ರೈತ ದಸರಾಗೆ ಅನ್ನದಾತರಿಂದ ಉತ್ತಮ ಸ್ಪಂದನೆ: ವಿಡಿಯೋ ನೋಡಿ

Updated on: Sep 27, 2025 | 10:13 AM

ಮೈಸೂರಿನಲ್ಲಿ ದಸರಾ ಸಂಭ್ರಮ ಜೋರಾಗಿದೆ. ದಿನಕ್ಕೊಂದು ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇನ್ನು 3 ದಿನ ಮೈಸೂರಿನಲ್ಲಿ ರೈತ ದಸರಾ ನಡೆಯಲಿದೆ. ರೈತ ದಸರಾಕ್ಕೆ ಕೃಷಿ ಸಚಿವ ಚೆಲುವರಾಯಸ್ವಾಮಿ ಚಾಲನೆ ನೀಡಿದ್ದಾರೆ. ಈ ವಿಶೇಷ ರೈತ ಸಂಭ್ರಮದಲ್ಲಿ ವಿವಿಧ ಪ್ರಾಣಿ ಸಕಾಣಿಕೆ, ವಿವಿಧ ಬೆಳೆಗಳು ಮತ್ತು ರೈತರು ಬಳಸುವ ಉಪಕರಣಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ಮೈಸೂರು, ಸೆಪ್ಟೆಂಬರ್ 27: ಮೈಸೂರಿನಲ್ಲಿ ದಸರಾ ಸಂಭ್ರಮ ಭರ್ಜರಿಯಾಗಿದೆ. ದಿನಕ್ಕೊಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅದರಲ್ಲಿ ರೈತ ದಸರಾ ಎಲ್ಲರ ಗಮನ ಸೆಳೆಯುತ್ತಿದೆ. ಕೃಷಿ ಸಚಿವ ಚೆಲುವರಾಯ ಸ್ವಾಮಿ 3 ದಿನದ ರೈತ ದಸರಾಗೆ ಚಾಲನೆ ನೀಡಿದ್ದು, ವಿವಿಧ ರೀತಿಯ ಬೆಳೆಗಳು, ರೈತರು ಬಳಸುವ ವಿವಿಧ ವೈಜ್ಞಾನಿಕ ಉಪಕರಣಗಳ ಬಗ್ಗೆ ಪರಿಚಯ ಮಾಡಿಕೊಡಲಾಗುತ್ತಿದೆ. ಜೊತೆಗೆ ಜಾನುವಾರು ಸೇರಿದಂತೆ ರೈತರಿಗೆ ಸಿಗುವ ಸಾಲ ಸೌಲಭ್ಯಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published on: Sep 27, 2025 10:10 AM