ಜುಬಿಲಿಯಂಟ್​ನಲ್ಲಿ ರೆಮ್​ಡೆಸಿವರ್ ತಯಾರಿಕೆ ; ಮೈಸೂರಿಗೆ ಔಷಧಿ ಪೂರೈಕೆ ಮಾಡುವಂತೆ ಜಿಲ್ಲಾಡಳಿತದಿಂದ ಮನವಿ

|

Updated on: May 11, 2021 | 11:26 AM

ಮೈಸೂರು ಜಿಲ್ಲಾಡಳಿತ ಕಾರ್ಖಾನೆಗೆ ಭೇಟಿ ನೀಡಿ ಮೈಸೂರಿಗೆ ರೆಮ್​ಡೆಸಿವರ್ ಸರಬರಾಜು ಮಾಡುವಂತೆ ಮನವಿ ಮಾಡಿಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಹರ್ಷವರ್ಧನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಕಾರ್ಖಾನೆ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಜುಬಿಲಿಯಂಟ್​ನಲ್ಲಿ ರೆಮ್​ಡೆಸಿವರ್ ತಯಾರಿಕೆ ; ಮೈಸೂರಿಗೆ ಔಷಧಿ ಪೂರೈಕೆ ಮಾಡುವಂತೆ ಜಿಲ್ಲಾಡಳಿತದಿಂದ ಮನವಿ
ರೆಮ್​ಡೆಸಿವರ್ ತಯಾರಿ ನಂತರ ಮೈಸೂರಿಗೆ ಪೂರೈಕೆ ಮಾಡುವಂತೆ ಮನವಿ
Follow us on

ಮೈಸೂರು: ಜಿಲ್ಲೆಯ ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆ ಕೊರೊನಾ ಪ್ರಾರಂಭದ ದಿನದಲ್ಲಿ‌ ಇಡೀ ಮೈಸೂರಿಗೆ ಕಂಟಕವಾಗಿ ಪರಿಣಮಿಸಿತ್ತು. ಕೊರೊನಾ ಖಾಯಿಲೆ ಸ್ವರೂಪ ಏನು? ಅದರ ಹರಡುವಿಕೆಯ ಕ್ರಮ ಹೇಗೆ ಎಂಬ ಅರಿವೆ ಇಲ್ಲದ ಸಂದರ್ಭದಲ್ಲಿ ಕಾರ್ಖಾನೆಯ ಒಬ್ಬ ನೌಕರನಲ್ಲಿ ಕಾಣಿಸಿಕೊಂಡ ಸೋಂಕು 40 ಜನ ಕಾರ್ಮಿಕರಿಗೆ ಹರಡಿತ್ತು. ನಂತರ ಈ ಸೋಂಕಿತರು ನೂರಾರು ಜನರಿಗೆ ಸೋಂಕನ್ನು ಹಬ್ಬಿಸಿದ್ದರು. ಆದರೆ ಮೊದಲನೇ ಅಲೆಯಲ್ಲಿ ಕಂಟಕವಾಗಿದ್ದ ಕಾರ್ಖಾನೆ ಇದೀಗಾ ಕೊರೊನಾಗೆ ಜೀವರಕ್ಷಕವಾಗಿದೆ. ಸದ್ಯ ಈ ಜುಬಿಲಿಯಂಟ್ ಕಾರ್ಖಾನೆಯೆ ಕೊರೊನಾಗೆ ಜೀವರಕ್ಷಕ ಎನಿಸಿಕೊಂಡಿರುವ ರೆಮ್​ಡೆಸಿವರ್ ಔಷಧಿ ತಯಾರಿಸುತ್ತಿದೆ.

ಸದ್ಯ ಎಲ್ಲೆಲ್ಲು ಅಕ್ಸಿಜನ್ ಹಾಗೂ ರೆಮ್​ಡೆಸಿವರ್ ಔಷಧಿಯದ್ದೇ ವಿಚಾರ ಚರ್ಚೆಯಲ್ಲಿದೆ.‌ ಅದರಲ್ಲೂ ರೆಮಿಡಿಸಿವಿಯರ್​ ಕಾಳಸಂತೆಯಲ್ಲಿ ಮಾರಾಟವಾಗುವಷ್ಟು ಬೇಡಿಕೆ ಹೆಚ್ಚಾಗಿದೆ.‌ ಇಂತಹ ರೆಮ್​ಡೆಸಿವರ್ ಔಷಧಿಯನ್ನು ಉತ್ಪಾದನೆ ಮಾಡುವಲ್ಲಿ ಜುಬಿಲಿಯಂಟ್ ಕಾರ್ಖಾನೆ‌ ಮುಂಚೂಣಿಯಲ್ಲಿದೆ. ಅದರಲ್ಲು ಮೈಸೂರಿನಲ್ಲಿರುವ ಕಾರ್ಖಾನೆ ಔಷಧಿಗೆ ಬೇಕಾಗುವ ಕಚ್ಛ ಪದಾರ್ಥಗಳನ್ನು ಉತ್ಪಾದನೆ ಮಾಡುತ್ತಿದೆ.

ಈ ಕಾರಣಕ್ಕೆ‌ ಇಂದು‌ ಮೈಸೂರು ಜಿಲ್ಲಾಡಳಿತ ಕಾರ್ಖಾನೆಗೆ ಭೇಟಿ ನೀಡಿ ಮೈಸೂರಿಗೆ ರೆಮ್​ಡೆಸಿವರ್ ಸರಬರಾಜು ಮಾಡುವಂತೆ ಮನವಿ ಮಾಡಿಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಹರ್ಷವರ್ಧನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಕಾರ್ಖಾನೆ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ವೇಳೆ ಮೈಸೂರಿಗೆ 5000 ವೈಯಲ್ ಲಸಿಕೆ ಕೊಡುವಂತೆ ಮನವಿ ಮಾಡಿದ್ದಾರೆ. ಇದಕ್ಕಾಗಿ ಜಿಲ್ಲಾಡಳಿತದಿಂದಲು ಮನವಿ ಪತ್ರ ಕೊಡಲಾಗುವುದು‌ ಎಂದು ತಿಳಿಸಿದ್ದಾರೆ. ಅದಷ್ಟೇ ಅಲ್ಲದೆ ಕಳೆದ ಬಾರಿ ನಡೆದ ಅನಾಹುತದಲ್ಲಿ ಜಿಲ್ಲಾಡಳಿತ ಕಾರ್ಖಾನೆ ಪರವಾಗಿ ನಿಂತಿತ್ತು, ಇದೀಗಾ ಅದರ ಕೃತಜ್ಞತೆಗಲ್ಲದಿದ್ದರು ಮನವಿಯತೆ ದೃಷ್ಟಿಯಿಂದಾದರು ಮೈಸೂರಿಗೆ ಔಷಧಿ‌ಕೊಡುವಂತೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.

ಒಟ್ಟಾರೆ, ಕಳೆದ ವರ್ಷ ಮೈಸೂರಿಗೆ ಕಂಟಕವಾಗಿದ್ದ ಕಾರ್ಖಾನೆ ಇದೀಗ ಜೀವರಕ್ಷಕವಾಗಿರೋದಂತು ಸತ್ಯ. ‌ಮೈಸೂರಿನ ಜಿಲ್ಲಾಡಳಿತದ ಮನವಿಗೆ ಕಾರ್ಖಾನೆ ಆಡಳಿತ ಮಂಡಳಿ ಸ್ಪಂದಿಸುತ್ತ ಎನ್ನುವುದನ್ನು ಕಾದು ಕಾದುನೋಡಬೇಕಿದೆ.

ಇದನ್ನೂ ಓದಿ:

ಗಂಭೀರ ಸೋಂಕಿತರಿಗೆ ಬೆಡ್‌ ಒದಗಿಸುವ ಉದ್ದೇಶದಿಂದ ಸ್ಟೆಪ್​​ಡೌನ್ ಆಸ್ಪತ್ರೆಗಳನ್ನು ಹೆಚ್ಚಿಸಲು ಕ್ರಮ: ಡಾ.ಅಶ್ವತ್ಥನಾರಾಯಣ

ರಾಜ್ಯದಲ್ಲಿ ರೆಮ್​ಡೆಸಿವಿರ್ ಇಂಜೆಕ್ಷನ್ ಅಭಾವ ಹೆಚ್ಚಳ; ಅವಧಿ ಮುಗಿದ ಇಂಜೆಕ್ಷನ್ ಮರುಬಳಕೆಗೆ ಅನುಮತಿ ನೀಡಿದ ಸರ್ಕಾರ