ಮೈಸೂರು: ಚೆಕ್ ದುರುಪಯೋಗ ಆರೋಪ: ಆರೋಗ್ಯಾಧಿಕಾರಿ ಸೇರಿ ಇಬ್ಬರ ವಿರುದ್ಧ ದೂರು

| Updated By: ಗಂಗಾಧರ​ ಬ. ಸಾಬೋಜಿ

Updated on: May 16, 2024 | 8:36 AM

ವ್ಯವಹಾರದ ನಿಮಿತ್ತ ಭದ್ರತೆಗಾಗಿ ನೀಡಿದ್ದ 4.5 ಲಕ್ಷ ರೂ. ಚೆಕ್​ ಅನ್ನು ಬೌನ್ಸ್​​ಗೆ ಯತ್ನಿಸಿದ ಹಿನ್ನಲೆ ಪಾಲಿಕೆ ಹಿರಿಯ ಆರೋಗ್ಯಾಧಿಕಾರಿ ವೆಂಕಟೇಶ್ ಹಾಗೂ ಹಾಸನ ನಿವಾಸಿ ಕೇಶವಮೂರ್ತಿ ಎಂಬುವರಿಂದ ವಂಚನೆ ಮಾಡಿದ್ದು, ಸರಸ್ವತಿಪುರಂ ನಿವಾಸಿ ಮೀರಾ ಎಂಬುವವರಿಂದ ದೂರು ನೀಡಲಾಗಿದೆ. ಇಬ್ಬರ ವಿರುದ್ಧ ವಂಚನೆ ಕೇಸ್​ ದಾಖಲಿಸುವಂತೆ ಮೈಸೂರಿನ ಜೆಎಂಎಫ್​ಸಿ ನ್ಯಾಯಾಲಯದಿಂದ ಆದೇಶ ನೀಡಲಾಗಿದೆ.

ಮೈಸೂರು: ಚೆಕ್ ದುರುಪಯೋಗ ಆರೋಪ: ಆರೋಗ್ಯಾಧಿಕಾರಿ ಸೇರಿ ಇಬ್ಬರ ವಿರುದ್ಧ ದೂರು
ಮೈಸೂರು: ಚೆಕ್ ದುರುಪಯೋಗ ಆರೋಪ: ಆರೋಗ್ಯಾಧಿಕಾರಿ ಸೇರಿ ಇಬ್ಬರ ವಿರುದ್ಧ ದೂರು
Follow us on

ಮೈಸೂರು, ಮೇ 16: ವ್ಯವಹಾರದ ನಿಮಿತ್ತ ಭದ್ರತೆಗಾಗಿ ನೀಡಿದ್ದ 4.5 ಲಕ್ಷ ರೂ. ಚೆಕ್ (Check)​​ ದುರುಪಯೋಗ ಆರೋಪ ಕೇಳಿಬಂದ ಹಿನ್ನೆಲೆ ಪಾಲಿಕೆ ಆರೋಗ್ಯಾಧಿಕಾರಿ ವಿರುದ್ಧ ಮೈಸೂರಿನ (Mysuru) ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯವಹಾರದ ನಿಮಿತ್ತ ನೀಡಿದ್ದ ಚೆಕ್​ನಲ್ಲಿ 4.5 ಲಕ್ಷ ರೂ. ನಮೂದಿಸಿಕೊಂಡು ಬೌನ್ಸ್​​ಗೆ ಯತ್ನಿಸಲಾಗಿದೆ. ಪಾಲಿಕೆ ಹಿರಿಯ ಆರೋಗ್ಯಾಧಿಕಾರಿ ವೆಂಕಟೇಶ್ ಹಾಗೂ ಹಾಸನ ನಿವಾಸಿ ಕೇಶವಮೂರ್ತಿ ಎಂಬುವರಿಂದ ವಂಚನೆ ಮಾಡಿದ್ದು, ಸರಸ್ವತಿಪುರಂ ನಿವಾಸಿ ಮೀರಾ ಎಂಬುವವರಿಂದ ದೂರು ನೀಡಲಾಗಿದೆ.

ಸದ್ಯ ಇಬ್ಬರ ವಿರುದ್ಧ ವಂಚನೆ ಕೇಸ್​ ದಾಖಲಿಸುವಂತೆ ಮೈಸೂರಿನ ಜೆಎಂಎಫ್​ಸಿ ನ್ಯಾಯಾಲಯದಿಂದ ಸರಸ್ವತಿಪುರಂ ಠಾಣಾ ಪೊಲೀಸರಿಗೆ ಆದೇಶ ನೀಡಲಾಗಿದೆ. ದೂರು ನೀಡಿರುವ ಮೀರಾ ಎಂಬುವವರು ಸರಸ್ವತಿಪುರಂನಲ್ಲಿ ಅನ್ನಪೂರ್ಣ ಆಫ್ ಸೆಟ್ ಮುದ್ರಣಾಲಯ ಇಟ್ಟುಕೊಂಡಿದ್ದಾರೆ.

ಸರಣಿ ಅಪಘಾತ: ಬೈಕ್​ ಸವಾರ ಸಾವು

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಲ್ಲಹಳ್ಳಿ ಗೇಟ್ ಬಳಿ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಬಸ್​​ ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.

ಇದನ್ನೂ ಓದಿ: ಸರ್ಕಾರಿ ಕೆಲಸ ಕೊಡಿಸುವುದಾಗಿ ಸಿಐಡಿ ಅಧಿಕಾರಿಗಳಿಂದಲೇ 40 ಲಕ್ಷ ರೂ. ವಂಚನೆ: ಕಾಂಗ್ರೆಸ್​ನ ಪಾಲು ಎಷ್ಟು ಎಂದ ಬಿಜೆಪಿ

ಬಸ್ ಹಿಂದೆ ಬರುತ್ತಿದ್ದ 2 ಕಾರು, ಮತ್ತೊಂದು ಬಸ್​ ಡಿಕ್ಕಿ ಹೊಡೆದಿದೆ. ಹಲವರಿಗೆ ಗಾಯಗಳಾಗಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಡುಕರ ಅಡ್ಡೆಯಾದ ಕನ್ನಡ ಸಾಹಿತ್ಯ ಭವನ ಆವರಣ

ಕೊಪ್ಪಳ: ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿರುವ ಸಾಹಿತ್ಯ ಭವನ ಇದೀಗ ಕುಡುಕರ ಅಡ್ಡೆಯಾಗಿದೆ. ಪ್ರತಿನಿತ್ಯ ರಾತ್ರಿ ಪಾರ್ಟಿ ಮಾಡುತ್ತಿರುವ ಕುಡುಕರು. ಕುಡಿದು, ಬಾಟಲ್​ಗಳಿಂದ ಕಿಡಕಿ ಗಾಜುಗಳನ್ನು ಒಡೆದು ಹೋಗುತ್ತಿರು ದುಷ್ಕರ್ಮಿಗಳು.

ಇದನ್ನೂ ಓದಿ: ಮೈಸೂರು ಸರ್ಕಾರಿ ಆಸ್ಪತ್ರೆಯಲ್ಲಿ ನೀರು, ವಿದ್ಯುತ್ ಸಮಸ್ಯೆ; ಸರಿಯಾದ ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ

ಈ ಬಗ್ಗೆ ಅನೇಕ ಬಾರಿ ಪೊಲೀಸರಿಗೆ ವಾಯು ವಿಹಾರಿಗಳು ದೂರು ನೀಡಿದ್ದಾರೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.