ನೆರವೇರಿದೆ.

ಕೊರೊನಾ ಹಿನ್ನೆಲೆ: ಸರಳವಾಗಿ ನಡೆದ ಮೈಲಾಪುರ ಮಲ್ಲಯ್ಯನ ಜಾತ್ರೆ!
ಮೈಲಾಪುರ ಮಲ್ಲಯ್ಯನ ಜಾತ್ರೆ
shruti hegde
| Edited By: |

Updated on: Jan 16, 2021 | 10:29 AM

Share

ಯಾದಗಿರಿ: ಮೈಲಾಪುರದ ಮೈಲಾರಲಿಂಗೇಶ್ವರ ಪಲ್ಲಕ್ಕಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಎಲ್ಲೆಡೆ ಕಂಡು ಬಂದಿದ್ದರಿಂದ ಸರಳವಾಗಿ ಜಾತ್ರೆ ನಡೆಸುವಂತೆ ಜಿಲ್ಲಾಡಳಿತ ತಿಳಿಸಿದೆ. ಈ ಕುರಿತಂತೆ ಜಾತ್ರೆ ಕಟ್ಟು ನಿಟ್ಟಿನಲ್ಲಿ ಸರಳವಾಗಿ ಗುರುವಾರ ನೆರವೇರಿದೆ.

ಜಾತ್ರೆ ವಿಶೇಷದಂದು ವಿವಿಧ ಕಾರ್ಯಕ್ರಮಗಳು:

ಬೆಳಿಗ್ಗೆ 7.30ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. 11.30ಕ್ಕೆ ಮಲ್ಲಯ್ಯಯನ ಹೊನ್ನಕೆರೆಯಲ್ಲಿ ಗಂಗಾಸ್ನಾನ, ಸರಪಳಿ ಹರಿಯುವ ಕಾರ್ಯಕ್ರಮ, ಐದು ಬಾರಿ ದೇಗುಲ ಪ್ರದಕ್ಷಿಣೆ ನಡೆಯಿತು. ಸಂಜೆಯ ವಿಶೇಷ ಪೂಜೆಯ ವೇಳೆ ಆರ್ಚಕರು, ಸೇವಾದಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಮೈಲಾರಲಿಂಗೇಶ್ವರ ದೇವಸ್ಥಾನ ಮುಂಭಾಗ ಸರಪಳಿ ಹರಿಯುವ ಕಾರ್ಯಕ್ರಮದಲ್ಲಿ ಹೆಚ್ಚಿನ ಭಕ್ತರು ಸೇರಬಾರದು ಎಂದು ಗೇಟ್‌ ಬಂದ್​ ಮಾಡಲಾಗಿತ್ತು.

ಕೊರೊನಾ ಹಿನ್ನಲೆ ಭಕ್ತರ ಸಂಖ್ಯೆ ಕಡಿಮೆ:

ಪ್ರತಿ ವರ್ಷ ಸಂಕ್ರಮಣ ದಿನದಂದು ನಡೆಯುವ ಮೈಲಾಪುರ ಮಲ್ಲಯ್ಯನ ಜಾತ್ರೆಗೆ ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಬರುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಎಂಬ ಮಹಾಮಾರಿ ಎಲ್ಲಾ ತಲೆಕೆಳಗಾಗಿ ಮಾಡಿದೆ. ಜಿಲ್ಲಾಡಳಿತ ಸರಳವಾಗಿ ಜಾತ್ರೆಯನ್ನು ನಡೆಸಿದ್ದರಿಂದ ಜೊತೆಗೆ, ಕೊವಿಡ್ ನಿಯಮ ಪಾಲನೆ ಮಾಡಬೇಕಾದ ಹಿನ್ನೆಲೆಯಲ್ಲಿ ದೇವಸ್ಥಾನದಿಂದ ಹೊನ್ನ ಕೆರೆಗೆ ಹೋಗುವರರೆಗೆ ದಾರಿ ಉದ್ದಕ್ಕೂ ಭಕ್ತ ಸಾಗರವೇ ಕಂಡು ಬರುತ್ತಿದ್ದ ಭಕ್ತರ ಸಂಖ್ಯೆಯಲ್ಲಿ, ಈ ವರ್ಷ ಸರಳವಾಗಿ ಜಾತ್ರೆ ಆಚರಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದರೂ ಕೂಡಾ ಜಾತ್ರೆ ವಿಜೃಂಭಣೆಯಿಂದ ಸರಳವಾಗಿ ನೆರವೇರಿದೆ. ಮಲ್ಲಯ್ಯನ ಭಕ್ತರು ಆಗಾಗ ಏಳು ಕೋಟಿ.. ಏಳು ಕೋಟಿ.. ಎಂದು ಘೋಷಣೆ ಕೂಗುತ್ತಾ ಜಾತ್ರೆಯಲ್ಲಿ ತೊಡಗಿದ್ದರು.

ಜಿಲ್ಲಾಡಳಿತದ ವಿರುದ್ಧ ಭಕ್ತರ ಆಕ್ರೋಶ:

ಜಾತ್ರೆ ರದ್ದು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಆದರೆ ಕೊವಿಡ್‌ ನಿಮಯ ಪಾಲನೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಎಲ್ಲಿಯೂ ಅಂತರ ಪಾಲನೆ ಕಂಡು ಬರಲಿಲ್ಲ. ಜಾತ್ರೆ ರದ್ದು ಮಾಡುವ ಬದಲು ಆಚರಣೆಗೆ ಅವಕಾಶ ನೀಡಬೇಕಾಗಿತ್ತು. ರದ್ದು ಮಾಡಲಾಗಿದೆ ಎಂದು ಹೇಳಿ ಎಲ್ಲ ಕಾರ್ಯಗಳಿಗೆ ಅನುಮತಿ ನೀಡಲಾಗಿದೆ. ಇದರಿಂದ ದೂರದ ಭಕ್ತರಿಗೆ ನಿರಾಶೆಯಾಗಿದೆ ಎಂದು ಮಲ್ಲಯ್ಯ ಪೂಜಾರಿ ಹಳಿಗೇರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ ಭೀತಿ: ಸುತ್ತೂರು ಜಾತ್ರೆ ಒಂದೇ ದಿನಕ್ಕೆ ಸೀಮಿತ